ಪೇಟೆಂಟ್ ನೋಂದಣಿಯಲ್ಲಿ ಮುಂಚೂಣಿಯಲ್ಲಿ ಭಾರತ: ಇನ್ನೊವೇಷನ್ ಹಬ್ ಆಗುತ್ತಿರುವುದಕ್ಕೆ ಪ್ರಧಾನಿ ಮೋದಿ ಶ್ಲಾಘನೆ
ವರ್ಲ್ಡ್ ಇಂಟಲೆಕ್ಚುವಲ್ ಪ್ರಾಪರ್ಟಿ ಆರ್ಗನೈಸೇಷನ್ ವರದಿಯ ಪ್ರಕಾರ, 2022 ರಲ್ಲಿ ಭಾರತೀಯರು ಸಲ್ಲಿಸಿದ ಪೇಟೆಂಟ್ ಅರ್ಜಿಗಳಲ್ಲಿ ಶೇ 31.6 ರಷ್ಟು ದಾಖಲೆಯ ಬೆಳವಣಿಗೆ ದಾಖಲಾಗಿದೆ. ಇದರೊಂದಿಗೆ ಭಾರತ ಸತತ 11ನೇ ವರ್ಷ ಬೆಳವಣಿಗೆ ದಾಖಲಿಸಿದಂತಾಗಿದೆ.
ನವದೆಹಲಿ, ನವೆಂಬರ್ 8: ಭಾರತದಲ್ಲಿ ಪೇಟೆಂಟ್ (Patent) ನೋಂದಣಿ ಹೆಚ್ಚಳವಾಗುತ್ತಿರುವುದು ದೇಶದ ಯುವಕರಲ್ಲಿ ಅನ್ವೇಷಣೆಯ ಉತ್ಸಾಹ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ದಿನಗಳಿಗೆ ಇದು ಅತ್ಯಂತ ಸಕಾರಾತ್ಮಕ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ. 2022 ರಲ್ಲಿ ಭಾರತದ ನಿವಾಸಿಗಳ ಪೇಟೆಂಟ್ ನೋಂದಣಿ ಶೇಕಡಾ 31.6 ರಷ್ಟು ಹೆಚ್ಚಾಗಿದೆ ಎಂದು ‘ವರ್ಲ್ಡ್ ಇಂಟಲೆಕ್ಚುವಲ್ ಪ್ರಾಪರ್ಟಿ ಆರ್ಗನೈಸೇಷನ್ (WIPO)’ ವರದಿ ತಿಳಿಸಿದೆ. ವರದಿಯಲ್ಲಿ ಉಲ್ಲೇಖಿಸಿದ ಅಗ್ರ 10ರಲ್ಲಿ ಪೇಟೆಂಟ್ ಅರ್ಜಿ ಸಲ್ಲಿಕೆಯಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತವು ಸಾಟಿ ಇಲ್ಲದ ಬೆಳವಣಿಗೆಯನ್ನು ಕಂಡಿದೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರದಿಯ ಪ್ರಕಾರ, 2022 ರಲ್ಲಿ ಭಾರತೀಯರು ಸಲ್ಲಿಸಿದ ಪೇಟೆಂಟ್ ಅರ್ಜಿಗಳಲ್ಲಿ ಶೇ 31.6 ರಷ್ಟು ದಾಖಲೆಯ ಬೆಳವಣಿಗೆ ದಾಖಲಾಗಿದೆ. ಇದರೊಂದಿಗೆ ಭಾರತ ಸತತ 11ನೇ ವರ್ಷ ಬೆಳವಣಿಗೆ ದಾಖಲಿಸಿದಂತಾಗಿದೆ. ಅದೇ ಸಮಯದಲ್ಲಿ, ಪೇಟೆಂಟ್ ಅರ್ಜಿಗಳನ್ನು ಸಲ್ಲಿಸುವಲ್ಲಿ ಇಷ್ಟು ದೊಡ್ಡ ಬೆಳವಣಿಗೆಯನ್ನು ದಾಖಲಿಸಿದ ವಿಶ್ವದ ಟಾಪ್-10 ದೇಶಗಳಲ್ಲಿ ಭಾರತವು ಪ್ರಮುಖ ದೇಶವಾಗಿದೆ.
The rise in patent applications in India demonstrate the rising innovative zeal of our youth and is a very positive sign for the times to come. https://t.co/EpEdEqlGrx
— Narendra Modi (@narendramodi) November 8, 2023
2022 ರಲ್ಲಿ ವಿಶ್ವಾದ್ಯಂತ ದಾಖಲೆ ಸಂಖ್ಯೆಯ (3.46 ಕೋಟಿ) ಪೇಟೆಂಟ್‌ಗಳನ್ನು ನೋಂದಾಯಿಸಲಾಗಿದೆ. ಪೇಟೆಂಟ್ ಅರ್ಜಿಗಳಲ್ಲಿ ಇದು ಸತತ ಮೂರನೇ ವರ್ಷದ ಬೆಳವಣಿಗೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ವಿಸ್ತಾರ ಏರ್ಲೈನ್ಸ್ನಿಂದ ಫೆಸ್ಟಿವಲ್ ಆಫರ್; ಕೇವಲ 1,999 ರೂನಿಂದ ಟಿಕೆಟ್ ಬೆಲೆ ಶುರು; ನವೆಂಬರ್ 9ರವರೆಗೆ ಅವಕಾಶ
ಚೀನಾ, ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಮತ್ತು ಜರ್ಮನಿ 2022 ರಲ್ಲಿ ಅತಿ ಹೆಚ್ಚು ಪೇಟೆಂಟ್ ಫೈಲ್ ಮಾಡಿರುವ ದೇಶಗಳಾಗಿವೆ ಎಂದು ಅದು ಹೇಳಿದೆ.
ಚೀನಾದ ನವೋದ್ಯಮಿಗಳು ಎಲ್ಲಾ ಜಾಗತಿಕ ಪೇಟೆಂಟ್ ಪೈಕಿ ಅರ್ಧದಷ್ಟು ಅರ್ಜಿಗಳನ್ನು ಸಲ್ಲಿಸುವುದನ್ನು ಮುಂದುವರೆಸಿದರೆ, ದೇಶದ ಬೆಳವಣಿಗೆಯ ದರವು ಸತತ ಎರಡನೇ ವರ್ಷಕ್ಕೆ 2021 ರಲ್ಲಿ ಶೇಕಡಾ 6.8 ರಿಂದ 2022 ರಲ್ಲಿ 3.1 ಶೇಕಡಾಕ್ಕೆ ಕುಸಿದಿದೆ ಎಂದು ಅದು ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ