Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭ್ಯುದಯ ಸಹಕಾರಿ ಬ್ಯಾಂಕ್ ಸೂಪರ್​ಸೀಡ್ ಮಾಡಿದ ಆರ್​ಬಿಐ; ಕರ್ನಾಟಕದಲ್ಲಿ ಎಲ್ಲೆಲ್ಲಿವೆ ಈ ಬ್ಯಾಂಕ್​ನ ಶಾಖಾ ಕಚೇರಿಗಳು?

RBI Supersedes Abhyudaya Co-Op Bank Administration: ಮಹಾರಾಷ್ಟ್ರ, ಕರ್ನಾಟಕ ಹಾಗು ಗುಜರಾತ್​ನಲ್ಲಿ ಶಾಖೆಗಳನ್ನು ಹೊಂದಿರುವ ಅಭ್ಯುದಯ ಸಹಕಾರಿ ಬ್ಯಾಂಕ್​ನ ಆಡಳಿತದ ಕಳಪೆ ನಿರ್ವಹಣೆ ಹಿನ್ನೆಲೆಯಲ್ಲಿ ಅದರ ಮಂಡಳಿಯನ್ನು ಆರ್​​ಬಿಐ ಸೂಪರ್​ಸೀಡ್ ಮಾಡಿದೆ. ಹೊಸ ಆಡಳಿತಗಾರರನ್ನು ಒಂದು ವರ್ಷದ ಅವಧಿಗೆ ನೇಮಿಸಲಾಗಿದೆ, ಮತ್ತು ಸಲಹೆಗಾರರ ಸಮಿತಿಯನ್ನೂ ರಚಿಸಲಾಗಿದೆ. ಇನ್ನುಳಿದಂತೆ ಬ್ಯಾಂಕ್​ನ ಚಟುವಟಿಕೆ ಯಥಾಪ್ರಕಾರ ನಡೆಯಲಿದೆ.

ಅಭ್ಯುದಯ ಸಹಕಾರಿ ಬ್ಯಾಂಕ್ ಸೂಪರ್​ಸೀಡ್ ಮಾಡಿದ ಆರ್​ಬಿಐ; ಕರ್ನಾಟಕದಲ್ಲಿ ಎಲ್ಲೆಲ್ಲಿವೆ ಈ ಬ್ಯಾಂಕ್​ನ ಶಾಖಾ ಕಚೇರಿಗಳು?
ಅಭ್ಯುದಯ ಕೋ ಆಪರೇಟಿವ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 25, 2023 | 11:54 AM

ಮುಂಬೈ, ನವೆಂಬರ್ 25: ಮಹಾರಾಷ್ಟ್ರ ಮೂಲದ ಅಭ್ಯುದಯ ಕೋ ಆಪರೇಟಿವ್ ಬ್ಯಾಂಕ್​ನ (Abhyudaya Co-operative Bank) ಆಡಳಿತದ ಬಗ್ಗೆ ಅಸಮಾಧಾನಗೊಂಡಿರುವ ಆರ್​ಬಿಐ ಈ ಬ್ಯಾಂಕ್​ನ ಬೋರ್ಡ್ ಅನ್ನು ಸೂಪರ್​ಸೀಡ್ (supersede) ಮಾಡಿದೆ. ಒಂದು ವರ್ಷ ಕಾಲ ಆರ್​ಬಿಐ ಹೊಸ ಮಂಡಳಿಯನ್ನು ಈ ಬ್ಯಾಂಕ್ ನಿರ್ವಹಣೆಗೆಂದು (bank administration) ನೇಮಿಸಿದೆ. ವರದಿಯ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯ ಜನರಲ್ ಮ್ಯಾನೇಜರ್ ಸತ್ಯಪ್ರಕಾಶ್ ಪಾಠಕ್ ಅವರು ಒಂದು ವರ್ಷ ಕಾಲ ಅಭ್ಯುದಯ ಸಹಕಾರಿ ಬ್ಯಾಂಕ್​ನ ಆಡಳಿತಗಾರರಾಗಿರಲಿದ್ದಾರೆ. ಇವರಿಗೆ ಸಹಾಯವಾಗಿ ಸಲಹೆಗಾರರ ಸಮಿತಿಯೊಂದನ್ನೂ ಆರ್​ಬಿಐ ರೂಪಿಸಿದೆ.

ಅಭ್ಯುದಯ ಕೋ ಆಪರೇಟಿವ್ ಬ್ಯಾಂಕ್​ಗೆ ಆರ್​​ಬಿಐ ನೇಮಿಸಿದ ಹೊಸ ಆಡಳಿತ ತಂಡ:

ಅಡ್ಮಿನಿಸ್ಟ್ರೇಟರ್: ಸತ್ಯಪ್ರಕಾಶ್ ಪಾಠಕ್, ಎಸ್​ಬಿಐನ ಮಾಜಿ ಜನರಲ್ ಮ್ಯಾನೇಜರ್

ಸಲಹೆಗಾರರ ಸಮಿತಿ ಸದಸ್ಯರು

  1. ವೆಂಕಟೇಶ್ ಹೆಗ್ಡೆ, ಎಸ್​ಬಿಐನ ಮಾಜಿ ಜನರಲ್ ಮ್ಯಾನೇಜರ್
  2. ಮಹೇಂದ್ರ ಛಜೇದ್, ಚಾರ್ಟರ್ಡ್ ಅಕೌಂಟೆಂಟ್
  3. ಸುಹಾಸ್ ಗೋಖಲೆ, ಕಾಸ್ಮೋಸ್ ಕೋ ಆಪರೇಟಿವ್ ಬ್ಯಾಂಕ್​ನ ಮಾಜಿ ಎಂಡಿ

ಇದನ್ನೂ ಓದಿ: 19 ಫಾರೆಕ್ಸ್ ಟ್ರೇಡಿಂಗ್ ಸಂಸ್ಥೆಗಳು ಆರ್​ಬಿಐನ ಅಲರ್ಟ್ ಪಟ್ಟಿಗೆ; ಒಟ್ಟು ಸಂಖ್ಯೆ 75ಕ್ಕೆ ಏರಿಕೆ

ಬ್ಯಾಂಕ್ ಚಟುವಟಿಕೆಗಳಿಗೆ ನಿರ್ಬಂಧ ಇರುವುದಿಲ್ಲ

ಸರಿಯಾದ ಆಡಳಿತ ನಿರ್ವಹಣೆ ಇರಲಿಲ್ಲದ ಕಾರಣ ಅಭ್ಯುದಯ ಸಹಕಾರಿ ಬ್ಯಾಂಕ್​ನ ಆಡಳಿತ ಮಂಡಳಿಯನ್ನು ಆರ್​ಬಿಐ ಬದಲಿಸಿದೆ. ಅದು ಬಿಟ್ಟರೆ ಬೇರೆ ಬ್ಯಾಂಕಿಂಗ್ ಚಟುವಟಿಕೆಗಳು ಯಥಾಪ್ರಕಾರ ಇರಲಿವೆ. ಆರ್​ಬಿಐ ಯಾವ ನಿರ್ಬಂಧಗಳನ್ನೂ ವಿಧಿಸಿಲ್ಲ. ಹೊಸ ಆಡಳಿತ ತಂಡ ಒಂದು ವರ್ಷದವರೆಗೆ ಸಹಕಾರಿ ಬ್ಯಾಂಕ್​ನ ಉಸ್ತುವಾರಿ ನೋಡಿಕೊಳ್ಳುತ್ತದೆ. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.

ಅಭ್ಯುದಯ ಕೋ ಆಪರೇಟಿವ್ ಬ್ಯಾಂಕ್ ಕಚೇರಿಗಳು ಎಷ್ಟಿವೆ?

ಮುಂಬೈನಲ್ಲಿ ಪ್ರಧಾನ ಕಛೇರಿ ಹೊಂದಿರುವ ಅಭ್ಯುದಯ ಸಹಕಾರಿ ಬ್ಯಾಂಕ್ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ 50ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಮುಂಬೈನಲ್ಲೇ 30ಕ್ಕೂ ಹೆಚ್ಚು ಶಾಖೆಗಳಿವೆ. ಕರ್ನಾಟಕದಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ಐದಾರು ಶಾಖೆಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ