ಆರ್​​ಬಿಐನಿಂದ ಗುಡ್​ನ್ಯೂಸ್​​; ಫೀಚರ್​ ಫೋನ್​​​ನಿಂದಲೂ ಡಿಜಿಟಲ್​ ಪಾವತಿಗೆ ಅವಕಾಶ, ಇಂಟರ್​​​ನೆಟ್​ ಅಗತ್ಯವೂ ಇರುವುದಿಲ್ಲ !

| Updated By: Lakshmi Hegde

Updated on: Dec 08, 2021 | 12:19 PM

RBI Monetary Policy Committee: ಫೀಚರ್​ ಫೋನ್​​ಗಳಲ್ಲಿನ ಯುಪಿಐ ಆಧಾರಿತ ಪಾವತಿ ಉತ್ಪನ್ನಗಳನ್ನು ರಿಸರ್ವ್​ ಬ್ಯಾಂಕ್​​ನ ರೆಗ್ಯೂಲೇಟರಿ ಸ್ಯಾಂಡ್​ಬಾಕ್ಸ್​​ ನಿಯಂತ್ರಿಸುತ್ತದೆ ಎಂದೂ  ಶಕ್ತಿಕಾಂತ್​ ದಾಸ್ ಮಾಹಿತಿ ನೀಡಿದ್ದಾರೆ.

ಆರ್​​ಬಿಐನಿಂದ ಗುಡ್​ನ್ಯೂಸ್​​; ಫೀಚರ್​ ಫೋನ್​​​ನಿಂದಲೂ ಡಿಜಿಟಲ್​ ಪಾವತಿಗೆ ಅವಕಾಶ, ಇಂಟರ್​​​ನೆಟ್​ ಅಗತ್ಯವೂ ಇರುವುದಿಲ್ಲ !
ಶಕ್ತಿಕಾಂತ್​ ದಾಸ್​
Follow us on

ಡಿಜಿಟಲ್​ ವ್ಯವಹಾರಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆರ್​ಬಿಐ ಒಂದು ಮಹತ್ವದ ಘೋಷಣೆ ಮಾಡಿದೆ. ಅತಿಶೀಘ್ರದಲ್ಲಿಯೇ ಫೀಚರ್​ ಫೋನ್​ಗಳಲ್ಲೂ ಕೂಡ ಡಿಜಿಟಲ್​ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಂದರೆ ಇನ್ನುಮುಂದೆ ಫೀಚರ್​ ಫೋನ್​​ಗಳಲ್ಲೂ ಕೂಡ ಏಕೀಕೃತ ಪಾವತಿ ಇಂಟರ್​​ಫೇಸ್​ (ಯುಪಿಐ -UPI) ಆಧಾರಿತ ವೈಶಿಷ್ಟ್ಯಗಳು ಸಿಗುವಂತೆ ಆರ್​ಬಿಐ ರೂಪಿಸಲಿದೆ. ಹಾಗೇ, ಇದು ಮುಂಬರುವ ದಿನಗಳಲ್ಲಿ ಇಂಟರ್​ನೆಟ್​ ಮುಕ್ತ ಯುಪಿಐ ಪಾವತಿಯನ್ನು ಸಾಧ್ಯವಾಗಿಸುತ್ತದೆ.  ಇತ್ತೀಚೆಗೆ ನಡೆದ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC)y ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾಗಿ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಹೇಳಿದ್ದಾರೆ.  ಈಗೀಗ ದೇಶದಲ್ಲಿ ಡಿಜಿಟಲ್​ ಮಾದರಿಯ ಯುಪಿಐ ಪಾವತಿಯೇ ಹೆಚ್ಚಾಗಿದೆ. ಹಾಗಾಗಿ ಈ ಯುಪಿಐ ಪಾವತಿ ವ್ಯವಸ್ಥೆಯನ್ನು ಸರಳೀಕೃತಗೊಳಿಸಲು ಶಕ್ತಿಕಾಂತ್​ ದಾಸ್​ ಅವರು ಮೂರು ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ.   

ದೇಶದಲ್ಲಿ ಒಟ್ಟಾರೆ ವ್ಯವಹಾರದಲ್ಲಿ ಬಳಕೆಯಾಗುವ ಏಕೈಕ ಅತ್ಯಂತ ದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯೆಂದರೆ ಯುಪಿಐ. ಇದನ್ನು ಅನೇಕ ಜನರು ಬಳಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಡಿಮೆ ಮೊತ್ತದ ಪಾವತಿ ವ್ಯವಸ್ಥೆಯಲ್ಲಿ ಬಹುಮುಖ್ಯವಾಗಿ ಬಳಕೆಯಾಗುತ್ತದೆ. ಡಿಜಿಟಲ್​ ಪಾವತಿಗಳನ್ನು ಮತ್ತಷ್ಟು ಆಳವಾಗಿಸಲು, ಮತ್ತಷ್ಟು ಒಳಗೊಳ್ಳಲು, ಗ್ರಾಹಕರಿಗೆ ವಹಿವಾಟುಗಳನ್ನು ಸುಲಭಗೊಳಿಸಲು, ಹಣಕಾಸು ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಚಿಲ್ಲರೆ ಗ್ರಾಹಕರ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಪೂರೈಕೆದಾರರ ಸಾಮರ್ಥ್ಯ ಹೆಚ್ಚಿಸಲು ಇದೀಗ ಫೀಚರ್​ ಫೋನ್​​ನಲ್ಲೂ ಯುಪಿಐ ಆಧಾರಿತ ಪಾವತಿ ವ್ಯವಸ್ಥೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಫೀಚರ್​ ಫೋನ್​​ಗಳಲ್ಲಿನ ಯುಪಿಐ ಆಧಾರಿತ ಪಾವತಿ ಉತ್ಪನ್ನಗಳನ್ನು ರಿಸರ್ವ್​ ಬ್ಯಾಂಕ್​​ನ ರೆಗ್ಯೂಲೇಟರಿ ಸ್ಯಾಂಡ್​ಬಾಕ್ಸ್​​ ನಿಯಂತ್ರಿಸುತ್ತದೆ ಎಂದೂ  ಶಕ್ತಿಕಾಂತ್​ ದಾಸ್ ಮಾಹಿತಿ ನೀಡಿದ್ದಾರೆ.

ಹಣಕಾಸು ಮಾರುಕಟ್ಟೆಯಲ್ಲಿ ರಿಟೇಲ್​ ಗ್ರಾಹಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ರಿಸರ್ವ್​ ಬ್ಯಾಂಕ್​ ಹಲವು ಕ್ರಮಗಳ ಮೂಲಕ ವಿಶೇಷ ಪ್ರಯತ್ನ ಮಾಡುತ್ತಿದೆ. ಉದಾಹರಣೆಗೆ ಇತ್ತೀಚೆಗೆ ಉದ್ಘಾಟಿಸಲಾದ ರಿಟೇಲ್​ ಡೈರೆಕ್ಟ್​ ಸ್ಕೀಮ್​, ಇಂಟರ್​ನೆಟ್​ ಬ್ಯಾಂಕ್​ ವ್ಯವಸ್ಥೆ. ಈ ವ್ಯವಸ್ಥೆಯನ್ನು ಪ್ರಾಥಮಿಕ ಮತ್ತು ದ್ವಿತೀಯ ಮಾರುಕಟ್ಟೆಗಳಲ್ಲೂ ಬಳಸಬಹುದು. ಅದರಲ್ಲೂ ಆರಂಭಿಕ ಸಾರ್ವಜನಿಕ ಕೊಡುಗೆಗಳ(IPO) ಕ್ಷೇತ್ರದಲ್ಲಿ ಯುಪಿಐ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಹೀಗಾಗಿ ವ್ಯವಹಾರ ಸರಳೀಕರಿಸಲು ಆರ್​ಬಿಐ ಹೆಚ್ಚೆಚ್ಚು ಪ್ರಯತ್ನ ಮಾಡುತ್ತಿದೆ ಎಂದು ಶಕ್ತಿಕಾಂತ್​ ದಾಸ್​ ಹೇಳಿದ್ದಾರೆ.

ಇದನ್ನೂ ಓದಿ: ಪರಿಷತ್ ಆಪರೇಷನ್ ಆಟ ಶುರು: ಬೆಳಗ್ಗೆ ಬಿಜೆಪಿ ಸೇರ್ಪಡೆ, ಸಂಜೆ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಪೂರ್ಣಿಮಾ

Published On - 11:49 am, Wed, 8 December 21