ಅಲ್ಟ್ರಾಟೆಕ್ ದಾಖಲೆ; ಒಂದನೇ ರಾಷ್ಟ್ರೀಯ ಜಲಮಾರ್ಗದಲ್ಲಿ ಸರಕು ಸಾಗಣೆ ಮಾಡಿದ ಮೊದಲ ಭಾರತೀಯ ಸಿಮೆಂಟ್ ಕಂಪನಿ

Ultratech cement company record: ಆದಿತ್ಯ ಬಿರ್ಲಾ ಒಡೆತನದ ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆ ರಾಷ್ಟ್ರೀಯ ಜಲಮಾರ್ಗ-1ರಲ್ಲಿ ಜಿಪ್ಸಂ ಸರಕನ್ನು ಸಾಗಣೆ ಮಾಡಿದೆ. ಈ ಮಾರ್ಗ ಬಳಸಿದ ಮೊದಲ ಸಿಮೆಂಟ್ ಕಂಪನಿ ಎನ್ನುವ ದಾಖಲೆ ಅಲ್ಟ್ರಾಟೆಕ್​ನದ್ದಾಗಿದೆ. ಅಲ್ಟ್ರಾಟೆಕ್ ಸಂಸ್ಥೆ 2023ರ ಏಪ್ರಿಲ್​ನಲ್ಲಿ ಒಡಿಶಾದಿಂದ ಗುಜರಾತ್​ಗೆ ಒಳನಾಡು ಜಲಮಾರ್ಗಗಳ ಮೂಲಕ ಸರಕು ಸಾಗಣೆ ಮಾಡಿತ್ತು.

ಅಲ್ಟ್ರಾಟೆಕ್ ದಾಖಲೆ; ಒಂದನೇ ರಾಷ್ಟ್ರೀಯ ಜಲಮಾರ್ಗದಲ್ಲಿ ಸರಕು ಸಾಗಣೆ ಮಾಡಿದ ಮೊದಲ ಭಾರತೀಯ ಸಿಮೆಂಟ್ ಕಂಪನಿ
ಹಡಗು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2024 | 5:11 PM

ನವದೆಹಲಿ, ಡಿಸೆಂಬರ್ 15: ಭಾರತದ ಅತಿದೊಡ್ಡ ಸಿಮೆಂಟ್ ಕಂಪನಿಯಾದ ಅಲ್ಟ್ರಾಟೆಕ್ ಸಿಮೆಂಟ್ ಲಿ ಸಂಸ್ಥೆ ಹೊಸ ದಾಖಲೆ ಬರೆದಿದೆ. ಒಳನಾಡು ರಾಷ್ಟ್ರೀಯ ಜಲಮಾರ್ಗ-1 (Inland National Waterway-1) ಸರಕು ಸಾಗಣೆ ಮಾಡಿದ ಭಾರತದ ಮೊದಲ ಸಿಮೆಂಟ್ ಕಂಪನಿ ಎನ್ನುವ ದಾಖಲೆಗೆ ಅಲ್ಟ್ರಾಟೆಕ್ ಬಾಜನವಾಗಿದೆ. ರಾಷ್ಟ್ರೀಯ ಜಲಮಾರ್ಗ-1ರ (ಗಂಗಾ ಭಾಗೀರಥಿ ಹೂಗ್ಲಿ) ಮೂಲಕ ಮಿನರಲ್ ಜಿಪ್ಸಂನ ದೊಡ್ಡ ಸರಕನ್ನು ಸಾಗಿಸಲಾಗಿದೆ. ಕೇಂದ್ರ ಹಡಗು ಸಾಗಣೆ, ಬಂದರು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಸಮ್ಮುಖದಲ್ಲಿ ಈ ಪ್ರಾಯೋಗಿಕ ಸಾಗಣೆಯ ಯೋಜನೆ ಚಾಲನೆಗೊಳಿಸಲಾಯಿತು.

ಆದಿತ್ಯ ಬಿರ್ಲಾ ಒಡೆತನದ ಅಲ್ಟ್ರಾಟೆಕ್ ಸಿಮೆಂಟ್​ನ ಈ ಜಿಪ್ಸಂ ಸರಕನ್ನು ಪಶ್ಚಿಮ ಬಂಗಾಳದ ಹಲ್ದಿಯಾ ಪೋರ್ಟ್​ನಿಂದ ಬಿಹಾರದ ಪಾತ್ನಾದಲ್ಲಿರುವ ಗಾಯ್​ಘಾಟ್ ಟರ್ಮಿನಲ್​ಗೆ ಸಾಗಿಸಲಾಯಿತು. ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ (ಐಡಬ್ಲ್ಯುಎಐ) ಮತ್ತು ಇನ್​ಲ್ಯಾಂಡ್ ಅಂಡ್ ಕೋಸ್ಟಲ್ ಶಿಪ್ಪಿಂಗ್ ಲಿ ಸಂಸ್ಥೆಗಳ ನೆರವಿನಲ್ಲಿ ಈ ಪ್ರಯೋಗ ನಡೆಸಲಾಗಿದೆ. ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ ಅಂಗಸಂಸ್ಥೆ ಈ ಇನ್​ಲ್ಯಾಂಡ್ ಅಂಡ್ ಕೋಸ್ಟಲ್ ಶಿಪ್ಪಿಂಗ್ ಲಿ.

ಇದನ್ನೂ ಓದಿ: ನವೆಂಬರ್​ನಲ್ಲಿ ಹಣದುಬ್ಬರ ಶೇ. 5.48ಕ್ಕೆ ಇಳಿಕೆ; ಹೆಚ್ಚು ಆದಾಯದ ರಾಜ್ಯಗಳಲ್ಲಿ ಬೆಲೆ ಏರಿಕೆ ಕಡಿಮೆ

ಜಲಮಾರ್ಗಗಳಿಂದ ಲಾಭ ಹಲವು…

ರಸ್ತೆ ಸಾರಿಗೆ ಮತ್ತು ರೈಲು ಮಾರ್ಗಗಳಿಗೆ ಹೋಲಿಸಿದರೆ ಒಳನಾಡು ಜಲಮಾರ್ಗಗಳನ್ನು ಸರಕು ಸಾಗಣೆಗೆ ಬಳಸುವುದರಿಂದ ಮಾಲಿನ್ಯ ನಿಯಂತ್ರಿಸಬಹುದು. ರಸ್ತೆ ಮತ್ತು ರೈಲು ಮಾರ್ಗಗಳಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ದೇಶದ ಅತಿದೊಡ್ಡ ಪೂರ್ವಮಿಶ್ರಿತ ಕಾಂಕ್ರೀಟ್ ಕಂಪನಿಯೂ ಆದ ಅಲ್ಟ್ರಾಟೆಕ್ ಹೇಳಿದೆ.

ಭಾರತ ಸರ್ಕಾರ ಒಳನಾಡು ಜಲಮಾರ್ಗಗಳಿಗೆ ಪ್ರಧಾನ್ಯತೆ ಕೊಡುತ್ತಿದೆ. ಈ ಮಾರ್ಗಗಳನ್ನು ಬಳಸಲು ಉದ್ದಿಮೆಗಳಿಗೆ ಉತ್ತೇಜನ ನೀಡುವ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರ ಹಾಕಿಕೊಂಡಿದೆ. ಮರಿಟೈಮ್ ಇಂಡಿಯಾ ವಿಷನ್ 2030 ಮತ್ತು ಮರಿಟೈಮ್ ಅಮೃತ್ ಕಾಲ್ ವಿಶನ್ 2047 ಎನ್ನುವ ದೂರಗಾಮಿ ಗುರಿಗಳಿಗೆ ಅನುಗುಣವಾಗಿ ಸರ್ಕಾರವು ಸರಕು ಸಾಗಣೆ ನೀತಿಯನ್ನು (ಕಾರ್ಗೊ ಮೂವ್ಮೆಂಟ್ ಪಾಲಿಸಿ) ಪರಿಷ್ಕರಿಸಿದೆ.

ಇದನ್ನೂ ಓದಿ: ದೇಶದ 6,44,131 ಹಳ್ಳಿಗಳಲ್ಲಿ ಮೊಬೈಲ್ ಕವರೇಜ್ ಎಷ್ಟಿದೆ? 4ಜಿ ಕನೆಕ್ಟಿವಿಟಿ ಎಷ್ಟು ಗ್ರಾಮಗಳಿಗಿದೆ? ಇಲ್ಲಿದೆ ಡೀಟೇಲ್ಸ್

ಅಲ್ಟ್ರಾಟೆಕ್ ಸಿಮೆಂಟ್ 2023ರ ಏಪ್ರಿಲ್ ತಿಂಗಳಲ್ಲಿ ಒಡಿಶಾದ ಪರದೀಪ್ ಪೋರ್ಟ್​ನಿಂದ ಗುಜರಾತ್​ನ ಅಮ್ರೇಲಿಗೆ ಒಳನಾಡು ಜಲಮಾರ್ಗಗಳ ಮೂಲಕ 57,000 ಮೆಟ್ರಿಕ್ ಟನ್ ಫಾಸ್​ಫೋಜಿಪ್ಸಂ ಅನ್ನು ಸಾಗಣೆ ಮಾಡಿತ್ತು. ಈ ಜಲಮಾರ್ಗ ಬಳಸಿದ ಮೊದಲ ಕಂಪನಿ ಅಲ್ಟ್ರಾಟೆಕ್ ಎನ್ನಲಾಗಿದೆ.

ಭಾರತದಲ್ಲಿ ಅಧಿಕೃತವಾಗಿ ಗುರುತಿಸಲಾದ ಒಳನಾಡು ರಾಷ್ಟ್ರೀಯ ಜಲಮಾರ್ಗಗಳ ಸಂಖ್ಯೆ 111 ಇದೆ. ಈ ಪೈಕಿ ನ್ಯಾಷನಲ್ ವಾಟರ್​ವೇ 1, 2 ಮತ್ತು 3 ಕಾರ್ಯಾಚರಣೆಯಲ್ಲಿವೆ. ಕರ್ನಾಟಕದಲ್ಲೂ ಹಲವು ನದಿಗಳಲ್ಲಿ ಜಲಮಾರ್ಗಗಳನ್ನು ಅಭಿವೃದ್ಧಪಡಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ