2 ಲಕ್ಷ ರೂ ವಿಮಾ ಕವರೇಜ್ ನೀಡುವ ಜೀವನ್​ಜ್ಯೋತಿ ಬಿಮಾ ಯೋಜನೆ; 21 ಕೋಟಿ ದಾಟಿದ ಫಲಾನುಭವಿಗಳ ಸಂಖ್ಯೆ

|

Updated on: Dec 15, 2024 | 8:43 PM

PM Jeevan Jyoti Yojana: ಪಿಎಂ ಜೀವನ್​ಜ್ಯೋತಿ ಬಿಮಾ ಯೋಜನೆಯಲ್ಲಿ ಇನ್ಷೂರೆನ್ಸ್ ಸೌಲಭ್ಯ ಪಡೆದವರ ಸಂಖ್ಯೆ 21 ಕೋಟಿಗೂ ಹೆಚ್ಚಿದೆ. ಅಪಘಾತ ವಿಮೆ ಸೌಲಭ್ಯ ನೀಡುವ ಪಿಎಂ ಸುರಕ್ಷಾ ಬಿಮಾ ಯೋಜನೆಯು 48 ಕೋಟಿ ಜನರನ್ನು ತಲುಪಿದೆ. ಪಿಎಂ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಖಾತೆ ತೆರೆದವರ ಸಂಖ್ಯೆ 53 ಕೋಟಿಗೂ ಹೆಚ್ಚಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

2 ಲಕ್ಷ ರೂ ವಿಮಾ ಕವರೇಜ್ ನೀಡುವ ಜೀವನ್​ಜ್ಯೋತಿ ಬಿಮಾ ಯೋಜನೆ; 21 ಕೋಟಿ ದಾಟಿದ ಫಲಾನುಭವಿಗಳ ಸಂಖ್ಯೆ
ವಿಮಾ
Follow us on

ನವದೆಹಲಿ, ಡಿಸೆಂಬರ್ 15: ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಫಲಾನುಭವಿಗಳ ಸಂಖ್ಯೆ 21 ಕೋಟಿ ಗಡಿ ದಾಟಿದೆ. ಈ ಸ್ಕೀಮ್ ಎರಡು ಲಕ್ಷ ರೂ ವಾರ್ಷಿಕ ಜೀವ ವಿಮೆ ಕವರೇಜ್ ನೀಡುತ್ತದೆ. ಹಣಕಾಸು ಸಚಿವಾಲಯ ಎಕ್ಸ್​ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಅದರ ಪ್ರಕಾರ ಪಿಎಂ ಜೆಜೆಬಿವೈ ಸ್ಕೀಮ್​ನಲ್ಲಿ ನೊಂದಾಯಿಸಿಕೊಂಡಿರುವ ಜನರ ಸಂಖ್ಯೆ 21.67 ಕೋಟಿಯಷ್ಟಿದೆ. ಈ ಸ್ಕೀಮ್​ನಲ್ಲಿ 17,211.50 ಕೋಟಿ ರೂ ಮೊತ್ತದ ಹಣ ಕ್ಲೇಮ್ ಆಗಿದೆ. ಅಕ್ಟೋಬರ್ 20ರವರೆಗಿನ ದತ್ತಾಂಶದ ಪ್ರಕಾರ ಸಲ್ಲಿಕೆಯಾಗಿರುವ ಕ್ಲೇಮ್​ಗಳ ಸಂಖ್ಯೆ 8.60 ಲಕ್ಷಕ್ಕೂ ಹೆಚ್ಚು.

ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಒಂದು ವರ್ಷದ ಲೈಫ್ ಇನ್ಷೂರೆನ್ಸ್ ಸ್ಕೀಮ್ ಆಗಿದೆ. ಯಾವುದೇ ಕಾರಣಕ್ಕೆ ಸತ್ತರೂ ವಿಮಾ ಸೌಲಭ್ಯ ಸಿಗುತ್ತದೆ. ಪ್ರತೀ ವರ್ಷ ಅದರ ನವೀಕರಣ ಮಾಡಬೇಕಾಗುತ್ತದೆ.

ಇದನ್ನೂ ಓದಿ: ಡಿಸೆಂಬರ್ ಮೊದಲ ಎರಡು ವಾರದಲ್ಲಿ ಎಫ್​ಪಿಐಗಳಿಂದ 22,766 ಕೋಟಿ ರೂ ಒಳಹರಿವು

18ರಿಂದ 50 ವರ್ಷದ ವಯೋಮಾನದ ವ್ಯಕ್ತಿಗಳು ಈ ಸ್ಕೀಮ್ ಪಡೆಯಬಹುದು. ಯಾವುದಾದರೂ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್​ನಲ್ಲಿ ತೆರೆಯಲಾಗುವ ಖಾತೆಯ ಮೂಲಕ ಈ ಸ್ಕೀಮ್​ಗೆ ಸಬ್​ಸ್ಕ್ರೈಬ್ ಆಗಬಹುದು. ವರ್ಷಕ್ಕೆ 436 ರೂ ಪ್ರೀಮಿಯಮ್ ಕಟ್ಟಿದರೆ ಸಾಕು. ಯಾವುದೇ ಕಾರಣದಿಂದ ಮೃತಪಟ್ಟರೂ ವಾರಸುದಾರರಿಗೆ 2 ಲಕ್ಷ ರೂ ಪರಿಹಾರ ಸಿಗುತ್ತದೆ.

ಈ ವಿಮೆಯನ್ನು 50 ವರ್ಷದೊಳಗಿನವರು ಆರಂಭಿಸಬಹುದಾದರೂ 55 ವರ್ಷದವರೆಗೂ ವಿಮಾ ಕವರೇಜ್ ಪಡೆಯಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಕೋವಿಡ್ ನಂತರ 17 ರಾಜ್ಯಗಳು ಶೇ. 9ಕ್ಕಿಂತಲೂ ಹೆಚ್ಚಿನ ದರದಲ್ಲಿ ಬೆಳವಣಿಗೆ; 25 ರಾಜ್ಯಗಳದ್ದು ಶೇ. 7ರ ಮೇಲ್ಪಟ್ಟ ಪ್ರಗತಿ

ಸುರಕ್ಷಾ ಬಿಮಾ ಯೋಜನೆ ಮತ್ತು ಜನ್ ಧನ್ ಯೋಜನೆ…

ಇನ್ನು, ಪಿಎಂ ಸುರಕ್ಷಾ ಬಿಮಾ ಯೋಜನೆ ಮತ್ತು ಪಿಎಂ ಜನ್ ಧನ ಯೋಜನೆಯ ಬಗ್ಗೆಯೂ ಹಣಕಾಸು ಸಚಿವಾಲಯ ದತ್ತಾಂಶ ಬಿಡುಗಡೆ ಮಾಡಿದೆ. ಅದರ ಪ್ರಕಾರ ಪಿಎಂ ಸುರಕ್ಷಾ ಬಿಮಾ ಯೋಜನೆ ಅಪಘಾತ ವಿಮಾ ರಕ್ಷಣೆ ನೀಡುತ್ತದೆ. ಇದು 2 ಲಕ್ಷ ರೂ ಕವರೇಜ್ ಹೊಂದಿದೆ. 48 ಕೋಟಿ ವ್ಯಕ್ತಿಗಳು ಸುರಕ್ಷಾ ಬಿಮಾ ಸ್ಕೀಮ್​ನಲ್ಲಿ ನೊಂದಾಯಿಸಿದ್ದಾರೆ. 1,93,964 ಕ್ಲೇಮ್​ಗಳಲ್ಲಿ 1,47,641 ಕ್ಲೇಮ್​ಗಳನ್ನು ವಿಲೇವಾರಿ ಮಾಡಲಾಗಿದೆ.

ಇನ್ನು, ಪಿಎಂ ಜನ್ ಧನ್ ಯೋಜನೆಯ ಅಕೌಂಟ್​​ಗಳ ಸಂಖ್ಯೆ 53.13 ಕೋಟಿ ಇದೆ. ಅರ್ಧಕ್ಕಿಂತ ಹೆಚ್ಚು ಖಾತೆಗಳು ಮಹಿಳೆಯರದ್ದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ