ಒಪೆಕ್ ಪ್ಲಸ್​​ನಿಂದ ಕಚ್ಚಾ ತೈಲ ಉತ್ಪಾದನೆ ಕಡಿತ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ಉಕ್ರೇನ್ ಯುದ್ಧದ ಪೂರ್ವದ ಮಟ್ಟಕ್ಕೆ ಇಳಿದ ತೈಲ ಬೆಲೆಯಲ್ಲಿ ಚೇತರಿಕೆಯನ್ನು ಉತ್ತೇಜಿಸಲು ವಿಶ್ವದ ಕೆಲವು ಉನ್ನತ ತೈಲ ಉತ್ಪಾದಿಸುವ ದೇಶಗಳು ದಿನಕ್ಕೆ ಎರಡು ಮಿಲಿಯನ್ ಬ್ಯಾರೆಲ್‌ಗಳ ಉತ್ಪಾದನೆಯನ್ನು ಕಡಿತಗೊಳಿಸಲು...

ಒಪೆಕ್ ಪ್ಲಸ್​​ನಿಂದ ಕಚ್ಚಾ ತೈಲ ಉತ್ಪಾದನೆ ಕಡಿತ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 07, 2022 | 12:00 PM

ವಿಶ್ವದ ಕಚ್ಚಾತೈಲ ರಫ್ತುದಾರ ರಾಷ್ಟ್ರಗಳು ಹಾಗೂ ಅವುಗಳ ಮಿತ್ರ ರಾಷ್ಟ್ರಗಳ ಒಕ್ಕೂಟ ಒಪೆಕ್ ಪ್ಲಸ್  (OPEC+) ಕಚ್ಚಾ ತೈಲ ಉತ್ಪಾದನಾ ಕಡಿತಕ್ಕೆ ನಿರ್ಧರಿಸಿದ್ದು ಅಂತರರಾಷ್ಟ್ರೀಯ ತೈಲ ಬೆಲೆಗಳು ಏರಿಕೆಯಾದ ನಂತರ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಉಕ್ರೇನ್ ಯುದ್ಧದ ಪೂರ್ವದ ಮಟ್ಟಕ್ಕೆ ಇಳಿದ ತೈಲ ಬೆಲೆಯಲ್ಲಿ ಚೇತರಿಕೆಯನ್ನು ಉತ್ತೇಜಿಸಲು ವಿಶ್ವದ ಕೆಲವು ಉನ್ನತ ತೈಲ ಉತ್ಪಾದಿಸುವ ದೇಶಗಳು ದಿನಕ್ಕೆ ಎರಡು ಮಿಲಿಯನ್ ಬ್ಯಾರೆಲ್‌ಗಳ ಉತ್ಪಾದನೆಯನ್ನು ಕಡಿತಗೊಳಿಸಲು ಬುಧವಾರ ಒಪ್ಪಿಕೊಂಡಿವೆ. ಭಾರತದಲ್ಲಿ ಇತ್ತೀಚಿನ ವಾರಗಳಲ್ಲಿ ತೈಲ ಬೆಲೆಗಳ ಕುಸಿತವು ತನ್ನ ಆಮದು ಬಿಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಅದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಅನುಭವಿಸುತ್ತಿರುವ ನಷ್ಟವನ್ನು ಮಿತಿಗೊಳಿಸಿದೆ. ಈ ಹೊತ್ತಲ್ಲಿ ಒಪೆಕ್ ನಿರ್ಧಾರ ಭಾರತದ ಮೇಲೆ ಪರಿಣಾಮ ಬೀರಲಿದೆ.

ಒಪೆಕ್ + ನಿರ್ಧಾರಕ್ಕೆ ಮುಂಚಿತವಾಗಿ, ಡೀಸೆಲ್‌ನ ನಷ್ಟವು ಲೀಟರ್‌ಗೆ ₹ 30 ರ ಗರಿಷ್ಠ ಮಟ್ಟದಿಂದ ₹ 5 ಕ್ಕೆ ಇಳಿದಿದ್ದು ತೈಲ ಕಂಪನಿಗಳು ಪೆಟ್ರೋಲ್‌ನಲ್ಲಿ ಸಣ್ಣ ಲಾಭವನ್ನು ಗಳಿಸಲು ಪ್ರಾರಂಭಿಸಿದವು ಎಂದು ಉದ್ಯಮದ ಮೂಲಗಳು ತಿಳಿಸಿವೆ. ಆದರೆ ಪೆಟ್ರೋಲ್, ಡೀಸೆಲ್ ಮತ್ತು ಇತರ ಉತ್ಪನ್ನಗಳನ್ನು ಉತ್ಪಾದಿಸಲು ಸಂಸ್ಕರಿಸಿದ ಕಚ್ಚಾ ತೈಲದ ಬೆಲೆಗಳ ಏರಿಕೆ ಮತ್ತು ಯುಎಸ್ ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಳ್ಳುವುದರಿಂದ ಡೀಸೆಲ್ ಮೇಲಿನ ನಷ್ಟವು ಹೆಚ್ಚಾಗುತ್ತದೆ. ಪೆಟ್ರೋಲ್ ಬೆಲೆ ಏರಿಕೆಯೂ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತವು ತನ್ನ ತೈಲ ಅಗತ್ಯಗಳಲ್ಲಿ ಶೇ 85 ಆಮದು ಮಾಡಿಕೊಳ್ಳುತ್ತದೆ. ಅಂತರರಾಷ್ಟ್ರೀಯ ತೈಲ ಬೆಲೆಗಳು ನೇರವಾಗಿ ದೇಶೀಯ ಬೆಲೆಗಳನ್ನು ನಿರ್ದೇಶಿಸುತ್ತವೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಆರು ತಿಂಗಳವರೆಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟದ ಬೆಲೆಯನ್ನು ಅಂತರರಾಷ್ಟ್ರೀಯ ವೆಚ್ಚಗಳಿಗೆ ಅನುಗುಣವಾಗಿ ಬದಲಾಯಿಸಿವೆ.

ಮೇ/ಜೂನ್ ಅವಧಿಯಲ್ಲಿ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ ಸುಮಾರು $120 ರ ಗರಿಷ್ಠ ಮಟ್ಟಕ್ಕೆ ಏರಿದ ಕಾರಣ ಈ ಬೆಲೆ ಏರಿಕೆ ಇಂಧನ ಮಾರಾಟದ ಮೇಲೆ ನಷ್ಟವನ್ನು ಕಾಯ್ದಿರಿಸಲು ಕಾರಣವಾಯಿತು. ಸೆಪ್ಟೆಂಬರ್ 27 ರಂದು ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬಾಸ್ಕೆಟ್ ಪ್ರತಿ ಬ್ಯಾರೆಲ್‌ಗೆ $ 84.75 ಕ್ಕೆ ಇಳಿದಿದೆ. ಆದರೆ OPEC + ನಿರ್ಧಾರದ ನಂತರ ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಏರಿಕೆಯು ಅಕ್ಟೋಬರ್ 5 ರಂದು $ 92.17 ಕ್ಕೆ ಏರಲು ಕಾರಣವಾಯಿತು.

IOC, BPCL ಮತ್ತು HPCL ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಯನ್ನು ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು. ಆ ಏರಿಕೆ ಈ ವರ್ಷದ ಮಾರ್ಚ್ 22 ರಂದು ಕೊನೆಗೊಂಡಿತು. ಏಪ್ರಿಲ್ 7 ರಿಂದ ಹೊಸ ಪರಿಷ್ಕರಣೆ ಜಾರಿಗೆ ಬರುವ ಮೊದಲು ಕೇವಲ ಹದಿನೈದು ದಿನಗಳಲ್ಲಿ ಪ್ರತಿ ಲೀಟರ್‌ಗೆ ₹10 ರಷ್ಟು ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ದರ ಲೀಟರ್‌ಗೆ ₹96.72 ಮತ್ತು ಡೀಸೆಲ್ ₹89.62 ಆಗಿದೆ. ಸರ್ಕಾರವು ಅಬಕಾರಿ ಸುಂಕವನ್ನು ಕೂಲ್ ದರಗಳಿಗೆ ಕಡಿತಗೊಳಿಸಿದ್ದರಿಂದ ಇದು ಏಪ್ರಿಲ್ 6 ರಂದು ಪೆಟ್ರೋಲ್‌ಗೆ ಲೀಟರ್‌ಗೆ ₹105.41 ಮತ್ತು ಡೀಸೆಲ್‌ಗೆ ₹96.67 ರಿಂದ ಕಡಿಮೆಯಾಗಿದೆ.

ಮಾರ್ಚ್ 22 ರಿಂದ ಏಪ್ರಿಲ್ 6 ರ ನಡುವೆ ಜಾರಿಗೆ ಬಂದಿರುವ ಲೀಟರ್‌ಗೆ ₹ 10 ಹೆಚ್ಚಳವು ವೆಚ್ಚವನ್ನು ಸರಿದೂಗಿಸಲು ಸಾಕಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಬಹು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದ ಹಣದುಬ್ಬರವನ್ನು ನಿರ್ವಹಿಸಲು ಸರ್ಕಾರಕ್ಕೆ ಸಹಾಯ ಮಾಡಲು ತೈಲ ಕಂಪನಿಗಳು ದರಗಳನ್ನು ಪರಿಷ್ಕರಿಸಲಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ವೆಚ್ಚಕ್ಕೆ ಅನುಗುಣವಾಗಿ ಹೆಚ್ಚಿಸಿದರೆ ಅದು ಮತ್ತಷ್ಟು ಏರಿಕೆಯಾಗುತ್ತಿತ್ತು.

ಏತನ್ಮಧ್ಯೆ, ಬೆಲೆ ನಿರ್ಧಾರಗಳನ್ನು ತೈಲ ಕಂಪನಿಗಳು ತೆಗೆದುಕೊಳ್ಳುತ್ತವೆ ಎಂದು ಸರ್ಕಾರ ಹೇಳಿದೆ. ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳನ್ನು ಬೆಲೆಗಳನ್ನು ಹೆಚ್ಚಿಸದ ಕಾರಣಕ್ಕಾಗಿ “ಉತ್ತಮ ಕಾರ್ಪೊರೇಟ್ ನಾಗರಿಕರು” ಎಂದು ಬಣ್ಣಿಸಿದ್ದಾರೆ. ಫೆಬ್ರವರಿ 24 ರಂದು ಉಕ್ರೇನ್‌ನ ರಷ್ಯಾದ ಆಕ್ರಮಣವು ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೆ ಹೊಡೆತ ನೀಡಿತು. ಜಾಗತಿಕ ಸಮುದಾಯವು ರಷ್ಯಾದ ಪ್ರಮುಖ ರಫ್ತುಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರಿಂದ ಆರಂಭಿಕ ಬೆಲೆ ಏರಿಕೆಗಳು ನಿರಂತರ ಬೆಲೆ ಏರಿಕೆಯಾಗಿ ಮಾರ್ಪಟ್ಟವು. ದಾಳಿ ಮೊದಲು ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ $90.21 ಇತ್ತು. ನಂತರ ಅದು 14 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿತು.

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು