
ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank of India) ಭಾರತದ ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆ. ಇವತ್ತು ಸರ್ಕಾರಕ್ಕೆ ಅದು 2024-25ರ ಹಣಕಾಸು ವರ್ಷದ ತನ್ನ ಡಿವಿಡೆಂಡ್ ಅನ್ನು ನೀಡಲಿದೆ. ಹಿಂದಿನ ವರ್ಷ (2023-24ರಲ್ಲಿ) 2.1 ಲಕ್ಷ ಕೋಟಿ ರೂ ಹಣವನ್ನು ಸರ್ಕಾರಕ್ಕೆ ಕೊಟ್ಟಿತ್ತು. ಅದು ಸಾರ್ವಕಾಲಿಕ ದಾಖಲೆ ಮೊತ್ತವಾಗಿದೆ. 2022-23ರ ವರ್ಷದಲ್ಲಿ ಕೊಟ್ಟಿರುವುದಕ್ಕಿಂತ ಎರಡು ಪಟ್ಟು ಹೆಚ್ಚಿನ ಮೊತ್ತ ಅದು. ಈ ವರ್ಷ ಸರ್ಕಾರಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇರುವುದರಿಂದ ರಿಸರ್ವ್ ಬ್ಯಾಂಕ್ ಇನ್ನೂ ಹೆಚ್ಚಿನ ಮೊತ್ತವನ್ನು ಕೊಟ್ಟರೆ ಅಚ್ಚರಿ ಇರಲ್ಲ.
ಲಿಸ್ಟೆಡ್ ಕಂಪನಿಗಳು ತಮ್ಮ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಡಿವಿಡೆಂಡ್ ಆಗಿ ಘೋಷಿಸುತ್ತವೆ. ಕಂಪನಿಯ ನಿರ್ದೇಶಕರ ಮಂಡಳಿ ಇದನ್ನು ನಿರ್ಧರಿಸುತ್ತದೆ. ಪ್ರತೀ ಷೇರಿಗೆ ಡಿವಿಡೆಂಡ್ ನಿಗದಿತವಾಗಿರುತ್ತದೆ. ಲಿಸ್ಟೆಡ್ ಕಂಪನಿಯಲ್ಲವಾದರೂ ಆರ್ಬಿಐ ತನ್ನ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಡಿವಿಡೆಂಡ್ ಆಗಿ ಸರ್ಕಾರಕ್ಕೆ ನೀಡುತ್ತದೆ. ಎಷ್ಟು ಡಿವಿಡೆಂಡ್ ಎಂದು ನಿರ್ಧರಿಸಲು ಇಸಿಎಫ್ ಸೂತ್ರವನ್ನು ಅನುಸರಿಸಲಾಗುತ್ತದೆ.
2019ರಲ್ಲಿ ಪರಿಷ್ಕರಿಸಲಾದ ಎಕನಾಮಿಕ್ ಕ್ಯಾಪಿಟಲ್ ಫ್ರೇಮ್ವರ್ಕ್ ಪ್ರಕಾರ ಆರ್ಬಿಐ ಸರ್ಕಾರಕ್ಕೆ ಡಿವಿಡೆಂಡ್ ಕೊಡುತ್ತದೆ. ತನ್ನ ಬ್ಯಾಲನ್ಸ್ ಶೀಟ್ನಲ್ಲಿ ಶೇ. 5.5ರಿಂದ ಶೇ. 6.5ರಷ್ಟು ಮೊತ್ತವನ್ನು ರಿಸ್ಕ್ ಬಫರ್ ಆಗಿ ಇಟ್ಟುಕೊಳ್ಳುತ್ತದೆ. ಇನ್ನುಳಿದ ಹೆಚ್ಚುವರಿ ಮೊತ್ತವನ್ನು ಸರ್ಕಾರಕ್ಕೆ ನೀಡಲು ಪರಿಗಣಿಸಬಹುದು.
ಇದನ್ನೂ ಓದಿ: 1 ಬ್ಯಾರಲ್ ಕಚ್ಛಾ ತೈಲದಿಂದ ಪೆಟ್ರೋಲ್, ಡೀಸಲ್ ಸೇರಿ ಏನೆಲ್ಲಾ ತಯಾರಿಸಬಹುದು ಗೊತ್ತಾ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ