ಮುಂಬೈನ ಪ್ರತಿಭಾ ಶರ್ಮಾ (Pratibha Sharma) ಅವರ ಕಥೆಯು ಮನೆಯ ಜವಾಬ್ದಾರಿಗಳ ನಡುವೆ ತಮ್ಮ ಕನಸುಗಳನ್ನು ಬಚ್ಚಿಡುವ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ವಿಜ್ಞಾನ ಪದವೀಧರೆ ಮತ್ತು ತಾಯಿಯಾಗಿ ಅವರು ಫಿಟ್ನೆಸ್ ಉದ್ಯಮದಲ್ಲಿ ಗಮನಾರ್ಹ ಕೊರತೆ ಇರುವುದನ್ನು ಗುರುತಿಸಿದರು. ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಮಾಲೀಕರು ಗೃಹಿಣಿಯರನ್ನು ಮತ್ತು ಹೊಸ ತಾಯಂದಿರನ್ನು ನಿರ್ಲಕ್ಷಿಸುತ್ತಿರುವುದು ಅವರ ಅರಿವಿಗೆ ಬಂತು. ಈ ಆಲೋಚನೆಯು ಪ್ರತಿಭಾಗೆ ತನ್ನದೇ ಆದ ಮಾರ್ಗವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡಿತು. ಸೀಮಿತ ಸಂಪನ್ಮೂಲಗಳ ನಡುವೆಯೂ, ಅವರು ತಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಆ ಹಾದಿಯಲ್ಲಿ ಮುಂದುವರಿಯಲು ನಿರ್ಧರಿಸಿದರು.
ಹೆಚ್ಚಿನ ಜಿಮ್‌ಗಳು ಕಾರ್ಯನಿರತ ಮಹಿಳೆಯರ ಸಮಯ ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಪ್ರತಿಭಾ ಶರ್ಮಾ ಗಮನಿಸಿದರು. ಗೃಹಿಣಿಯರು ಮತ್ತು ಹೊಸ ತಾಯಂದಿರು ಸರಿಯಾದ ಸಮಯದಲ್ಲಿ ಜಿಮ್‌ಗೆ ಹೋಗಲು ಸಾಧ್ಯವಾಗುವುದಿಲ್ಲ. ಅವರ ಫಿಟ್‌ನೆಸ್ ಅಗತ್ಯಗಳು ವಿಭಿನ್ನವಾಗಿರುತ್ತವೆ. ಪ್ರತಿಭಾ ಶರ್ಮಾ ಅವರು ಈ ಕೊರತೆಯನ್ನು ಒಂದು ಅವಕಾಶವಾಗಿ ನೋಡಿದರು. ಮಹಿಳೆಯರ ದೈನಂದಿನ ದಿನಚರಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಫಿಟ್‌ನೆಸ್ ಕೇಂದ್ರವನ್ನು ರಚಿಸಲು ಅವರು ನಿರ್ಧರಿಸಿದರು. ಈ ಕಲ್ಪನೆಯು ಅವರ ಬ್ಯುಸಿನೆಸ್ನ ಅಡಿಪಾಯವಾಯಿತು.
ಪ್ರತಿಭಾ ಶರ್ಮಾ ತನ್ನ ಬ್ಯುಸಿನೆಸ್ ಪ್ರಾರಂಭಿಸಲು ಬ್ಯಾಂಕಿನಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ಅನುಭವ ಮತ್ತು ಗ್ಯಾರಂಟಿ ಇಲ್ಲವೆಂದು ಸಾಲ ನಿರಾಕರಿಸಲಾಯಿತು. ಆದರೆ ಅವರು ಹತಾಶಗೊಂಡು ಪ್ರಯತ್ನ ನಿಲ್ಲಿಸಲಿಲ್ಲ. ಅಮ್ಮನಿಂದ ಕಲಿತ ಉಳಿತಾಯದ ಪಾಠ ಇವರಿಗೆ ನೆರವಿಗೆ ಬಂತು. ತಮಗೆ ಬೇಕಿದ್ದ ಬಂಡವಾಳವನ್ನು ಸೇವಿಂಗ್ಸ್ ಮೂಲಕ ಕಲೆಹಾಕಲು ನಿರ್ಧರಿಸಿದರು. ತಮ್ಮ ಮನೆಯ ಖರ್ಚಿನ ಹಣದಲ್ಲಿ ತಿಂಗಳಿಗೆ ₹15,000 ಉಳಿಸುತ್ತಾ ಹೋದರು. ಸುಮಾರು 18 ತಿಂಗಳುಗಳಲ್ಲಿ ಅವರಿಗೆ ಆರಂಭಿಕ ಬಂಡವಾಳ ಸಿಕ್ಕಿತ್ತು. ಈ ಪ್ರಯಾಣವು ಇದೇ ರೀತಿ ಶಿಸ್ತಿನಲ್ಲಿ ಮುಂದುವರಿಯುತ್ತಾ ಹೋಯಿತು.
ಜನವರಿ 9, 2017 ರಂದು, ಪ್ರತಿಭಾ ಶರ್ಮಾ 11:11 ಸ್ಲಿಮ್ಮಿಂಗ್ ಅಂಡ್ ಫಿಟ್ನೆಸ್ ಸೆಂಟರ್ ಅನ್ನು ಪ್ರಾರಂಭಿಸಿದರು. ಇದರ ಆರಂಭ ಸಣ್ಣದಾಗಿದ್ದರೂ ದೃಷ್ಟಿಕೋನ ದೊಡ್ಡದಾಗಿತ್ತು. ಏಳು ವರ್ಷಗಳ ನಂತರ ಇಂದು ಈ ಸೆಂಟರ್ 1,000 ಕ್ಕೂ ಹೆಚ್ಚು ಮಹಿಳೆಯರಿಗೆ ಸೇವೆ ಸಲ್ಲಿಸುತ್ತದೆ. ಇವರಲ್ಲಿ ಶೇ. 80ರಷ್ಟು ಮಹಿಳೆಯರು ಈ ಹಿಂದೆ ಫಿಟ್ನೆಸ್ ಸೆಂಟರ್ಗಳಿಂದ ನಿರ್ಲಕ್ಷಿಸಲ್ಪಟ್ಟವರೇ. ಶರ್ಮಾ ಅವರ ಹೊಸ ಮಾದರಿ ಫಿಟ್ನೆಸ್ ಸೆಂಟರ್ ಕೇವ ವ್ಯಾಯಾಮದ ಸ್ಥಳವಾಗಿರಲಿ, ಬದಲಾಗಿ ಮಹಿಳೆಯರ ಆತ್ಮವಿಶ್ವಾಸದ ಕೇಂದ್ರವೆನಿಸಿತು.
ಆಲೋಚನೆ ಮತ್ತು ಪ್ಲಾನಿಂಗ್ನೊಂದಿಗೆ ಆರ್ಥಿಕ ಸ್ವಾತಂತ್ರ್ಯ ಆರಂಭವಾಗುತ್ತದೆ ಎಂಬುದನ್ನು ನಾವು ಪ್ರತಿಭಾ ಶರ್ಮಾ ಅವರನ್ನು ಕಂಡು ಕಲಿಯಬಹುದು. ಎಲ್ಲಾ ಬಾರಿಯೂ ಹೊರಗಿನಿಂದ ಸಹಾಯ ಬೇಕಾಗುವುದಿಲ್ಲ. ಆತ್ಮವಿಶ್ವಾಸ ಮತ್ತು ನಿಯಮಿತ ಉಳಿತಾಯ ಕೂಡ ದೊಡ್ಡ ವ್ಯತ್ಯಾಸ ಉಂಟುಮಾಡುತ್ತದೆ. ಮಹಿಳೆಯರು ತಮ್ಮ ಮೇಲೆಯೇ ಹೂಡಿಕೆ ಮಾಡಿದಾಗ, ಅಂದರೆ ಅವರ ನಂಬಿಕೆ, ವಿಶ್ವಾಸ, ಪ್ರತಿಭೆಯೊಂದಿಗೆ ಮುಂದುವರಿದಾಗ ಅವರ ಜೀವನ ಮಾತ್ರವಲ್ಲ, ಸಮಾಜವನ್ನೂ ಹೇಗೆ ಸಕಾರಾತ್ಮಕವಾಗಿ ಬದಲಾಯಿಸಬಲ್ಲರು ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಪ್ರತಿಭಾ ಶರ್ಮಾ ಇದ್ದಾರೆ.
ಪ್ರತಿಭಾ ಶರ್ಮಾ
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಒಂದು ಬಾರಿಯ KYC (Know Your Customer) ಪ್ರಕ್ರಿಯೆಯ ಅಗತ್ಯವಿದೆ. SEBI ವೆಬ್ಸೈಟ್ನಲ್ಲಿ ವಿವರ ಹೊಂದಿರುವ ಹಾಗೂ ನೊಂದಾಯಿತವಾಗಿರುವ ಮ್ಯೂಚುವಲ್ ಫಂಡ್ ಕಂಪನಿಗಳೊಂದಿಗೆ ಮಾತ್ರ ಮಾಡಬೇಕು. ಹೂಡಿಕೆದಾರರು ಯಾವುದೇ ದೂರುಗಳಿಗಾಗಿ ನೇರವಾಗಿ AMC ಅನ್ನು ಸಂಪರ್ಕಿಸಬಹುದು ಅಥವಾ SCORES ಪೋರ್ಟಲ್‌ನಲ್ಲಿ (scores.gov.in) ದೂರು ಸಲ್ಲಿಸಬಹುದು. ಪರಿಹಾರವು ತೃಪ್ತಿಕರವಾಗಿಲ್ಲದಿದ್ದರೆ, Smart ODR ಪೋರ್ಟಲ್ (smartodr.in/login) ಅನ್ನು ಬಳಸಬಹುದು.
HDFC ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಒಂದಾಗಿದೆ. ಇದನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು SEBI ಅನುಮೋದನೆ ಪಡೆದ ನಂತರ 2000 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಈಕ್ವಿಟಿ, ಫಿಕ್ಸೆಡ್ ಇನ್ಕಮ್ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ನಿರ್ವಹಿಸುತ್ತದೆ. ಮತ್ತು ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಬ್ಯಾಂಕುಗಳು, ಸ್ವತಂತ್ರ ಹಣಕಾಸು ಸಲಹೆಗಾರರು ಮತ್ತು ರಾಷ್ಟ್ರೀಯ ವಿತರಕರ ಮೂಲಕ ಸೇವೆಗಳನ್ನು ಒದಗಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ