ಹೈದರಾಬಾದ್​ನಲ್ಲಿ ರಿಲಾಯನ್ಸ್​ನ ಮೊದಲ ‘ಸ್ವದೇಶ್ ಸ್ಟೋರ್’; ದೇಶದ ಕರಕುಶಲಕರ್ಮಿಗಳ ಬದುಕಿಕೊಂದು ಆಧಾರ

|

Updated on: Nov 09, 2023 | 10:42 AM

Reliance Swadesh Store: ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪರು ಮತ್ತು ಅಧ್ಯಕ್ಷೆಯೂ ಆದ ನೀತಾ ಅಂಬಾನಿ ತೆಲಂಗಾಣ ರಾಜಧಾನಿ ಹೈದರಾಬಾದ್​ನಲ್ಲಿ ನವೆಂಬರ್ 8ರಂದು ಸ್ವದೇಶ್ ಸ್ಟೋರ್ ಅನ್ನು ಉದ್ಘಾಟಿಸಿದ್ದಾರೆ. ಈ ಸ್ಟೋರ್ ಭಾರತದ ಸಾಂಪ್ರದಾಯಿಕ ಕರಕುಶಲ ಮತ್ತು ಕುಸುರಿಕಲೆಗಳನ್ನು ಇಡೀ ವಿಶ್ವಕ್ಕೆ ತೋರಿಸುತ್ತದೆ. ಅದೇ ವೇಳೆ ಕುಶಲಕರ್ಮಿಗಳ ಬದುಕಿಗೆ ಉತ್ತಮ ಆಧಾರವೂ ಸಿಗುತ್ತದೆ ಎಂದು ನೀತಾ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಹೈದರಾಬಾದ್​ನಲ್ಲಿ ರಿಲಾಯನ್ಸ್​ನ ಮೊದಲ ‘ಸ್ವದೇಶ್ ಸ್ಟೋರ್’; ದೇಶದ ಕರಕುಶಲಕರ್ಮಿಗಳ ಬದುಕಿಕೊಂದು ಆಧಾರ
ಸ್ವದೇಶ್ ಸ್ಟೋರ್
Follow us on

ಹೈದರಾಬಾದ್, ನವೆಂಬರ್ 9: ರಿಲಾಯನ್ಸ್ ರೀಟೇಲ್ ಸಂಸ್ಥೆ ದೇಶೀಯ ಕರಕುಶಲ ವಸ್ತುಗಳ (handicrafts) ವ್ಯವಹಾರಕ್ಕೆ ಇಳಿದಿದೆ. ಅದರ ಮೊದಲ ‘ಸ್ವದೇಶ್’ ಮಳಿಗೆ ನವೆಂಬರ್ 8, ಬುಧವಾರದಂದು ಇಲ್ಲಿ ಆರಂಭವಾಗಿದೆ. ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪರು ಮತ್ತು ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಈ ಸ್ವದೇಶ್ ಸ್ಟೋರ್ (Swadesh Store) ಅನ್ನು ಉದ್ಘಾಟಿಸಿದ್ದಾರೆ. ಈ ಸ್ಟೋರ್ ಭಾರತದ ಸಾಂಪ್ರದಾಯಿಕ ಕರಕುಶಲ ಮತ್ತು ಕುಸುರಿಕಲೆಗಳನ್ನು ಇಡೀ ವಿಶ್ವಕ್ಕೆ ತೋರಿಸುತ್ತದೆ. ಅದೇ ವೇಳೆ ಕುಶಲಕರ್ಮಿಗಳ ಬದುಕಿಗೆ ಉತ್ತಮ ಆಧಾರವೂ ಸಿಗುತ್ತದೆ ಎಂದು ನೀತಾ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

‘ಭಾರತದ ಅಭಿವೃದ್ಧಿ ಸವಾಲುಗಳಿಗೆ ಸಮರ್ಪಕ ಪರಿಹಾರ ಒದಗಿಸುವುದು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಸಮಾಜಸೇವೆ ಅಂಗವಾದ ರಿಲಾಯನ್ಸ್ ಫೌಂಡೇಶನ್​ನ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಸ್ವದೇಶ್ ಸ್ಟೋರ್ ಆರಂಭಿಸಲಾಗಿದೆ’ ಎಂದು ರಿಲಾಯನ್ಸ್ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಯಾಕೆ ದಾನ ಧರ್ಮ ಮಾಡುತ್ತೀರಿ? ಮಕ್ಕಳು ಮಂದಿಗೆ ದುಡ್ಡಿಡಲ್ವಾ? ಈ ಪ್ರಶ್ನೆಗೆ ಯುವ ಉದ್ಯಮಿ ಕೊಟ್ಟ ಉತ್ತರ ನೋಡಿ..!

‘ನಮ್ಮ ದೇಶದ ಪುರಾತನ ಕಲೆ ಮತ್ತು ಕುಸುರಿಯನ್ನು ಉಳಿಸಿ ಬೆಳೆಸಲು ಇದೊಂದು ಪುಟ್ಟ ಪ್ರಯತ್ನ. ನಮ್ಮ ಕುಶಲಕರ್ಮಿಗಳಿಗೆ ಜೀವನಾಧಾರ ಮತ್ತು ಗೌರವ ಒದಗಿಸುತ್ತದೆ. ಅವರು ನಮ್ಮ ದೇಶದ ನಿಜವಾದ ಹೆಮ್ಮೆ. ಸ್ವದೇಶ್ ಮೂಲಕ ಇವರಿಗೆ ಅರ್ಹವಾಗಿರುವ ಜಾಗತಿಕ ಗೌರವ ಸಿಗುತ್ತದೆಂದು ಆಶಿಸಿದ್ದೇವೆ. ಆದ್ದರಿಂದ ಸ್ವದೇಶ್ ಸ್ಟೋರ್ ಅನ್ನು ಭಾರತದಾದ್ಯಂತ ಮಾತ್ರವಲ್ಲದೇ ಅಮೆರಿಕ ಮತ್ತು ಯೂರೋಪ್​ಗಳಲ್ಲೂ ತೆರೆಯುತ್ತೇವೆ,’ ಎಂದು ನೀತಾ ಅಂಬಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ರಿಲಾಯನ್ಸ್ ರೀಟೇಲ್​ನ ಮೊದಲ ‘ಸ್ವದೇಶ್ ಸ್ಟೋರ್’ ಹೈದರಾಬಾದ್​ನ ಜೂಬಿಲಿ ಹಿಲ್ಸ್​ನಲ್ಲಿದೆ. ಇದು 20,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ದೇಶಾದ್ಯಂತ ವಿವಿಧ ಪ್ರದೇಶಗಳ ಕಲಾಕುಸುರಿಗಳ ಉತ್ಪನ್ನಗಳನ್ನು ಈ ಮಳಿಗೆಯಲ್ಲಿ ಮಾರಾಟಕ್ಕಿಡಲಾಗಿದೆ.

ಇದನ್ನೂ ಓದಿ: ‘ಕೆಲಸ ಬಿಡಿ, 4 ಲಕ್ಷ ಹಣ ಪಡೆಯಿರಿ’- ಅಮೇಜಾನ್ ಉದ್ಯೋಗಿಗಳಿಗೆ ಪೇ ಟು ಕ್ವಿಟ್ ಆಫರ್; ವರ್ಕೌಟ್ ಆಗುತ್ತಾ ಈ ತಂತ್ರ?

ಈ ಸ್ಟೋರ್​ನಲ್ಲಿ ಕರಕುಶಲ ವಸ್ತುಗಳ ಜೊತೆಗೆ ಸಾಂಪ್ರದಾಯಿಕ ಉಡುಗೆಗಳು, ಆಹಾರವಸ್ತುಗಳು ಹೀಗೆ ನಾನಾ ರೀತಿಯ ದೇಶೀಯ ಉತ್ಪನ್ನಗಳನ್ನು ಇಡಲಾಗಿದೆ. ವಿಶೇಷ ಎಂದರೆ ಪ್ರತಿಯೊಂದು ಉತ್ಪನ್ನ ಯಾವ ಪ್ರದೇಶದ್ದು, ಅದರನ್ನು ಹೇಗೆ ತಯಾರಿಸಲಾಗುತ್ತದೆ ಎಂಬಿತ್ಯಾದಿ ವಿವರಗಳನ್ನು ಸ್ಕ್ಯಾನ್ ಮಾಡಿ ನೋಡುವ ತಂತ್ರಜ್ಞಾನ ಕೂಡ ಲಭ್ಯ ಮಾಡಲಾಗಿದೆ. ಇದು ಭಾರತದ ಸಾಂಪ್ರದಾಯಿಕ ಕಲೆಗಳ ಬಗ್ಗೆ ತಿಳಿದುಕೊಳ್ಳಲು ಉತ್ತಮ ಅವಕಾಶ ಸಿಕ್ಕಂತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ