AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Scheme: ನಿವೃತ್ತಿ ಬಳಿಕ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಬರಲು ಪಾಲಿಸಿ ಮೊತ್ತ ಎಷ್ಟು ಬೇಕು?

Pension Policy: ಎಲ್​ಐಸಿಯಲ್ಲಿ ಜನಪ್ರಿಯವಾಗಿರುವ ಸ್ಕೀಮ್​ಗಳಲ್ಲಿ ಜೀವನ್ ಶಾಂತಿಯೂ ಒಂದು. ಇದು ನಿವೃತ್ತಿ ಬಳಿಕ ಪಿಂಚಣಿ ಒದಗಿಸುವ ಯೋಜನೆ. ಈ ಸ್ಕೀಮ್​ನಲ್ಲಿ ಎಷ್ಟು ಬೇಕಾದರೂ ಹಣ ತೊಡಗಿಸಬಹುದು. ಎಲ್​ಐಸಿ ಜೀವನ್ ಶಾಂತಿ ಇನ್ಷೂರೆನ್ಸ್ ಪಾಲಿಸಿಯಲ್ಲಿ ಪಾಲಿಸಿದಾರನಿಗೆ ಕನಿಷ್ಠ ವಯಸ್ಸು 30 ವರ್ಷವಾದರೆ ಗರಿಷ್ಠ ವಯಸ್ಸು 79 ವರ್ಷ ಇದೆ. ಕಂತುಗಳಲ್ಲಿ ಪ್ರೀಮಿಯಮ್ ಕಟ್ಟುವಂತಿಲ್ಲ. ಒಮ್ಮೆಲೇ ಲಂಪ್ಸಮ್ ಆಗಿ ಹಣ ಪಾವತಿಸಬೇಕು.

LIC Scheme: ನಿವೃತ್ತಿ ಬಳಿಕ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಬರಲು ಪಾಲಿಸಿ ಮೊತ್ತ ಎಷ್ಟು ಬೇಕು?
ಹಿರಿಯ ನಾಗರಿಕರು....
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 15, 2023 | 12:44 PM

Share

ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಎಲ್​ಐಸಿ (LIC) ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿದೆ. ಎಲ್ಲಾ ವಯೋಮಾನದವರಿಗೆ ಸೂಕ್ತವಾಗುವ ವಿವಿಧ ಇನ್ಷೂರೆನ್ಸ್ ಆಯ್ಕೆಗಳನ್ನು ಎಲ್​ಐಸಿ ಹೊಂದಿದೆ. ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ, ವರ್ಷಕ್ಕೆ ಹೀಗೆ ವಿವಿಧ ಪಾವತಿ ಅವಧಿಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ತಿಂಗಳಿಗೆ ಕೆಲವೇ ನೂರು ರೂಗಳಿಂದ ಪಾಲಿಸಿ ಮೊತ್ತ ಆರಂಭವಾಗುತ್ತದೆ. ಹೀಗಾಗಿ, ಯಾರು ಬೇಕಾದರೂ ಕೂಡ ಎಲ್​ಐಸಿಯ ಇನ್ಷೂರೆನ್ಸ್ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಬಹುದು.

ಎಲ್​ಐಸಿಯಲ್ಲಿ ಜನಪ್ರಿಯವಾಗಿರುವ ಸ್ಕೀಮ್​ಗಳಲ್ಲಿ ಜೀವನ್ ಶಾಂತಿಯೂ (LIC Jeevan Shanti) ಒಂದು. ಇದು ನಿವೃತ್ತಿ ಬಳಿಕ ಪಿಂಚಣಿ (Deferred Annuity insurance scheme) ಒದಗಿಸುವ ಯೋಜನೆ. ಈ ಸ್ಕೀಮ್​ನಲ್ಲಿ ಎಷ್ಟು ಬೇಕಾದರೂ ಹಣ ತೊಡಗಿಸಬಹುದು.

ಎಲ್​ಐಸಿ ಜೀವನ್ ಶಾಂತಿ ಇನ್ಷೂರೆನ್ಸ್ ಪಾಲಿಸಿಯಲ್ಲಿ ಪಾಲಿಸಿದಾರನಿಗೆ ಕನಿಷ್ಠ ವಯಸ್ಸು 30 ವರ್ಷವಾದರೆ ಗರಿಷ್ಠ ವಯಸ್ಸು 79 ವರ್ಷ ಇದೆ. ಕಂತುಗಳಲ್ಲಿ ಪ್ರೀಮಿಯಮ್ ಕಟ್ಟುವಂತಿಲ್ಲ. ಒಮ್ಮೆಲೇ ಲಂಪ್ಸಮ್ ಆಗಿ ಹಣ ಪಾವತಿಸಬೇಕು. ಪಾಲಿಸಿದಾರ ಮೃತಪಡುವವರೆಗೂ ನಿರ್ದಿಷ್ಟ ಮೊತ್ತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿಗೆ ನಾಮಿನಿ ಎಷ್ಟು ಮುಖ್ಯ? ನಾಮಿನಿ ಹೆಸರು ಬದಲಿಸಲು ಸಾಧ್ಯವೇ? ಇಲ್ಲಿದೆ ಡೀಟೇಲ್ಸ್

ಇಲ್ಲಿ ಒಬ್ಬನೇ ವ್ಯಕ್ತಿ ಬೇಕಾದರೆ ಪಾಲಿಸಿ ಮಾಡಿಸಬಹುದು. ಜಂಟಿಯಾಗಿಯೂ ಮಾಡಿಸಬಹುದು. ಜಂಟಿಯಾಗಿ ಮಾಡಿಸಿದಾಗ, ಒಬ್ಬ ಸದಸ್ಯ ಮೃತಪಟ್ಟರೂ ಇನ್ನೊಬ್ಬರಿಗೆ ಈ ಪಿಂಚಣಿ ಸಿಗುತ್ತಾ ಹೋಗುತ್ತದೆ.

ಜೀವನ್ ಶಾಂತಿಯಲ್ಲಿ ವರ್ಷಕ್ಕೆ 1 ಲಕ್ಷ ರೂ ಪಿಂಚಣಿ ಬರಲು ಏನು ಮಾಡಬೇಕು?

ಎಲ್​ಐಸಿಯ ನ್ಯೂ ಜೀವನ್ ಶಾಂತಿ ಸ್ಕೀಮ್​ನಲ್ಲಿ ಲಂಪ್ಸಮ್ ಆಗಿ 11 ಲಕ್ಷ ರೂ ಅನ್ನು ಹೂಡಿಕೆ ಮಾಡಿ 5 ವರ್ಷದ ಬಳಿಕ ಪಿಂಚಣಿ ಪಡೆಯಲು ಆರಂಭಿಸಿದರೆ, ವರ್ಷಕ್ಕೆ 1,01,880 ರೂ ಸಿಗುತ್ತದೆ. ಮಾಸಿಕ ಪಿಂಚಣಿ ಬೇಕೆಂದರೆ 8,149 ರೂ ಬರುತ್ತದೆ.

ಇದನ್ನೂ ಓದಿ: ಭಾರತೀಯರು ಎಂಥ ಅಪಾಯದಲ್ಲಿದ್ದಾರೆ ಗೊತ್ತಾ? ಬರ್ಬಾದ್ ಆಗಲು ಈ ಒಂದೇ ದುರ್ಘಟನೆ ಸಾಕು ಎನ್ನುತ್ತಾರೆ ನಿತಿನ್ ಕಾಮತ್; ಏನಿದು ಎಚ್ಚರಿಕೆಯ ಕರೆಗಂಟೆ?

ಉದಾಹರಣೆಗೆ ನೀವು 55ನೇ ವಯಸ್ಸಿನಲ್ಲಿ 11 ಲಕ್ಷ ರೂ ಮೊತ್ತದ ಜೀವನ್ ಶಾಂತಿ ಪಾಲಿಸಿ ಖರೀದಿಸಿದರೆ, 60ನೇ ವಯಸ್ಸಿನಲ್ಲಿ ನಿವೃತ್ತಿ ಬಳಿಕ ಪಿಂಚಣಿ ಬರುತ್ತಾ ಹೋಗುತ್ತದೆ.

ಒಂದು ವೇಳೆ ಪಾಲಿಸಿದಾರ ಮೃತಪಟ್ಟರೆ ನಿರ್ದಿಷ್ಟ ಮೊತ್ತವನ್ನು ನಾಮಿನಿಗೆ ಕೊಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್