PM Kisan 12th installment: ದೀಪಾವಳಿಗೂ ಮುನ್ನ ರೈತರ ಖಾತೆಗೆ 2,000 ರೂಪಾಯಿ ಜಮಾ? ಎಲ್ಲ ಮಾಹಿತಿ ಇಲ್ಲಿದೆ

| Updated By: ಸಾಧು ಶ್ರೀನಾಥ್​

Updated on: Oct 10, 2022 | 12:39 PM

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಆಯೋಜಿಸುತ್ತಿರುವ ಎರಡು ದಿನಗಳ ಅಗ್ರಿ ಸ್ಟಾರ್ಟ್ಅಪ್ ಕಾನ್ಕ್ಲೇವ್ ಮತ್ತು ಕಿಸಾನ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಸರ್ಕಾರವು ಪಿಎಂ ಕಿಸಾನ್ 12 ನೇ ಕಂತಿನ 2,000 ರೂ.ಗಳನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬಹುದು.

PM Kisan 12th installment: ದೀಪಾವಳಿಗೂ ಮುನ್ನ ರೈತರ ಖಾತೆಗೆ 2,000 ರೂಪಾಯಿ ಜಮಾ? ಎಲ್ಲ ಮಾಹಿತಿ ಇಲ್ಲಿದೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ದೀಪಾವಳಿಗೂ ಮುನ್ನ ರೈತರ ಖಾತೆಗೆ 2,000 ರೂಪಾಯಿ ಜಮಾ?
Follow us on

ಹೊಸದಿಲ್ಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್ -PM-KISAN scheme) ಬಹು ನಿರೀಕ್ಷಿತ 12 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ದೀಪಾವಳಿಗೆ (Diwali 2022) ಮೊದಲು ರೈತರ ಖಾತೆಗೆ ವರ್ಗಾಯಿಸಬಹುದು. ಪಿಎಂ ಕಿಸಾನ್ 12ನೇ ಕಂತಿನ ಹಣಕ್ಕಾಗಿ ಕಾತರದಿಂದ ಕಾಯುತ್ತಿರುವ ಪಿಎಂ-ಕಿಸಾನ್ ಯೋಜನೆಯ ಫಲಾನುಭವಿ ರೈತರು ಅಕ್ಟೋಬರ್ 17 ರಂದು ಈ ಬಗ್ಗೆ ದೊಡ್ಡ ಸುದ್ದಿಯನ್ನು ಕೇಳಬಹುದು (PM Kisan 12th installment).

ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಆಯೋಜಿಸಿರುವ ಎರಡು ದಿನಗಳ ಅಗ್ರಿ ಸ್ಟಾರ್ಟ್‌ಅಪ್ ಕಾನ್‌ಕ್ಲೇವ್ (Agri Startup Conclave) ಮತ್ತು ಕಿಸಾನ್ ಸಮ್ಮೇಳನದ (Kisan Sammelan) ಉದ್ಘಾಟನಾ ಸಮಾರಂಭದಲ್ಲಿ ಮೋದಿ ಸರ್ಕಾರವು ಪಿಎಂ ಕಿಸಾನ್ 12 ನೇ ಕಂತಿನ 2,000 ರೂ. ಗಳನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬಹುದು. ಅಕ್ಟೋಬರ್ 2 ರಂದು (ಗಾಂಧಿ ಜಯಂತಿ) ಫಲಾನುಭವಿ ರೈತರ ಖಾತೆಗೆ ಸರ್ಕಾರ 2,000 ರೂಪಾಯಿಗಳನ್ನು ಜಮಾ ಮಾಡಬಹುದೆಂದು ಕೆಲವು ಮಾಧ್ಯಮ ವರದಿಗಳು ಈ ಹಿಂದೆ ವರದಿ ಮಾಡಿದ್ದವು. ಆದರೆ ಇವು ಕೇವಲ ಆರಂಭಿಕ ವರದಿಗಳಾಗಿವೆ. ಆದಾಗ್ಯೂ PM-KISAN ಯೋಜನೆಯ ಫಲಾನುಭವಿ ಖಾತೆಗಳಿಗೆ 2,000 ರೂ.ಗಳನ್ನು ವರ್ಗಾಯಿಸುವ ಬಗ್ಗೆ ಸರ್ಕಾರವು ಅಧಿಕೃತವಾಗಿ ಏನನ್ನೂ ದೃಢೀಕರಿಸಿಲ್ಲ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 31 ರಂದು 11 ನೇ ಕಂತಿನ ಆರ್ಥಿಕ ಪ್ರಯೋಜನವನ್ನು ಬಿಡುಗಡೆ ಮಾಡಿದ್ದರು. ಪ್ರಧಾನಿ ಮೋದಿ ಅವರು 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ ಸುಮಾರು 21,000 ಕೋಟಿ ರೂ ಸಂದಾಯವಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhan Mantri Kisan Samman Nidhi PM-KISAN) ಯೋಜನೆಯನ್ನು 2019 ರಲ್ಲಿ ಪಿಎಂ ಮೋದಿ ಅವರು ಪ್ರಾರಂಭಿಸಿದರು. ಈ ಯೋಜನೆಯು ದೇಶಾದ್ಯಂತ ಕೃಷಿಯೋಗ್ಯ ಭೂಮಿ ಹೊಂದಿರುವ ಎಲ್ಲಾ ಜಮೀನುದಾರ ರೈತ ಕುಟುಂಬಗಳಿಗೆ ಆದಾಯ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆದರೆ ಇದಕ್ಕೆ ಕೆಲವು ಷರತ್ತುಗಳು ಅನ್ವಯವಾಗುತ್ತವೆ.

ಯೋಜನೆಯಡಿ, ಪ್ರತಿ ವರ್ಷವೂ 6,000 ರೂ ಮೊತ್ತವನ್ನು ಮೂರು ಬಾರಿ ತಲಾ 4-ಮಾಸಿಕ ಕಂತುಗಳಲ್ಲಿ ತಲಾ ರೂ 2000 ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ PM ಕಿಸಾನ್ ಕಂತನ್ನು ಮೂರು ಬಾರಿ ಕ್ರೆಡಿಟ್ ಮಾಡಲಾಗಿದೆ. ಅವಧಿ 1 -ಏಪ್ರಿಲ್-ಜುಲೈ; ಅವಧಿ 2 – ಆಗಸ್ಟ್ ನಿಂದ ನವೆಂಬರ್ ವರೆಗೆ; ಮತ್ತು ಅವಧಿ 3 -ಡಿಸೆಂಬರ್ ನಿಂದ ಮಾರ್ಚ್ ವರೆಗೆ ಎಂದು zeenews ಜಾಲತಾಣ ವರದಿ ಮಾಡಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪಾವತಿಯನ್ನು ಹೀಗೆ ಪರಿಶೀಲಿಸಿ:

1) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – pmkisan.gov.in

2) ನೀವು ‘ಫಲಾನುಭವಿ ಸ್ಥಿತಿ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

2) ಇಲ್ಲಿ ಹೊಸ ಪುಟ ತೆರೆಯುತ್ತದೆ.

3) ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯಿಂದ ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಿ.

4) ನಿಮ್ಮ ಖಾತೆಗೆ ಹಣ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಈ 2 ಸಂಖ್ಯೆಗಳ ಮೂಲಕ ಪರಿಶೀಲಿಸಬಹುದು.

5) ಈ ಎರಡರ ಸಂಖ್ಯೆಯನ್ನು ನಮೂದಿಸಿ, ನೀವು ‘ಡೇಟಾ ಪಡೆಯಿರಿ’ ಮೇಲೆ ಕ್ಲಿಕ್ ಮಾಡಬೇಕು

6) ಎಲ್ಲಾ ವಹಿವಾಟಿನ ವಿವರಗಳನ್ನು ವೀಕ್ಷಿಸಿ.

Published On - 12:34 pm, Mon, 10 October 22