ನವದೆಹಲಿ, ಡಿಸೆಂಬರ್ 2: ಭಾರತದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಮೂಲಸೌಕರ್ಯ ಯೋಜನೆಗಳನ್ನು ಕಳೆದ ಕೆಲ ವರ್ಷಗಳಲ್ಲಿ ಪೂರ್ಣಗೊಳಿಸಿದೆ. ಇನ್ನೂ ಹಲವು ಯೋಜನೆಗಳು ಕ್ಷಿಪ್ರ ವೇಗದಲ್ಲಿ ಪ್ರಗತಿಯಲ್ಲಿವೆ. ಇದೆಲ್ಲವೂ ಸಾಧ್ಯವಾಗಿದ್ದು ಪ್ರಗತಿ (PRAGATI: Pro-active Governance and Timely Implementation) ಎನ್ನುವ ಡಿಜಿಟಲ್ ಗವರ್ನೆನ್ಸ್ ಪ್ಲಾಟ್ಫಾರ್ಮ್ನಿಂದ. ಈ ವಿಚಾರವನ್ನು ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್ನಿಂದ ನಡೆದ ಜಂಟಿ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಈ ಅಧ್ಯಯನದ ವರದಿಯನ್ನು ಇಂದು ಸೋಮವಾರ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ 201 ಬಿಲಿಯನ್ ಡಾಲರ್ ಮೌಲ್ಯದ ಪ್ರಮುಖ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಗಳಿಗೆ ವೇಗದ ಸ್ಪರ್ಶನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ‘ಪ್ರಗತಿ’ ಪ್ಲಾಟ್ಫಾರ್ಮ್ ಕಾರಣವಾಗಿವೆ ಎಂದು ಈ ವರದಿಯು ಎತ್ತಿ ತೋರಿಸಿದೆ.
‘ಒಂಬತ್ತು ವರ್ಷದ ಹಿಂದೆ ಪ್ರಗತಿ ಪ್ಲಾಟ್ಫಾರ್ಮ್ ಶುರುವಾದಾಗ, ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಬಹಳ ಕಠಿಣ ಸವಾಲು ಮುಂದಿತ್ತು. 2023ರ ಜೂನ್ನಲ್ಲಿ 17.05 ಲಕ್ಷ ಕೋಟಿ ರೂ ಮೌಲ್ಯದ 340 ಯೋಜನೆಗಳು ಪ್ರಗತಿ ಪರಾಮರ್ಶೆಗೆ ಒಳಪಟ್ಟಿವೆ. ಖುದ್ದು ಪ್ರಧಾನಿ ಮೋದಿ ಅವರೇ ಈ ಪ್ರಗತಿ ವಿಚಾರದಲ್ಲಿ ಮುತುವರ್ಜಿ ತೋರಿರುವುದು ಈ ಯಶಸ್ಸಿಗೆ ಕಾರಣ’ ಎಂದು ವರದಿಯಲ್ಲಿ ಶ್ಲಾಘಿಸಲಾಗಿದೆ.
ಇದನ್ನೂ ಓದಿ: ಈಶಾನ್ಯ ರಾಜ್ಯಗಳ ಎಂಟು ಸ್ಥಳಗಳನ್ನು ಅದ್ಭುತ ಪ್ರವಾಶೀ ತಾಣಗಳಾಗಿ ಅಭಿವೃದ್ಧಿ: ಕೇಂದ್ರದ ಯೋಜನೆ
ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್ ಈ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದೆ. ಪ್ರಗತಿ ಪರಿಣಾಮವಾಗಿ ಇನ್ಫ್ರಾಸ್ಟ್ರಕ್ಚರ್ ಯೋಜನೆಗಳು ಹೇಗೆ ಬೆಳವಣಿಗೆ ಹೊಂದಿವೆ ಎನ್ನುವುದರ ಕೇಸ್ ಸ್ಟಡಿಯನ್ನು ಈ ವರದಿಯಲ್ಲಿ ಮಂಡಿಸಲಾಗಿದೆ. ಬೆಂಗಳೂರಿನ ಮೆಟ್ರೋ ರೈಲು ಯೋಜನೆ, ನವಿ ಮುಂಬೈ ಏರ್ಪೋರ್ಟ್, ಜಮ್ಮು ಉಧಂಪುರ್ ಶ್ರೀನಗರ್ ಬಾರಾಮುಲ್ಲಾ ರೈಲು ಲಿಂಕ್ ಇತ್ಯಾದಿ ಹಲವು ಯೋಜನೆಗಳ ಕೇಸ್ ಸ್ಟಡಿಯನ್ನು ನೀಡಲಾಗಿದೆ.
@OxfordSBS and @GatesFoundation have launched a groundbreaking case study on India’s digital governance revolution. Prime Minister Modi led PRAGATI and transformed infrastructure development, accelerating 340+ projects worth $205B. #PRAGATIforProgress
👉 https://t.co/at9DFZcWEn pic.twitter.com/FNehatwnIg
— Saïd Business School (@OxfordSBS) December 2, 2024
2015ರಲ್ಲಿ ಆರಂಭವಾದ ಪ್ರಗತಿಯು ಪರಿವೇಶ್, ಪಿಎಂ ಗತಿ ಶಕ್ತಿ, ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ ಮೊದಲಾದ ಇತರ ಸರ್ಕಾರೀ ಡಿಜಿಟಲ್ ಪ್ಲಾಟ್ಫಾರ್ಮ್ಗಳೊಂದಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಬಹಳ ಸಂಕೀರ್ಣವಾಗಿರುವ ಮತ್ತು ಪ್ರಮುಖವಾಗಿರುವ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಗಳ ವಿಚಾರದಲ್ಲಿ ಮಲ್ಟಿ ಪ್ಲಾಟ್ಫಾರ್ಮ್ಗಳ ಸಹಯೋಗ ಅವಶ್ಯಕತೆ ಇರುತ್ತದೆ.
ಈ ವರದಿಯಲ್ಲಿ ಪ್ರಗತಿ ಜೊತೆಗೆ ಪಿಎಂ ಗತಿ ಶಕ್ತಿ ಇತ್ಯಾದಿ ಇತರ ಪ್ಲಾಟ್ಫಾರ್ಮ್ಗಳು ಯಾವುದೇ ಯೋಜನೆಯ ಜಾರಿಗೆ ಎಷ್ಟು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪ್ರಕರಣಗಳ ಸಹಿತ ಈ ವರದಿಯಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಬೆಳೆ ತ್ಯಾಜ್ಯ ನಿರ್ವಹಣೆಗೆ ಸರ್ಕಾರದಿಂದ 3,623 ಕೋಟಿ ರೂ ವೆಚ್ಚ; ಪಂಜಾಬ್, ಹರ್ಯಾಣ ರಾಜ್ಯಕ್ಕೆ ಹೆಚ್ಚಿನ ವ್ಯಯ
ಬೆಂಗಳೂರಿನ ಮೆಟ್ರೋ ರೈಲು ಪ್ರಾಜೆಕ್ಟ್ ಬಗ್ಗೆ ಪ್ರಸ್ತಾಪಿಸಿದ ಈ ವರದಿಯು, ಯೋಜನೆಗೆ ಭೂಮಿ ಪಡೆಯುವುದು ಬಹಳ ದೊಡ್ಡ ಸವಾಲಾಗಿತ್ತು ಎಂಬುದನ್ನು ಹೇಳಿದೆ. ಈ ಯೋಜನೆಯ ಎರಡು ಹಂತಗಳನ್ನು ಪೂರ್ಣಗೊಳಿಸಲಾಗಿದೆ. ಮೂರನೇ ಹಂತವು 2028ಕ್ಕೆ ಮುಗಿಯುವ ಗುರಿ ಇದೆ. ಈ ಮೆಟ್ರೋ ರೈಲಿನಿಂದಾಗಿ ಬೆಂಗಳೂರು ನಗರದ ವಾಹನ ದಟ್ಟಣೆ ಕಡಿಮೆ ಆಗಲು ಸಹಕಾರಿಯಾಗಿರುವುದನ್ನು ಇದು ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:48 pm, Mon, 2 December 24