Card Tokenisation: ಕಾರ್ಡ್ ಟೋಕನೈಸೇಷನ್ ಗಡುವನ್ನು ಸೆಪ್ಟೆಂಬರ್ 30ರ ತನಕ ವಿಸ್ತರಿಸಿದ ಆರ್ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಕಾರ್ಡ್ ಟೋಕನೈಸೇಷನ್ ಗಡುವನ್ನು ಸೆಪ್ಟೆಂಬರ್ 30, 2022ರ ತನಕ ವಿಸ್ತರಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನಿಂದ (RBI) ಕಾರ್ಡ್ ಟೋಕನೈಸೇಷನ್ ಗಡುವು ವಿಸ್ತರಣೆ ಮಾಡಲಾಗಿದೆ. ಇದೀಗ 3 ತಿಂಗಳ ಅವಧಿಯನ್ನು ನೀಡಲಾಗಿದೆ. ಈ ಹಿಂದೆ ಇದ್ದ ಜೂನ್ 30, 2022ರ ಗಡುವು ಸೆಪ್ಟೆಂಬರ್ 30, 2022ಕ್ಕೆ ಮುಂದಕ್ಕೆ ಹೋಗಿದೆ. ಗ್ರಾಹಕರು ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುವಂಥವರಿಗೆ ಜುಲೈ 1ರಿಂದ ಪ್ರತಿ ವಹಿವಾಟಿಗೂ ಎಲ್ಲ ಅಗತ್ಯ ಮಾಹಿತಿಗಳನ್ನು ನಮೂದಿಸಬೇಕು. 16 ಅಂಕಿಯ ಕಾರ್ಡ್ ಸಂಖ್ಯೆ, ಅವಧಿ ಮುಕ್ತಾಯದ ದಿನ, ಮತ್ತು ಕಾರ್ಡ್ ವೆರಿಫಿಕೇಷನ್ ವ್ಯಾಲ್ಯೂ (CVV) ಈ ಎಲ್ಲವನ್ನೂ ಭರ್ತಿ ಮಾಡಬೇಕು. ಇದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಕಾರ್ಡ್ ಆನ್ ಫೈಲ್ ಟೋಕನೈಸೇಷನ್ (CoFT) ಎಂಬ ಆಯ್ಕೆಯು ಇದ್ದು, ಕಾರ್ಡ್ನ ಮಾಹಿತಿಯನ್ನು “ಟೋಕನ್” ಜತೆಗೆ ಬದಲಿ ಮಾಡುತ್ತದೆ. ಪ್ರತಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತು ಮರ್ಚೆಂಟ್ ಪ್ಲಾಟ್ಫಾರ್ಮ್ಗೆ ನಿರ್ದಿಷ್ಟ ಟೋಕನ್ ಇರುತ್ತದೆ. ಇದನ್ನು ಪೇಮೆಂಟ್ ಬಿಜಿನೆಸ್ಗಳು ಮತ್ತು ಕಾರ್ಡ್ ನೆಟ್ವರ್ಕ್ಗಳಾದ ವೀಸಾ, ಮಾಸ್ಟರ್ಕಾರ್ಡ್ ಮತ್ತು ರುಪೇ ಅಭಿವೃದ್ಧಿಪಡಿಸುತ್ತಿವೆ.
ಈ ಬಗ್ಗೆ ಆರ್ಬಿಐ ಟ್ವೀಟ್ ಮಾಡಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ದಾರರಿಗೆ ತಮ್ಮ ಕಾರ್ಡ್ಗಳನ್ನು ಟೋಕನೈಸ್ ಮಾಡುವುದನ್ನು ಉತ್ತೇಜಿಸುತ್ತದೆ ಎಂದು ಹೇಳಿದೆ. ವಿವಿಧ ಸುತ್ತೋಲೆಗಳಲ್ಲಿ, ಕಾರ್ಡ್ದಾರರು ತಮ್ಮ ಕಾರ್ಡ್ಗಳನ್ನು ಟೋಕನೈಸ್ ಮಾಡುವಂತೆ ಆರ್ಬಿಐ ಕೇಳಿದೆ. ಈ ಮೂಲಕವಾಗಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಚೌಕಟ್ಟನ್ನು ರೂಪಿಸುವ ಪ್ರಯತ್ನ ನಡೆದಿದೆ. ಈ ಸುರಕ್ಷತೆ ಇಲ್ಲ ಎಂಬುದು ಸದ್ಯಕ್ಕೆ ಇರುವ ಆಕ್ಷೇಪವಾಗಿದೆ.
ಈ ವಿಸ್ತರಣೆಯೊಂದಿಗೆ ಪಾವತಿ ಅಗ್ರಿಗೇಟರ್ಸ್, ಪಾವತಿ ಗೇಟ್ವೇಗಳು ಮತ್ತು ವರ್ತಕರು ಗ್ರಾಹಕರ ಕ್ರೆಡಿಟ್/ ಡೆಬಿಟ್ ಕಾರ್ಡ್ಸ್ ಅನ್ನು ತಮ್ಮ ಡೇಟಾಬೇಸ್ ಅನ್ನು ಸೆಪ್ಟೆಂಬರ್ 30ರ ವರೆಗೆ ಸಂಗ್ರಹಿಸಬಹುದು. ಕಾರ್ಡ್ದಾರರು ಒಂದು ಸಲದ ನೋಂದಣಿ ಪ್ರಕ್ರಿಯೆಯನ್ನು CoFT ಚೌಕಟ್ಟಿನ ಅಡಿಯಲ್ಲಿ ಪ್ರತಿ ಕಾರ್ಡ್ಗೆ ಹಾಗೂ ಆನ್ಲೈನ್ ಅಥವಾ ಇ-ಕಾಮರ್ಸ್ ವ್ಯಾಪಾರಿಗಳ ಪ್ರತಿ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ನಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅವರು ತಮ್ಮ ಕಾರ್ಡ್ ಮಾಹಿತಿ ನಮೂದಿಸಬೇಕಾಗುತ್ತದೆ ಮತ್ತು ಟೋಕನ್ ಸೃಷ್ಟಿಗೆ ಅನುಮತಿ ನೀಡಬೇಕಾಗುತ್ತದೆ. ಈ ಒಪ್ಪಿಗೆಯನ್ನು ಅಡಿಷನಲ್ ಫ್ಯಾಕ್ಟರ್ ಅಥೆಂಟಿಕೇಷನ್ (AFA) ಮೂಲಕ ದೃಢೀಕರಿಸಬೇಕಾಗುತ್ತದೆ.
ಇದನ್ನೂ ಓದಿ: Tokenisation: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ರುಪೇ ಕಾರ್ಡ್ಗಳಿಗೆ ಟೋಕನೈಸೇಷನ್ ಘೋಷಣೆ
Published On - 11:59 am, Sat, 25 June 22