Amazon Pay: ಅಮೇಜಾನ್​ಗೆ 3 ಕೋಟಿ ದಂಡ ವಿಧಿಸಿದ ಭಾರತೀಯ ರಿಸರ್ವ್ ಬ್ಯಾಂಕ್

RBI Impose Penalty on Amazon Pay: ಪ್ರೀಪೇಡ್ ಪೇಮೆಂಟ್ ಇನ್ಸ್​​ಟ್ರುಮೆಂಟ್ಸ್ (ಪಿಪಿಐ) ಮತ್ತು ಕೆವೈಸಿ ವಿಚಾರದಲ್ಲಿ ಕೆಲ ನಿಯಮಗಳಿಗೆ ಬದ್ಧವಾಗದ ಅಮೇಜಾನ್ ಪೇ ಪ್ರೈ ಲಿ ಸಂಸ್ಥೆಯ ಮೇಲೆ ಆರ್​ಬಿಐ 3,06,66,000 ರೂ ದಂಡ ವಿಧಿಸಿದೆ ಎಂದು ಆರ್​ಬಿಐ ತನ್ನ ಪ್ರಕಟಣೆಯಲ್ಲಿ ಹೇಳಿದೆ.

Amazon Pay: ಅಮೇಜಾನ್​ಗೆ 3 ಕೋಟಿ ದಂಡ ವಿಧಿಸಿದ ಭಾರತೀಯ ರಿಸರ್ವ್ ಬ್ಯಾಂಕ್
ಅಮೇಜಾನ್ ಪೇ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 03, 2023 | 6:19 PM

ನವದೆಹಲಿ: ಪ್ರೀಪೇಡ್ ಪೇಮೆಂಟ್ ಇನ್ಸ್​​ಟ್ರೂಮೆಂಟ್ಸ್ (PPI- Prepaid Payment Instrument) ಮತ್ತು ಕೆವೈಸಿ (KYC- Know Your Customer) ನಿಯಮಗಳನ್ನು ಪಾಲನೆ ಮಾಡದ ಕಾರಣಕ್ಕೆ ಅಮೇಜಾನ್ ಪೇ ಸಂಸ್ಥೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ 3.06 ಕೋಟಿ ರೂನಷ್ಟು ದಂಡ ವಿಧಿಸಿದೆ. ಈ ಸಂಗತಿಯನ್ನು ಆರ್​ಬಿಐ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದೆ.

ಪ್ರೀಪೇಡ್ ಪೇಮೆಂಟ್ ಇನ್ಸ್​​ಟ್ರುಮೆಂಟ್ಸ್ (ಪಿಪಿಐ) ಮತ್ತು ಕೆವೈಸಿ ವಿಚಾರದಲ್ಲಿ ಕೆಲ ನಿಯಮಗಳಿಗೆ ಬದ್ಧವಾಗದ ಅಮೇಜಾನ್ ಪೇ ಪ್ರೈ ಲಿ ಸಂಸ್ಥೆಯ ಮೇಲೆ ಆರ್​ಬಿಐ 3,06,66,000 ರೂ ದಂಡ ವಿಧಿಸಿದೆ ಎಂದು ಆರ್​ಬಿಐ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಆರ್​ಬಿಐ ನಿರ್ದಿಷ್ಟಪಡಿಸಿದ ಕೆವೈಸಿಯ ಕೆಲ ಅಗತ್ಯ ಅಂಶಗಳನ್ನು ಅಮೇಜಾನ್ ಪೇ ಪಾಲಿಸಿಲ್ಲ ಎಂಬುದು ಆರೋಪ. ಈ ಸಂಬಂಧ ಆರ್​ಬಿಐ ಅಮೇಜಾನ್ ಪೇ ಸಂಸ್ಥೆಗೆ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು. ಇದಕ್ಕೆ ಅಮೇಜಾನ್ ಪೇ ಕೊಟ್ಟ ಪ್ರತ್ಯುತ್ತರದ ಆಧಾರದ ಮೇಲೆ ಆರ್​ಬಿಐ ಸುಮಾರು 3 ಕೋಟಿ ರೂನಷ್ಟು ದಂಡ ವಿಧಿಸಲು ತೀರ್ಮಾನಿಸಿತು ಎನ್ನಲಾಗಿದೆ.

ಆರ್​ಬಿಐ ನೀಡಿರುವ ಹೇಳಿಕೆ ಪ್ರಕಾರ 2007ರ ಪೇಮೆಂಟ್ ಅಂಡ್ ಸೆಟಲ್ಮೆಂಟ್ ಸಿಸ್ಟಮ್ಸ್ ಕಾಯ್ದೆಯ ಸೆಕ್ಷನ್ 30ರ ಅಡಿಯಲ್ಲಿ ದಂಡ ಹಾಕಲಾಗಿದೆ.

ಇದನ್ನೂ ಓದಿCitigroup Layoffs: ಜೆಪಿ ಮಾರ್ಗನ್, ಗೋಲ್ಡ್​ಮನ್ ಸ್ಯಾಕ್ಸ್ ಬಳಿಕ ಈಗ ಸಿಟಿಗ್ರೂಪ್​ನಿಂದಲೂ ನೂರಾರು ಉದ್ಯೋಗಿಗಳು ವಜಾ

ಅದೇ ವೇಳೆ, ಈಗ ದಂಡ ವಿಧಿಸಲಾಗಿರುವುದು ನಿಯಮಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದ್ದಕ್ಕೆ ಮಾತ್ರ. ಆದರೆ, ಅಮೇಜಾನ್ ಪೇ ಮತ್ತದರ ಗ್ರಾಹಕರ ನಡುವಿನ ಒಪ್ಪಂದ ಅಥವಾ ವಹಿವಾಟಿನ ಸಿಂಧುತ್ವಕ್ಕೂ ಈಗ ದಂಡ ವಿಧಿಸಲಾಗಿರುವುದಕ್ಕೂ ಸಂಬಂಧ ಇಲ್ಲ ಎಂದೂ ಆರ್​ಬಿಐ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Fri, 3 March 23