ನವದೆಹಲಿ, ಆಗಸ್ಟ್ 6: ಬಹಳ ಜನಪ್ರಿಯವಾಗಿದ್ದ ಮತ್ತು ಅನ್ಲಿಮಿಟೆಡ್ 5ಜಿ ಡಾಟಾ ಕೊಡುತ್ತಿದ್ದ ಎರಡು ಜನಪ್ರಿಯ ಪ್ಲಾನ್ಗಳನ್ನು ರಿಲಾಯನ್ಸ್ ಜಿಯೋ ಕೈಬಿಟ್ಟಿದೆ. ಜಿಯೋದಲ್ಲಿ 395 ರೂ ಮತ್ತು 1,559 ರೂ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ಗಳು ಇನ್ಮುಂದೆ ಸಿಕ್ಕುವುದಿಲ್ಲ. ತನ್ನ ಸರಾಸರಿ ಆದಾಯ (ಎಆರ್ಪಿಯು) ಹೆಚ್ಚಿಸಲು ರಿಲಾಯನ್ಸ್ ಜಿಯೋ ಮಾಡಿರುವ ದೊಡ್ಡ ಪ್ಲಾನ್ನ ಒಂದು ಭಾಗ ಇದು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಿಲಾಯನ್ಸ್ ಜಿಯೋದ ಪ್ರಮುಖ ಪ್ಲಾನ್ಗಳಲ್ಲಿ ಸಾಕಷ್ಟು ವ್ಯತ್ಯಯಗಳಾಗುವ ಸಾಧ್ಯತೆ ಇದೆ.
ರಿಲಾಯನ್ಸ್ ಜಿಯೋ ಕೈಬಿಟ್ಟಿರುವ 395 ರೂ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿತ್ತು. 1,559 ರೂ ಪ್ಲಾನ್ 336 ದಿನದ ವ್ಯಾಲಿಡಿಟಿ ಹೊದಿತ್ತು. ಈ ಎರಡೂ ಪ್ಲಾನ್ಗಳು ಅನ್ಲಿಮಿಟೆಡ್ 5ಜಿ ಡಾಟಾ ಆಫರ್ ಮಾಡುತ್ತಿದ್ದವು. ಬಹಳಷ್ಟು ಗ್ರಾಹಕರು ಈ ಪ್ಲಾನ್ಗಳನ್ನು ಸಬ್ಸ್ಕ್ರೈಬ್ ಮಾಡಿದ್ದರು. ಇದು ಜಿಯೋದ ಎಆರ್ಪಿಯುಗೆ (ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯ) ಹೊಡೆತ ಬಿದ್ದಿದೆ. ಈ ಕಾರಣಕ್ಕೆ ಪ್ಲಾನ್ಗಳನ್ನು ಜಿಯೋ ಕೈಬಿಟ್ಟಿರಬಹುದು.
ಇದನ್ನೂ ಓದಿ: ಸ್ವದೇಶಿ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಬಿಎಸ್ಎನ್ಎಲ್ 4ಜಿ, ಯಾವಾಗ ಸಿಗಲಿದೆ ಹೈ ಸ್ಪೀಡ್ ಇಂಟರ್ನೆಟ್?
ರಿಲಾಯನ್ಸ್ ಜಿಯೋದ ಈ ಬೇಸ್ ಪ್ಲಾನ್ಗಳಷ್ಟೇ ಅಲ್ಲ, 84 ದಿನಗಳದ್ದು, 56 ದಿನಗಳದ್ದು, ಒಂದು ವರ್ಷದ್ದು ಹೀಗೆ ದೀರ್ಘಾವಧಿ ಪ್ಲಾನ್ಗಳ ದರಗಳಲ್ಲಿ ಸಾಕಷ್ಟು ಹೆಚ್ಚಳ ಮಾಡಲಾಗಿದೆ. 365 ದಿನಗಳ ವ್ಯಾಲಿಡಿಟಿ ಮತ್ತು ದಿನಕ್ಕೆ 2.5 ಜಿಬಿ ಡಾಟಾ ಕೊಡುತ್ತಿದ್ದ 2,999 ರೂ ಪ್ಲಾನ್ನ ದರವನ್ನು 600 ರೂನಷ್ಟು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಪ್ರೈಮ್ ಗ್ರಾಹಕರಿಗೆ ಅಗತ್ಯ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ
5ಜಿ ನೆಟ್ವರ್ಕ್ಗೆ ಬಹಳಷ್ಟು ಹೂಡಿಕೆ ಮಾಡಿರುವ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಕಳೆದ ತಿಂಗಳು ಸ್ವಾಭಾವಿಕವಾಗಿ ಟೆಲಿಕಾಂ ದರಗಳನ್ನು ಏರಿಕೆ ಮಾಡಿದ್ದವು. ಇಲ್ಲಿ ಬಿಎಸ್ಸೆನ್ನೆಲ್ ಮಾತ್ರವೇ ಇನ್ನೂ 5ಜಿ ಅಖಾಡಕ್ಕೆ ಇಳಿಯದೇ ಇರುವುದು. ಹೀಗಾಗಿ, ಬಿಎಸ್ಸೆನ್ನೆಲ್ ಅಗ್ಗದ ದರದಲ್ಲಿ 3ಜಿ ಮತ್ತು 4ಜಿ ಸೇವೆ ನೀಡಿ, ಸಾಕಷ್ಟು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಆದರೆ, 5ಜಿ ಸರ್ವಿಸ್ ಬಯಸುವವರಿಗೆ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮಾತ್ರವೇ ಸದ್ಯಕ್ಕೆ ಇರುವ ಆಯ್ಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ