AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಮೊದಲ ಬಾರಿಗೆ ರೈಲು ಹಳಿ ಮೂಲಕ ಸೌರ ವಿದ್ಯುತ್ ಉತ್ಪಾದನೆ; ಪೂರ್ಣ ನವೀಕರಣ ಇಂಧನದತ್ತ ರೈಲ್ವೇಸ್

India's first experiment with removable solar panels on rail tracks: ವಾರಾಣಸಿಯ ಲೈವ್ ಟ್ರ್ಯಾಕ್​ವೊಂದರಲ್ಲಿ 70 ಮೀಟರ್ ದೂರ ರೈಲು ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಹಾಕಲಾಗಿದೆ. ಇದರಿಂದ 15 ಕೆಡಬ್ಲ್ಯುಪಿ ವಿದ್ಯುತ್ ಉತ್ಪಾದನೆ ಮಾಡಬಹುದು. ಭಾರತದಲ್ಲಿ ಇಂಥದ್ದೊಂದು ಪ್ರಯೋಗ ಇದೇ ಮೊದಲು. ಭಾರತದಲ್ಲಿರುವ ಎಲ್ಲಾ ರೈಲು ಹಳಿಗಳಿಗೂ ಸೋಲಾರ್ ಹಾಕಿದರೆ 3 ಗಿಗಾವ್ಯಾಟ್​ಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯ ಎನ್ನಲಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ರೈಲು ಹಳಿ ಮೂಲಕ ಸೌರ ವಿದ್ಯುತ್ ಉತ್ಪಾದನೆ; ಪೂರ್ಣ ನವೀಕರಣ ಇಂಧನದತ್ತ ರೈಲ್ವೇಸ್
ರೈಲು ಹಳಿಗಳಲ್ಲಿ ಸೋಲಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 19, 2025 | 11:52 AM

Share

ನವದೆಹಲಿ, ಆಗಸ್ಟ್ 19: ಭಾರತದಲ್ಲಿ ರೈಲ್ವೆ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಅಳವಡಿಸುವ ಪ್ರಯೋಗ ನಡೆದಿದೆ. ವಾರಾಣಸಿಯಲ್ಲಿ ಬನಾರಸ್ ಲೋಕೋಮೋಟಿವ್ ವರ್ಕ್ಸ್ (ಬಿಎಲ್​ಡಬ್ಲ್ಯು) ವಾರಾಣಸಿಯಲ್ಲಿ ರೈಲ್ವೆ ಟ್ರ್ಯಾಕ್​ಗಳ ಮಧ್ಯೆ ಸೋಲಾರ್ ಪ್ಯಾನಲ್ ಸಿಸ್ಟಂ ಅಳವಡಿಸಿದೆ. ಭಾರತೀಯ ರೈಲ್ವೇಸ್ (Indian Railways) ಸದ್ಯ 70 ಮೀಟರ್ ಟ್ರ್ಯಾಕ್​ನಲ್ಲಿ ಈ ಪ್ರಯೋಗ ನಡೆಸಿದೆ. ಈ 70 ಮೀಟರ್ ದೂರದ ಹಳಿಯಲ್ಲಿ 28 ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಿದೆ. ಇದರಲ್ಲಿ 15 KWp ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಇರುತ್ತದೆ.

ಭಾರತದಲ್ಲಿ ಇಂಥದ್ದೊಂದು ಪ್ರಯೋಗ ನಡೆದಿರುವುದು ಇದೇ ಮೊದಲು. ಈ ಸೋಲಾರ್ ಪ್ಯಾನಲ್​ಗಳನ್ನು ತೆಗೆದು ಮತ್ತು ಹಾಕುವ ರೀತಿಯಲ್ಲಿ ನಿರ್ಮಿಸಲಾಗಿದೆ. ಟ್ರ್ಯಾಕ್ ಮೈಂಟೆನೆನ್ಸ್ ವೇಳೆ ಸೋಲಾರ್ ಪ್ಯಾನಲ್​ಗಳನ್ನು ತೆಗೆಯಬಹುದು.

ಬೇರೆ ದೇಶಗಳಲ್ಲಿ ರೈಲ್ವೆ ಟ್ರ್ಯಾಕ್​ಗಳ ಮೇಲೆ ಸೋಲಾರ್ ಹಾಕಲಾಗಿದೆಯಾ?

ರೈಲ್ವೆ ಹಳಿಗಳನ್ನು ಸೋಲಾರ್ ವಿದ್ಯುತ್ ಉತ್ಪಾದನೆಗೆ ಬಳಸುವ ಪ್ರಯೋಗ ಈಗೀಗ ನಡೆಯುತ್ತಿದೆ. ಇಟಲಿಯಲ್ಲಿ ಒಂದು ರೈಲು ಮಾರ್ಗದಲ್ಲಿ ಸೋಲಾರ್ ಪ್ಯಾನಲ್ ಹಾಕಲಾಗಿದೆ. ಇದೂ ಕೂಡ ಇನ್ನೂ ಪರೀಕ್ಷಾ ಹಂತದಲ್ಲಿದೆ.

ಇದನ್ನೂ ಓದಿ: ಒಂದು ವರ್ಷ, 3,000 ರೂ, 200 ಟ್ರಿಪ್; ಬಂದಿದೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್; ಪಡೆಯುವ ಕ್ರಮ ತಿಳಿದಿರಿ

ಬ್ರಿಟನ್ ದೇಶದಲ್ಲಿ ರೈಲುಗಳಿಗೆ ಸೌರ ವಿದ್ಯುತ್ ಬಳಸಲಾಗುತ್ತಿದೆಯಾದರೂ ಅದಕ್ಕಾಗಿ ಸೌರಫಲಕಗಳನ್ನು ರೈಲು ಹಳಿಗಳಲ್ಲಿ ಹಾಕಲಾಗಿಲ್ಲ. ಬೇರೆಡೆ ಸೋಲಾರ್ ಫಾರ್ಮ್​ಗಳನ್ನು ಮಾಡಿ ಅದರಿಂದ ವಿದ್ಯುತ್ ಪಡೆಯಲಾಗುತ್ತಿದೆ.

ಭಾರತದ ರೀತಿಯಲ್ಲಿ ಸ್ವಿಟ್ಜರ್​ಲ್ಯಾಂಡ್​ನಲ್ಲಿ 100 ಮೀಟರ್ ರೈಲು ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್​ಗಳನ್ನು ಪ್ರಯೋಗಾರ್ಥವಾಗಿ ಹಾಕಲಾಗಿದೆ.

ಭಾರತದಲ್ಲಿ ಎಲ್ಲಾ ರೈಲು ಹಳಿಗಳಿಗೆ ಸೋಲಾರ್ ಪ್ಯಾನಲ್ ಹಾಕಿದರೆ?

ಭಾರತೀಯ ರೈಲ್ವೆ ಸಂಪೂರ್ಣ ಇಂಗಾಲ ಮುಕ್ತ ಆಗಬೇಕು ಎನ್ನುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಹಾಕುವ ಕಾರ್ಯವು ಮಹತ್ವದ ಹೆಜ್ಜೆ ಎನಿಸಿದೆ.

ಇದನ್ನೂ ಓದಿ: ಜಿಎಸ್​ಟಿಯಿಂದ ಹಿಡಿದು ರುಪಾಯಿವರೆಗೆ ಷೇರು ಮಾರುಕಟ್ಟೆಗೆ ಉತ್ಸಾಹ ಹೆಚ್ಚಿಸಿದ ಅಂಶಗಳು

ಈ ರೀತಿ ಹಳಿಗಳ ಮಧ್ಯೆ ಸೋಲಾರ್ ಪ್ಯಾನಲ್ ಅಳವಡಿಸಿದರೆ ಒಂದು ವರ್ಷದಲ್ಲಿ ಒಂದು ಕಿಮೀಗೆ 3.21 ಲಕ್ಷ ಯುನಿಟ್​ಗಳಷ್ಟು ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಅಂದಾಜಿಸಲಾಗಿದೆ. ಭಾರತೀಯ ರೈಲ್ವೇಸ್ ದೇಶಾದ್ಯಂತ 1.2 ಲಕ್ಷ ಕಿಮೀ ರೈಲು ಜಾಲ ಹೊಂದಿದೆ. ಇಲ್ಲೆಲ್ಲಾ ಸೋಲಾರ್ ಪ್ಯಾನಲ್ ಅಳವಡಿಸಿದರೆ ವರ್ಷದಲ್ಲಿ 38 ಟಿಡಬ್ಲ್ಯುಎಚ್ ಸೋಲಾರ್ ಪವರ್ ಪಡೆಯಲು ಸಾಧ್ಯ. ಭಾರತೀಯ ರೈಲ್ವೆಗೆ ಅಗತ್ಯವಾದ ವಿದ್ಯುತ್​ಗಿಂತ ಕನಿಷ್ಠ ಎರಡು ಪಟ್ಟು ಹೆಚ್ಚು ವಿದ್ಯುತ್ ಅನ್ನು ತಯಾರಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ರೈಲ್ವೇಸ್ ಪೂರ್ಣವಾಗಿ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಅವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು