AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price on October 18: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

Fuel Price Today: ಬೆಂಗಳೂರಿನಲ್ಲಿ ಪೆಟ್ರೋಲ್ ದರ 1 ಲೀಟರ್​ಗೆ 101.94 ರೂ, ಡೀಸೆಲ್​ಗೆ 87.89ರೂ. ಇದೆ. ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.31 ರೂ. ಆದರೆ 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 94.27 ರೂ. ಇದೆ.

Petrol Price on October 18: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?
ಪೆಟ್ರೋಲ್ ಬೆಲೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 18, 2022 | 8:29 AM

ನವದೆಹಲಿ: ಇಂದು ಕೂಡ ಭಾರತದ ಮೆಟ್ರೋ ಸಿಟಿಗಳಲ್ಲಿ ಪೆಟ್ರೋಲ್ (Petrol Rate) ಮತ್ತು ಡೀಸೆಲ್ ಬೆಲೆಯಲ್ಲಿ (Diesel Price) ಯಾವುದೇ ಬದಲಾವಣೆಯಾಗಿಲ್ಲ. ಭಾರತವು 2030ರ ವೇಳೆಗೆ ಪಳೆಯುಳಿಕೆ ರಹಿತ ಇಂಧನಗಳಿಂದ ಇನ್ನೂ ಶೇ. 65ಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲಿದೆ ಎಂದು ಕೇಂದ್ರ ಸಚಿವ ಆರ್‌ಕೆ ಸಿಂಗ್ ಸೋಮವಾರ ಹೇಳಿದ್ದಾರೆ. ಕಳೆದ ಒಂದು ವಾರದಲ್ಲಿ ಕಚ್ಚಾ ತೈಲ ಬೆಲೆ ಶೇ.4ಕ್ಕೂ ಹೆಚ್ಚು ಇಳಿಕೆ ಕಂಡಿತ್ತು. ಆದರೆ, ಇಂದು ಅಂದರೆ ಶುಕ್ರವಾರ ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿದೆ. ಭಾರತದ ಪ್ರಮುಖ ನಗರದಲ್ಲಿನ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳು (Fuel Price Today) ಹೀಗಿವೆ.

ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರವನ್ನು ನಿಗದಿಪಡಿಸುತ್ತವೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.72 ರೂ. ಇದ್ದು, ಡೀಸೆಲ್ ದರ ಲೀಟರ್‌ಗೆ 89.62 ರೂ. ಇದೆ. ಕಳೆದ 5 ತಿಂಗಳಿಂದ ರಾಷ್ಟ್ರ ರಾಜಧಾನಿ ನವದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಇದನ್ನೂ ಓದಿ: ಒಪೆಕ್ ಪ್ಲಸ್​​ನಿಂದ ಕಚ್ಚಾ ತೈಲ ಉತ್ಪಾದನೆ ಕಡಿತ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ಬೆಂಗಳೂರಿನಲ್ಲಿ ಪೆಟ್ರೋಲ್ ದರ 1 ಲೀಟರ್​ಗೆ 101.94 ರೂ, ಡೀಸೆಲ್​ಗೆ 87.89ರೂ. ಇದೆ. ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 96.72 ರೂ. ಅದೇ ಸಮಯದಲ್ಲಿ, 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ಕೋಲ್ಕತ್ತಾದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.03 ರೂ. ಅದೇ ಸಮಯದಲ್ಲಿ, 1 ಲೀಟರ್ ಡೀಸೆಲ್ ಲೀಟರ್‌ಗೆ 92.76 ರೂ. ಇದೆ.

ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 106.31 ರೂ. ಆದರೆ 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 94.27 ರೂ. ಇದೆ. ಚೆನ್ನೈನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 102.63 ರೂ. ಅದೇ ಸಮಯದಲ್ಲಿ, 1 ಲೀಟರ್ ಡೀಸೆಲ್ ಪ್ರತಿ ಲೀಟರ್‌ಗೆ 94.24 ರೂ. ಇದೆ.

ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಅನ್ನು ಕಳುಹಿಸಬಹುದು.

ಇದನ್ನೂ ಓದಿ: Petrol Price Today: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆ; ಭಾರತದಲ್ಲೇಕೆ ಇನ್ನೂ ಕಡಿಮೆಯಾಗುತ್ತಿಲ್ಲ ಪೆಟ್ರೋಲ್-ಡೀಸೆಲ್ ದರ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಹೆಚ್ಚಾಗಿ ಡಾಲರ್ ದರದಿಂದ ಪ್ರಭಾವಿತವಾಗಿರುತ್ತದೆ. ಡಾಲರ್ ದುಬಾರಿಯಾಗಿದ್ದರೆ, ಕಚ್ಚಾ ತೈಲವನ್ನು ಖರೀದಿಸುವುದು ಹೆಚ್ಚು ದುಬಾರಿಯಾಗಬಹುದು ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತದೆ. ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜನರು ಪಾವತಿಸುವ ಅರ್ಧಕ್ಕಿಂತ ಹೆಚ್ಚು ಹಣವು ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಂದ ತೆರಿಗೆ ರೂಪದಲ್ಲಿದೆ. ಜನರಿಂದ ಪೆಟ್ರೋಲ್ ಮೇಲೆ ಶೇ.55.5 ಮತ್ತು ಡೀಸೆಲ್ ಮೇಲೆ ಶೇ.47.3 ತೆರಿಗೆ ಸಂಗ್ರಹವಾಗಿದೆ ಎನ್ನಲಾಗಿದೆ.

ಭಾರತದ ಇಂಧನ ಮಾರಾಟವು ಅಕ್ಟೋಬರ್‌ನ ಆರಂಭದಲ್ಲಿ ಹೆಚ್ಚಾಗಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಂಧನದ ಬೇಡಿಕೆಯಲ್ಲಿ ಭಾರೀ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 22-26ರಷ್ಟು ಹೆಚ್ಚುತ್ತಿದೆ. ಅಕ್ಟೋಬರ್ ಮೊದಲಾರ್ಧದಲ್ಲಿ ತಿಂಗಳಿನಿಂದ ತಿಂಗಳಿಗೆ ಇಂಧನದ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.05 ಮಿಲಿಯನ್ ಟನ್ ಬಳಕೆಗೆ ಹೋಲಿಸಿದರೆ ಅಕ್ಟೋಬರ್ 1-15 ರ ಅವಧಿಯಲ್ಲಿ ಪೆಟ್ರೋಲ್ ಮಾರಾಟವು ಶೇ. 22.7 ರಷ್ಟು ಏರಿಕೆಯಾಗಿ 1.28 ಮಿಲಿಯನ್ ಟನ್‌ಗಳಿಗೆ ತಲುಪಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ