
ನವದೆಹಲಿ, ಜೂನ್ 9: ಆರ್ಬಿಐ ಕಳೆದ ಶುಕ್ರವಾರ ಸತತ ಮೂರನೇ ಬಾರಿ ರಿಪೋ ದರ (Repo Rate) ಇಳಿಕೆ ಮಾಡಿತು. ಈ ವರ್ಷ ಬಡ್ಡಿದರ ಬರೋಬ್ಬರಿ 100 ಮೂಲಾಂಕಗಳಷ್ಟು ಕಡಿಮೆ ಆಗಿದೆ. ಜೂನ್ನ ಎಂಪಿಸಿ ಸಭೆಯಲ್ಲಿ ಒಮ್ಮೆಗೇ 50 ಮೂಲಾಂಕಗಳಷ್ಟು ದರ ಕಡಿತ ಮಾಡಲಾಗಿತ್ತು. ವರ್ಷದ ಆರಂಭದಲ್ಲಿ ಶೇ. 6.50 ಇದ್ದ ಆರ್ಬಿಐ ರಿಪೋ ದರ ಈಗ ಶೇ 5.50ಕ್ಕೆ ಇಳಿದಿದೆ. ಆರ್ಬಿಐ ದರ ಇಳಿಕೆಯ ಬೆನ್ನಲ್ಲೇ ಕೆಲ ಬ್ಯಾಂಕುಗಳೂ ಕೂಡ ರೇಟ್ ಕಟ್ ಮಾಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗೃಹ ಸಾಲಗಳಿಗೆ ಬಡ್ಡಿದರ ಕಡಿಮೆಗೊಳಿಸಿವೆ.
ಆರ್ಬಿಐ ತನ್ನ ರಿಪೋ ದರ ಇಳಿಸಿದರೆ ಎಲ್ಲಾ ಬ್ಯಾಂಕುಗಳೂ ಕೂಡ ತಮ್ಮ ಬಡ್ಡಿದರಗಳನ್ನು ಇಳಿಸಬೇಕೆನ್ನುವ ಕಡ್ಡಾಯ ನಿಯಮ ಇಲ್ಲ. ಬ್ಯಾಂಕುಗಳು ಎರಡು ಮಾನದಂಡದ ಸಾಲ ನೀಡುತ್ತವೆ. ಮೊದಲನೆಯದು, ಫ್ಲೋಟಿಂಗ್ ರೆಟ್ ಇಂಟರೆಸ್ಟ್. ಮತ್ತೊಂದು ಫಿಕ್ಸೆಡ್ ರೇಟ್ ಇಂಟರೆಸ್ಟ್. ಈ ಎರಡನೆಯದನ್ನು ಸಾಮಾನ್ಯವಾಗಿ ಪರ್ಸನಲ್ ಲೋನ್ಗಳಿಗೆ ನೀಡಲಾಗುತ್ತದೆ.
ಇದನ್ನೂ ಓದಿ: ಎಲ್ಟಿವಿ ಏರಿಕೆಯಿಂದ ಹಿಡಿದು ಚಿನ್ನದ ಹರಾಜುವರೆಗೆ, ಆರ್ಬಿಐನ ಹೊಸ ಗೋಲ್ಡ್ ಲೋನ್ ನಿಯಮಗಳನ್ನು ತಿಳಿದಿರಿ
ಫ್ಲೋಟಿಂಗ್ ರೇಟ್ ಸಾಲದಲ್ಲಿ ಎರಡು ವಿಧ. ಒಂದು, ರಿಪೋ ಆಧಾರಿತ ಸಾಲ ದರ ಆರ್ಎಲ್ಎಲ್ಆರ್. ಇದು ರಿಪೋ ದರಕ್ಕೆ ಅನುಗುಣವಾಗಿ ಬಡ್ಡಿದರ ಬದಲಿಸುವ ಸಾಧ್ಯತೆ ಹೆಚ್ಚು. ಇನ್ನೊಂದು, ಎಂಎಲ್ಆರ್. ಇದು ಸ್ವಲ್ಪ ಮಟ್ಟಿಗೆ ರಿಪೋ ದರವನ್ನು ಅನ್ವಯ ಮಾಡುತ್ತದೆ. ಈ ಫ್ಲೋಟಿಂಗ್ ಇಂಟರೆಸ್ಟ್ ರೇಟ್ ಗೃಹ ಸಾಲಗಳಿಗೆ ಅನ್ವಯ ಆಗುತ್ತದೆ.
ಇದನ್ನೂ ಓದಿ: ಗಮನಿಸಿ, ಆಯುಷ್ಮಾನ್ ಕಾರ್ಡ್ ಜೊತೆಗೆ ABHA ಕೂಡ ಇದ್ದರೆ ಪ್ರಯೋಜನ ಹೆಚ್ಚು; ಅದು ಹೇಗೆ, ಇಲ್ಲಿದೆ ಮಾಹಿತಿ
ಈ ಮೇಲಿನ ನಾಲ್ಕು ಬ್ಯಾಂಕುಗಳು ದರ ಕಡಿತಗೊಳಿಸಿರುವುದನ್ನು ತಮ್ಮ ರೆಗ್ಯುಲೇಟರಿ ಫೈಲಿಂಗ್ನಲ್ಲಿ ಪ್ರಕಟಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ