ಪಿಎಂ ಕಿಸಾನ್ 22ನೇ ಕಂತಿನ ಹಣ ಇಂದು ಬಿಡುಗಡೆ; ಈ ರೀತಿಯ ಫಲಾನುಭವಿಗಳಿಗಿರೋದಿಲ್ಲ ಯೋಜನೆ ಭಾಗ್ಯ

PM Kisan scheme 22nd installment amount release on 2026 March 13th: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 22ನೇ ಕಂತಿನ ಹಣವನ್ನು ಪಿಎಂ ಮೋದಿ ಇಂದು ಮಾ. 13ರಂದು ಗುವಾಹಟಿಯಲ್ಲಿ ಬಿಡಗಡೆ ಮಾಡುತ್ತಾರೆ. ಸ್ವಂತ ಕೃಷಿ ಜಮೀನು ಹೊಂದಿರುವ ರೈತರಿಗೆ ವ್ಯವಸಾಯಕ್ಕೆ ನೆರವಾಗಲು ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ನೀಡುವ ಯೋಜನೆ ಇದು. ಇಲ್ಲಿಯವರೆಗೆ 21 ಕಂತುಗಳನ್ನು ನೀಡಲಾಗಿದೆ. ಈಗ 22ನೇ ಕಂತಿನ ಹಣ ಸಿಗುತ್ತಿದೆ.

ಪಿಎಂ ಕಿಸಾನ್ 22ನೇ ಕಂತಿನ ಹಣ ಇಂದು ಬಿಡುಗಡೆ; ಈ ರೀತಿಯ ಫಲಾನುಭವಿಗಳಿಗಿರೋದಿಲ್ಲ ಯೋಜನೆ ಭಾಗ್ಯ
ರೈತರು

Updated on: Mar 13, 2026 | 12:41 PM

ಗುವಾಹಟಿ, ಮಾರ್ಚ್ 13: ರೈತರಿಗೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan scheme) 22ನೇ ಕಂತಿನ ಹಣ ಇಂದು ಶುಕ್ರವಾರ ಬಿಡುಗಡೆ ಆಗುತ್ತಿದೆ. ಅಸ್ಸಾಮ್ ರಾಜಧಾನಿಯಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಪ್ರಧಾನಿಗಳು ಹಣ ಬಿಡುಗಡೆ ಮಾಡಲಿದ್ದಾರೆ. 9 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ನೇರವಾಗಿ ಜಮೆಯಾಗಲಿದೆ.

ತಮಿಳುನಾಡಿನ ಕೊಯಮತ್ತೂರಿನಲ್ಲಿ 2025ರ ನವೆಂಬರ್ 19ರಂದು 21ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9 ಕೋಟಿಗೂ ಅಧಿಕ ರೈತರಿಗೆ ಒಟ್ಟು 18,000 ಕೋಟಿ ರೂ ಹಣವನ್ನು ನೇರವಾಗಿ ಕೊಡಲಾಗಿತ್ತು. ಅದಕ್ಕೂ ಹಿಂದಿನ 20ನೇ ಕಂತಿನ ಹಣವನ್ನು ಆಗಸ್ಟ್ ತಿಂಗಳಲ್ಲಿ 9.8 ಕೋಟಿ ರೈತರಿಗೆ ನೀಡಲಾಗಿತ್ತು.

ಇದನ್ನೂ ಓದಿ: ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ಈ ಬಾರಿ ಹಲವು ಲಕ್ಷ ಫಲಾನುಭವಿಗಳ ಸಂಖ್ಯೆ ಇಳಿಕೆ

ಕಳೆದ ಮೂರು ತಿಂಗಳಲ್ಲಿ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮರು-ಕೆವೈಸಿ ಮಾಡಲು ತಿಳಿಸಿತ್ತು. ಕೆವೈಸಿ ಅಪ್​ಡೇಟ್ ಮಾಡಲು ಮೂರ್ನಾಲ್ಕು ಮಾರ್ಗಗಳ ಆಫರ್ ಕೊಡಲಾಗಿತ್ತು. ಸಮೀಪದ ರೈತ ಸಂಪರ್ಕ ಕೇಂದ್ರ, ಪಿಎಂ ಕಿಸಾನ್ ಮೊಬೈಲ್ ಆ್ಯಪ್, ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಕೆವೈಸಿ ಅಪ್​ಡೇಟ್ ಮಾಡಬಹುದು. ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಈ ಹಿಂದೆ ಎಲ್ಲಾ ಕಂತುಗಳನ್ನು ಪಡೆದಿರುವ ಫಲಾನುಭವಿಗಳು ರೀ-ಕೆವೈಸಿ ಮಾಡದೇ ಇದ್ದರೆ 22ನೇ ಕಂತಿನ ಹಣ ಸಿಗುವುದಿಲ್ಲ. ವರದಿಗಳ ಪ್ರಕಾರ, ಈ ಬಾರಿ 22ನೇ ಕಂತಿನ ಹಣದಿಂದ ವಂಚಿತರಾಗುವ ಫಲಾನುಭವಿಗಳ ಸಂಖ್ಯೆ ಹಲವು ಲಕ್ಷಗಳೆನ್ನಲಾಗಿದೆ.

ಈ ಕೆಳಗಿನ ಫಲಾನುಭವಿಗಳಿಗೆ ಸಿಗೋದಿಲ್ಲ ಹಣ

ಇಕೆವೈಸಿ ಅಪ್ಡೇಟ್ ಮಾಡದಿದ್ದವರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಫಲಾನುಭವಿಗಳ ಕುಟುಂಬದಲ್ಲಿ ಯಾರಾದರೂ ಕೂಡ ಸರ್ಕಾರಿ ಅಧಿಕಾರಿಯೋ, ಶಾಸಕರೋ, ಸಂಸದರೋ, ಜಿಪಂ ಸದಸ್ಯರೋ, ವೃತ್ತಿಪರರೋ, ಐಟಿ ಪಾವತಿದಾರರೋ ಇದ್ದರೆ ಅಂಥವರು ರೈತರಾಗಿದ್ದಾಗ್ಯೂ ಯೋಜನೆಗೆ ಅರ್ಹರಿರುವುದಿಲ್ಲ.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಮತ್ತೊಂದು ಗಮನಾರ್ಹ ಸಂಗತಿ ಎಂದರೆ 2019ರ ಫೆಬ್ರುವರಿ 1ರ ನಂತರ ಜಮೀನು ಮಾಲಕತ್ವ ಪಡೆದ ರೈತರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಒಂದೇ ಕುಟುಂಬದ ಇಬ್ಬರು ಸದಸ್ಯರು ಪ್ರತ್ಯೇಕ ಜಮೀನು ಮಾಲಕತ್ವ ಹೊಂದಿದ್ದರೂ ಒಬ್ಬರು ಮಾತ್ರವೇ ಯೋಜನೆಗೆ ಅರ್ಹರಾಗಿರುವುದು.

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್ ಲಿಂಕ್: pmkisan.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us