ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು

RBI Fixed Deposit Rules From October 1: ಭಾರತೀಯ ರಿಸರ್ವ್ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಅಕ್ಟೋಬರ್ 1ರಿಂದ ಹೊಸ ಕ್ರಮ ಜಾರಿಗೆ ಬರುತ್ತದೆ. ಒಂದು ಬ್ಯಾಂಕ್​ನ ಎಲ್ಲಾ ಶಾಖೆಗಳಲ್ಲೂ ಸಮಾನ ಠೇವಣಿ ದರ ಇರಬೇಕು ಎಂಬುದು ಪ್ರಮುಖ ಹೊಸ ನಿಯಮ. ದೊಡ್ಡ ಮೊತ್ತದ ಠೇವಣಿಯಾದರೆ ಬ್ಯಾಂಕುಗಳು ಬಡ್ಡಿದರದಲ್ಲಿ ವ್ಯತ್ಯಾಸ ಮಾಡಲು ಸ್ವತಂತ್ರವಾಗಿರುತ್ತವೆ.

ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು
ಹಣ
Image Credit source: Getty Images

Updated on: Aug 03, 2026 | 7:29 PM

ಫಿಕ್ಸೆಡ್ ಡಿಪಾಸಿಟ್ (Fixed Deposit) ಅಥವಾ ಸ್ಥಿರ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಠೇವಣಿದಾರರ ಹಿತರಕ್ಷಣೆಗಾಗಿ ಆರ್‌ಬಿಐ ಠೇವಣಿ ಬಡ್ಡಿದರದ ನಿರ್ದೇಶನಗಳು, 2026 (Interest Rate on Deposits Directions, 2026) ಅಡಿಯಲ್ಲಿ ಹೊಸ ನಿಯಮಗಳನ್ನು ಪರಿಷ್ಕರಿಸಿದ್ದು, ಇವು 2026 ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ. ಬದಲಾಗಲಿರುವ ಪ್ರಮುಖ ಬ್ಯಾಂಕ್ ಡೆಪಾಸಿಟ್ ನಿಯಮಗಳು ಈ ಕೆಳಕಂಡಂತಿವೆ:

ಎಲ್ಲಾ ಶಾಖೆಗಳಲ್ಲೂ ಒಂದೇ ರೀತಿಯ ಬಡ್ಡಿದರ

ಹೊಸ ನಿಯಮದಂತೆ, ಬ್ಯಾಂಕ್‌ಗಳು ಒಂದೇ ದಿನದಂದು ಸ್ವೀಕರಿಸುವ ಒಂದೇ ರೀತಿಯ ಠೇವಣಿಗಳಿಗೆ (ಸಮಾನ ಮೊತ್ತ ಮತ್ತು ಅವಧಿ) ತಮ್ಮ ಎಲ್ಲಾ ಶಾಖೆಗಳಲ್ಲಿ ಒಂದೇ ರೀತಿಯ ಬಡ್ಡಿದರವನ್ನು (Uniform Interest Rate) ನೀಡಬೇಕು. ಬ್ರ್ಯಾಂಚ್​ನಿಂದ ಬ್ರ್ಯಾಂಚ್​ಗೆ ಬಡ್ಡಿದರದಲ್ಲಿ ಬದಲಾವಣೆ ಇರಕೂಡದು ಎಂಬುದು ಆರ್​ಬಿಐನ ಹೊಸ ಕಟ್ಟಳೆ.

ಅಂದರೆ, ಗ್ರಾಹಕರು ಬೇರೆ ಬೇರೆ ಶಾಖೆಗೆ ಹೋದರೂ ಅಥವಾ ಚೌಕಾಶಿ (Negotiation) ಮಾಡಿದರೂ ವಿಭಿನ್ನ ಬಡ್ಡಿದರಗಳನ್ನು ಪಡೆಯಲು ಇನ್ನು ಮುಂದೆ ಅವಕಾಶವಿರುವುದಿಲ್ಲ.

ಇದನ್ನೂ ಓದಿ: ಬಾಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗಲ್ಲವಾ? ಲ್ಯಾಡರಿಂಗ್ ತಂತ್ರ ಬಳಸಿ ಅಧಿಕ ಆದಾಯ ಪಡೆಯಿರಿ

ಬಲ್ಕ್ ಡಿಪಾಸಿಟ್‌ಗಳಿಗೆ ಹೆಚ್ಚಿನ ನಮ್ಯತೆ

₹2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಬೃಹತ್ ಠೇವಣಿಗಳಿಗೆ (Bulk Deposits) ಬ್ಯಾಂಕ್‌ಗಳು ಲಿಕ್ವಿಡಿಟಿ ಕವರೇಜ್ ರೇಶಿಯೋ (LCR) ಚೌಕಟ್ಟನ್ನು ಆಧರಿಸಿ ಪ್ರತ್ಯೇಕ ಬಡ್ಡಿದರಗಳನ್ನು ನಿಗದಿಪಡಿಸಲು ಆರ್‌ಬಿಐ ಅವಕಾಶ ನೀಡಿದೆ.

ಪಾರದರ್ಶಕತೆ ಮತ್ತು ಜಾಲತಾಣದಲ್ಲಿ ಪ್ರಕಟಣೆ

ಪ್ರತಿಯೊಂದು ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರಗಳನ್ನು ಆನ್‌ಲೈನ್‌ನಲ್ಲಿ ಮುಂಚಿತವಾಗಿಯೇ ಸಾರ್ವಜನಿಕವಾಗಿ ಪ್ರಕಟಿಸಬೇಕು.

ಬೃಹತ್ ಠೇವಣಿಗಳ ಬಡ್ಡಿದರಗಳನ್ನು ಪ್ರತಿದಿನ ಬೆಳಿಗ್ಗೆ 10:00 ರಿಂದ 10:10 ರೊಳಗೆ ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ನವೀಕರಿಸಬೇಕಾಗುತ್ತದೆ.

ಇದನ್ನೂ ಓದಿ: ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ?

ಸಾಮಾನ್ಯ ಎಫ್‌ಡಿ ಹೂಡಿಕೆದಾರರ ಮೇಲಾಗುವ ಪರಿಣಾಮಗಳೇನು?

ಸಾಮಾನ್ಯ ರಿಟೇಲ್ ಹೂಡಿಕೆದಾರರಿಗೆ ಬಡ್ಡಿದರಗಳ ಹೋಲಿಕೆ ಮಾಡುವುದು ಮತ್ತು ಮಾಹಿತಿ ಪಡೆಯುವುದು ಅತ್ಯಂತ ಸರಳ ಹಾಗೂ ಪಾರದರ್ಶಕವಾಗಲಿದೆ.

ಆರ್​ಬಿಐನ ಈ ನೂತನ ನಿಯಮಗಳು ಬ್ಯಾಂಕ್‌ಗಳು ಬಡ್ಡಿದರವನ್ನು ನಿಗದಿಪಡಿಸುವ ಮತ್ತು ಪ್ರಕಟಿಸುವ ವಿಧಾನಕ್ಕೆ ಸಂಬಂಧಿಸಿವೆ. ಇದರಿಂದ ಎಫ್‌ಡಿ ಬಡ್ಡಿದರಗಳು ದಿಢೀರನೇ ಹೆಚ್ಚಾಗುವುದಿಲ್ಲ ಅಥವಾ ಕಡಿಮೆಯಾಗುವುದಿಲ್ಲ.

ಈಗಾಗಲೇ ಚಾಲ್ತಿಯಲ್ಲಿರುವ ಎಫ್‌ಡಿಗಳಿಗೆ ಅವುಗಳ ಮುಕ್ತಾಯದ ಅವಧಿಯವರೆಗೆ (Maturity) ಒಪ್ಪಂದದ ಪ್ರಕಾರವೇ ಬಡ್ಡಿ ಸಿಗಲಿದೆ. ಆದರೆ ಅಕ್ಟೋಬರ್ 1 ರ ನಂತರ ನವೀಕರಿಸುವ ಅಥವಾ ಹೊಸದಾಗಿ ಮಾಡುವ ಎಫ್‌ಡಿಗಳಿಗೆ ಮಾತ್ರ ಹೊಸ ನಿಯಮ ಅನ್ವಯಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us