AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಇಂದು ಇಂಧನ ದರ ಸ್ಥಿರ; ಎಷ್ಟಿದೆ ಲೀಟರ್​ ಪೆಟ್ರೋಲ್​ ಬೆಲೆ? ಇಲ್ಲಿದೆ ಮಾಹಿತಿ

Petrol Rate Today, 08-11-2021: ಇಂದು ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಪೆಟ್ರೋಲ್​, ಡೀಸೆಲ್​ ಬೆಲೆ ಸ್ಥಿರವಾಗಿದೆ. ನಿಮ್ಮೂರಿನಲ್ಲಿ ಲೀಟರ್ ಪೆಟ್ರೋಲ್​ ಬೆಲೆ ಎಷ್ಟಿದೆ? ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

Petrol Price Today: ಇಂದು ಇಂಧನ ದರ ಸ್ಥಿರ; ಎಷ್ಟಿದೆ ಲೀಟರ್​ ಪೆಟ್ರೋಲ್​ ಬೆಲೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Nov 09, 2021 | 7:59 AM

Share

Petrol Diesel Price Today | ದೆಹಲಿ: ನಿನ್ನೆ ಕೂಡಾ ಪಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿರಲಿಲ್ಲ. ಅದೇ ರೀತಿ ಇಂದು ಸೋಮವಾರ (ನವೆಂಬರ್ 8) ಪೆಟ್ರೋಲ್ (Petrol Price), ಡೀಸೆಲ್ ಬೆಲೆ (Diesel Price) ಸ್ಥಿರತೆ ಕಾಯ್ದುಕೊಂಡಿದೆ. ಪ್ರಮುಕ ಎಲ್ಲಾ ಮಹಾನಗರಗಳಲ್ಲಿಯೂ ಸಹ ಇಂದು ಇಂಧನ ದರದಲ್ಲಿ (Fuel Price) ಯಾವುದೇ ಬದಲಾವಣೆಗಳಾಗಿಲ್ಲ. ನಿಮ್ಮೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟಿದೆ? ಈ ಕುರಿತಾದ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 103.97 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.67 ರೂಪಾಯಿ ನಿಗದಿಯಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.14 ರೂಪಾಯಿ ನಿಗದಿಯಾಗಿದೆ. ಇನ್ನು, ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.40 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.43 ರೂಪಾಯಿ ನಿಗದಿಯಾಗಿದೆ.

ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 104.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.79 ರೂಪಾಯಿ ನಿಗದಿಯಾಗಿದೆ. ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ದರ 107.23 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.87 ರೂಪಾಯಿ ನಿಗದಿಯಾಗಿದೆ. ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ದರ 108.20 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.62 ರೂಪಾಯಿ ನಿಗದಿಯಾಗಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 85.01 ರೂಪಾಯಿ ನಿಗದಿಯಾಗಿದೆ. ಗುಹಾವಟಿಯಲ್ಲಿ ಲೀಟರ್ ಪೆಟ್ರೋಲ್ ದರ 94.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 81.29 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ಬೆಲೆ 95.28 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm

Published On - 7:49 am, Mon, 8 November 21

Follow Us
TV9 Web
TV9 Web

TV9 Kannada

Read More
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಅರಮನೆಯಿಂದಲೇ ಅಮ್ಮನ ಜೊತೆಗೆ ಆದ್ಯವೀರ್, ಯುಗಾಧ್ಯಕ್ಷ ಪೂಜೆ ವೀಕ್ಷಣೆ
ಅರಮನೆಯಿಂದಲೇ ಅಮ್ಮನ ಜೊತೆಗೆ ಆದ್ಯವೀರ್, ಯುಗಾಧ್ಯಕ್ಷ ಪೂಜೆ ವೀಕ್ಷಣೆ
ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಬಂದ ಸಿಎಂ ಹೇಳಿದ್ದೇನು ನೋಡಿ
ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಬಂದ ಸಿಎಂ ಹೇಳಿದ್ದೇನು ನೋಡಿ
ಮೈಸೂರು ದಸರಾ 2026: ಆನೆಗಳ ಮೈಮೇಲೆ ಮೂಡಿದ ಬಣ್ಣ ಬಣ್ಣದ ಚಿತ್ತಾರ
ಮೈಸೂರು ದಸರಾ 2026: ಆನೆಗಳ ಮೈಮೇಲೆ ಮೂಡಿದ ಬಣ್ಣ ಬಣ್ಣದ ಚಿತ್ತಾರ
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್