Petrol Price on October 22: ದೀಪಾವಳಿ ಹಬ್ಬದ ವೇಳೆ ಏರಿಕೆಯಾಗುತ್ತಾ ಪೆಟ್ರೋಲ್ ಬೆಲೆ?; ಇಂದಿನ ಡೀಸೆಲ್ ದರ ಹೀಗಿದೆ

Fule Price Today: ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.31 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ಚೆನ್ನೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 102.63 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 94.24 ರೂ. ಇದೆ. ಭಾರತದ ಇಂಧನ ಮಾರಾಟವು ಅಕ್ಟೋಬರ್‌ನ ಆರಂಭದಲ್ಲಿ ಹೆಚ್ಚಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 22-26ರಷ್ಟು ಹೆಚ್ಚುತ್ತಿದೆ. ಅಕ್ಟೋಬರ್ ಮೊದಲಾರ್ಧದಲ್ಲಿ ತಿಂಗಳಿನಿಂದ ತಿಂಗಳಿಗೆ ಇಂಧನದ ಬೆಲೆ ಏರಿಕೆಯಾಗಿದೆ.

Petrol Price on October 22: ದೀಪಾವಳಿ ಹಬ್ಬದ ವೇಳೆ ಏರಿಕೆಯಾಗುತ್ತಾ ಪೆಟ್ರೋಲ್ ಬೆಲೆ?; ಇಂದಿನ ಡೀಸೆಲ್ ದರ ಹೀಗಿದೆ
ಪೆಟ್ರೋಲ್ ಬೆಲೆ
Edited By:

Updated on: Apr 05, 2026 | 10:24 AM

Fuel Price on October 22: ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಳಿತವಾಗುತ್ತಿದೆ. ಆದರೆ ಭಾರತದಲ್ಲಿ ಇಂದು ಕೂಡ ಪೆಟ್ರೋಲ್ (Petrol Rate) ಮತ್ತು ಡೀಸೆಲ್ ಬೆಲೆ (Diesel Price) ಯಥಾಸ್ಥಿತಿಯಲ್ಲಿದೆ. ಒಪೆಕ್ ರಾಷ್ಟ್ರಗಳು ಉತ್ಪಾದನೆಯನ್ನು ಕಡಿತಗೊಳಿಸಿದ್ದರೂ ಇಂಧನದ (Fuel Price Today) ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಭಾರತದ ಪ್ರಮುಖ ನಗರದಲ್ಲಿನ ಇಂದಿನ (ಅ. 22) ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೀಗಿವೆ.

ಕಳೆದ ಒಂದು ವಾರದಲ್ಲಿ ಕಚ್ಚಾ ತೈಲದ ಬೆಲೆ ಶೇ.4ಕ್ಕೂ ಹೆಚ್ಚು ಇಳಿಕೆ ಕಂಡಿತ್ತು. ಆದರೆ, ಇದೀಗ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.72 ರೂ. ಇದ್ದು, ಡೀಸೆಲ್ ದರ ಲೀಟರ್‌ಗೆ 89.62 ರೂ. ಇದೆ. ಕಳೆದ 5 ತಿಂಗಳಿಂದ ರಾಷ್ಟ್ರ ರಾಜಧಾನಿ ನವದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನದ ದರ ಒಂದೇ ರೀತಿಯಲ್ಲಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ 1 ಲೀಟರ್​ಗೆ 101.94 ರೂ, ಡೀಸೆಲ್​ಗೆ 87.89 ರೂ. ಇದೆ. ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 96.72 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ಕೋಲ್ಕತ್ತಾದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.03 ರೂ., 1 ಲೀಟರ್ ಡೀಸೆಲ್ ಲೀಟರ್‌ಗೆ 92.76 ರೂ. ಇದೆ. ಹೈದರಾಬಾದ್​​ನಲ್ಲಿ ಪೆಟ್ರೋಲ್ ಬೆಲೆ 1 ಲೀಟರ್​ಗೆ 109.66 ರೂ., ಡೀಸೆಲ್ ಬೆಲೆ 1 ಲೀಟರ್​ಗೆ 97.82 ರೂ. ಇದೆ.

ಇದನ್ನೂ ಓದಿ: ಒಪೆಕ್ ಪ್ಲಸ್​​ನಿಂದ ಕಚ್ಚಾ ತೈಲ ಉತ್ಪಾದನೆ ಕಡಿತ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.31 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ಚೆನ್ನೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 102.63 ರೂ., 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 94.24 ರೂ. ಇದೆ. ತಿರುವನಂತಪುರಂನಲ್ಲಿ ಪೆಟ್ರೋಲ್ ಬೆಲೆ 107.71 ರೂ., ಡೀಸೆಲ್ ಬೆಲೆ 96.52 ರೂ. ಇದೆ.

ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರವನ್ನು ನಿಗದಿಪಡಿಸುತ್ತವೆ. ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಅನ್ನು ಕಳುಹಿಸಬಹುದು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಹೆಚ್ಚಾಗಿ ಡಾಲರ್ ದರದಿಂದ ಪ್ರಭಾವಿತವಾಗಿರುತ್ತದೆ. ಡಾಲರ್ ದುಬಾರಿಯಾಗಿದ್ದರೆ, ಕಚ್ಚಾ ತೈಲವನ್ನು ಖರೀದಿಸುವುದು ಹೆಚ್ಚು ದುಬಾರಿಯಾಗಬಹುದು ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜನರು ಪಾವತಿಸುವ ಅರ್ಧಕ್ಕಿಂತ ಹೆಚ್ಚು ಹಣವು ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಂದ ತೆರಿಗೆ ರೂಪದಲ್ಲಿದೆ. ಜನರಿಂದ ಪೆಟ್ರೋಲ್ ಮೇಲೆ ಶೇ.55.5 ಮತ್ತು ಡೀಸೆಲ್ ಮೇಲೆ ಶೇ.47.3 ತೆರಿಗೆ ಸಂಗ್ರಹವಾಗಿದೆ ಎನ್ನಲಾಗಿದೆ.

ಭಾರತದ ಇಂಧನ ಮಾರಾಟವು ಅಕ್ಟೋಬರ್‌ನ ಆರಂಭದಲ್ಲಿ ಹೆಚ್ಚಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 22-26ರಷ್ಟು ಹೆಚ್ಚುತ್ತಿದೆ. ಅಕ್ಟೋಬರ್ ಮೊದಲಾರ್ಧದಲ್ಲಿ ತಿಂಗಳಿನಿಂದ ತಿಂಗಳಿಗೆ ಇಂಧನದ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.05 ಮಿಲಿಯನ್ ಟನ್ ಬಳಕೆಗೆ ಹೋಲಿಸಿದರೆ ಅಕ್ಟೋಬರ್ 1ರಿಂದ 15ರ ಅವಧಿಯಲ್ಲಿ ಪೆಟ್ರೋಲ್ ಮಾರಾಟವು ಶೇ. 22.7ರಷ್ಟು ಏರಿಕೆಯಾಗಿ 1.28 ಮಿಲಿಯನ್ ಟನ್‌ಗಳಿಗೆ ತಲುಪಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 am, Sat, 22 October 22

Follow Us