
ನವದೆಹಲಿ, ಡಿಸೆಂಬರ್ 18: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿದೇಶಕ್ಕೆ ಹೋದಾಗೆಲ್ಲಾ ಭಾರತದ ಸರ್ಕಾರ ಹಾಗೂ ದೇಶದ ಪರಿಸ್ಥಿತಿ ಬಗ್ಗೆ ಟೀಕೆ ಮಾಡುವುದು ಈಗ ಸಾಮಾನ್ಯವಾಗಿ ಹೋಗಿದೆ. ಜರ್ಮನಿಯ ಮ್ಯೂನಿಕ್ ನಗರದಲ್ಲಿ ಬಿಎಂಡಬ್ಲ್ಯು ಕಾರ್ ಕಂಪನಿಯ ಫ್ಯಾಕ್ಟರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕಾರ್ಯ ಇಳಿಮುಖವಾಗಿದೆ ಎಂದು ಹೇಳಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಬಿಎಂಡಬ್ಲ್ಯುದ ಮುಖ್ಯ ಕಚೇರಿ ಮ್ಯೂನಿಕ್ ನಗರದಲ್ಲೇ ಇದೆ. ಅಲ್ಲೇ ಅದರ ವೆಲ್ಟ್ ಅಂಡ್ ಬಿಎಂಡಬ್ಲ್ಯು ಮ್ಯಾನುಫ್ಯಾಕ್ಚರಿಂಗ್ ಘಟಕ ಇದೆ. ಅಲ್ಲಿರುವ ಕೆಲಸಗಳನ್ನು ಅವಲೋಕಿಸಿದ ಅವರು, ನಂತರ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅದೇ ಘಟಕದಲ್ಲಿ ಟಿವಿಎಸ್ ಹಾಗೂ ಬಿಎಂಡಬ್ಲ್ಯು ಜಂಟಿಯಾಗಿ 450 ಸಿಸಿ ಬೈಕ್ ಅಭಿವೃದ್ಧಿಪಡಿಸುತ್ತಿರುವುದನ್ನು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ. ಬಳಿಕ ಭಾರತದಲ್ಲಿ ಉತ್ಪಾದನಾ ವಲಯ ಕುಸಿಯುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ಅವರ ಈ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ದತ್ತಾಂಶ ಸಹಿತವಾಗಿ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ಓಮನ್ ಜೊತೆಗಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಭಾರತಕ್ಕೆ ಆಗುವ ಲಾಭಗಳೇನು?
ಭಾರತದಲ್ಲಿ ಉತ್ಪಾದನೆ ಕುಸಿದಿದೆ ಎಂದ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಅಲ್ಲಗಳೆದಿದ್ದಾರೆ. ಎಲೆಕ್ಟ್ರಾನಿಕ್ಸ್, ಮೊಬೈಲ್ ಮ್ಯಾನುಫ್ಯಾಕ್ಚರಿಂಗ್, ಫಾರ್ಮಾಸ್ಯೂಟಿಕಲ್, ಎಂಜಿನಿಯರಿಂಗ್ ಗೂಡ್ಸ್, ಡಿಫೆನ್ಸ್ ಸೆಕ್ಟರ್ಗಳಲ್ಲಿ ಭಾರತದ ರಫ್ತು ಹೆಚ್ಚಿರುವುದನ್ನು ಅವರು ಅಂಕಿ ಅಂಶ ಸಮೇತ ತೋರಿಸಿದ್ಧಾರೆ. 2014ರಲ್ಲಿ ಇದ್ದ ಸ್ಥಿತಿ, ಈಗ ಇರುವ ಸ್ಥಿತಿಯನ್ನು ತುಲನೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಮಿತ್ ಮಾಳವೀಯ ಪೋಸ್ಟ್ ಮಾಡಿದ್ದಾರೆ.
ಅಮಿತ್ ಮಾಳವೀಯ ಅವರ ಎಕ್ಸ್ ಪೋಸ್ಟ್ಗಳು
Fact Check: Rahul Gandhi’s claim that production in India has gone down is FAKE.
The claim that production in India has declined is not supported by available data. Over the past decade, India’s manufacturing base, particularly in electronics and mobile phones, has expanded… pic.twitter.com/pjPA5Qd8ex
— Amit Malviya (@amitmalviya) December 18, 2025
Fact Check 2: Rahul Gandhi’s claim that manufacturing in India is declining is MISLEADING.
The assertion that manufacturing in India is in decline does not align with global and domestic production data. The automobile sector, one of the strongest indicators of manufacturing… pic.twitter.com/sAYIp3zbQl
— Amit Malviya (@amitmalviya) December 18, 2025
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯರೂ ಆಗಿರುವ ಅಮಿತ್ ಮಾಳವೀಯ ಅವರು ಮತ್ತೊಂದು ಕುತೂಹಲಕಾರಿ ದತ್ತಾಂಶ ಬಹಿರಂಗಪಡಿಸಿದ್ದಾರೆ. ವಿಶ್ವದ ಅಗ್ರಮಾನ್ಯ 10 ವಾಹನ ಉತ್ಪಾದಕ ದೇಶಗಳ ಪೈಕಿ ಎಂಟು ದೇಶಗಳಲ್ಲಿ ವಾಹನ ಉತ್ಪಾದನೆ ಕಡಿಮೆ ಆಗಿದೆ. 2014ರಲ್ಲಿ ಆಗುತ್ತಿದ್ದುದಕ್ಕಿಂತ 2024ರಲ್ಲಿ ಆಗಿರುವ ಉತ್ಪಾದನೆ ಕಡಿಮೆ. ಉತ್ಪಾದನೆ ಹೆಚ್ಚಿಸಿದ ಎರಡು ದೇಶಗಳಲ್ಲಿ ಭಾರತವೂ ಒಂದು ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?
2014ರಿಂದೀಚೆಗೆ ಭಾರತದ ವಾಹನ ಉತ್ಪಾದನೆ ಎರಡು ಪಟ್ಟು ಹೆಚ್ಚಿದೆ. ಉಕ್ಕು, ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಎಂಎಸ್ಎಂಇ ಮತ್ತು ಸರ್ವಿಸ್ ಸೆಕ್ಟರ್ಗಳೊಂದಿಗೆ ಆಟೊಮೊಬೈಲ್ ಸೆಕ್ಟರ್ ನಿಕಟ ಸಂಬಂಧ ಹೊಂದಿದೆ. ದೇಶದ ಜಿಡಿಪಿಗೆ ಆಟೊಮೊಬೈಲ್ ಸೆಕ್ಟರ್ನ ಕೊಡುಗೆ ಶೇ 7.1ರಷ್ಟಿದೆ. ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ವಾಹನ ಉತ್ಪಾದಕ ದೇಶವೆನಿಸಿದೆ ಎಂದು ಅಮಿತ್ ಮಾಳವೀಯ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ