ರಾಂಚಿ, ನವೆಂಬರ್ 15: ಪಿಎಂ ಕಿಸಾನ್ ಸ್ಕೀಮ್ನ 15ನೇ ಕಂತಿನ ಹಣ (PM Kisan Scheme) ಬಿಡುಗಡೆ ಅಗಿದೆ. ಆಗಸ್ಟ್ನಿಂದ ನವೆಂಬರ್ವರೆಗಿನ ಅವಧಿಗೆ ಒಟ್ಟು 18,000 ಕೋಟಿ ರೂ ಹಣವನ್ನು ಪಿಎಂ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಜಾರ್ಖಂಡ್ನ ಖೂಂಟಿಯಲ್ಲಿ (Khunti, Jharkhand) ನಡೆದ ಕಾರ್ಯಕ್ರಮದ ವೇಳೆ ಪ್ರಧಾನಿಗಳಿಂದ 15ನೇ ಕಂತಿನ ಹಣ ರಿಲೀಸ್ ಆಗಿದೆ. ಒಟ್ಟು 8.5 ಕೋಟಿ ರೈತರ ಖಾತೆಗಳಿಗೆ ತಲಾ 2,000 ರೂ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ.
2019ರ ಫೆಬ್ರವರಿಯಲ್ಲಿ ಈ ಯೋಜನೆ ಆರಂಭಗೊಂಡಿತು. ವರ್ಷಕ್ಕೆ 6 ಸಾವಿರ ರೂಗಳನ್ನು ತಲಾ 2,000 ರೂಗಳ 3 ಕಂತುಗಳಲ್ಲಿ ಸರ್ಕಾರವು ಕೃಷಿಕ ಕುಟುಂಬಗಳಿಗೆ ನೀಡುತ್ತಿದೆ. ಅದರಂತೆ ಈವರೆಗೆ 15 ಕಂತುಗಳನ್ನು ನೀಡಿದೆ. ಇಲ್ಲಿಯವರೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣದ ಮೊತ್ತ 2.75 ಲಕ್ಷ ಕೋಟಿ ರೂ ಆಗಿದೆ.
ಒಂದು ಹಣಕಾಸು ವರ್ಷದಲ್ಲಿ ಏಪ್ರಿಲ್ನಿಂದ ಜುಲೈವರೆಗೆ ಒಂದು ಕಂತು; ಆಗಸ್ಟ್ನಿಂದ ನವೆಂಬರ್ವರೆಗೂ ಇನ್ನೊಂದು ಕಂತು; ಹಾಗು ಡಿಸೆಂಬರ್ನಿಂದ ಮಾರ್ಚ್ವರೆಗೆ ಮಗದೊಂದು ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ. ಸ್ವಂತವಾಗಿ ಕೃಷಿ ಜಮೀನು ಹೊಂದಿರುವ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರು.
ಇದನ್ನೂ ಓದಿ: LIC Scheme: ನಿವೃತ್ತಿ ಬಳಿಕ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಬರಲು ಪಾಲಿಸಿ ಮೊತ್ತ ಎಷ್ಟು ಬೇಕು?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ ಆಗಿದೆ. ನೀವು ಫಲಾನುಭವಿಗಳಾಗಿದ್ದೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲದೇ ಹೋಗಿದ್ದರೆ, ಈ ಬಾರಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಒಮ್ಮೆ ಪರೀಕ್ಷಿಸಿ. ಅದರ ಕ್ರಮ ಹೀಗಿದೆ…
ಈಗ ಆ ಗ್ರಾಮದಲ್ಲಿ ಇರುವ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು.
ನೀವು ಇತ್ತೀಚೆಗೆ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದರೆ, ಬೆನಿಫಿಶಿಯರಿ ಸ್ಟೇಟಸ್ ಅನ್ನು ಪರಿಶೀಲಿಸಬಹುದು.
ರಿಜಿಸ್ಟ್ರೇಶನ್ ಸಂಖ್ಯೆ ಗೊತ್ತಿಲ್ಲದೇ ಇದ್ದರೆ ನಿಮ್ಮ ನೊಂದಾಯಿತು ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಮೂಲಕ ರಿಜಿಸ್ಟ್ರೇಶನ್ ನಂಬರ್ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ