State Bank Of India: ಆರ್​ಬಿಐನಿಂದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಗೆ 1 ಕೋಟಿ ರೂಪಾಯಿ ದಂಡ

| Updated By: Srinivas Mata

Updated on: Oct 18, 2021 | 10:41 PM

ನಿಯಮಾವಳಿಗಳ ಉಲ್ಲಂಘನೆ ಆರೋಪದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ 1 ಕೋಟಿ ರೂಪಾಯಿ ದಂಡ ಹಾಕಿದೆ.

State Bank Of India: ಆರ್​ಬಿಐನಿಂದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಗೆ 1 ಕೋಟಿ ರೂಪಾಯಿ ದಂಡ
ಆರ್​ಬಿಐ (ಸಾಂದರ್ಭಿಕ ಚಿತ್ರ)
Follow us on

ಕೆಲವು ನಿರ್ದೇಶನಗಳನ್ನು ಪಾಲನೆ ಮಾಡದಿದ್ದಕ್ಕಾಗಿ ಅಕ್ಟೋಬರ್ 18, 2021ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ವಾಣಿಜ್ಯ ಬ್ಯಾಂಕ್​ಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳ ವಂಚನೆಗಳ ವರ್ಗೀಕರಣ ಮತ್ತು ವರದಿ ಮಾಡುವುದಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಇದಾಗಿದೆ ಎಂದು ಆರ್‌ಬಿಐ ಹೇಳಿದೆ. ನಿಯಂತ್ರಕ ಸಂಸ್ಥೆಯ ನಿಯಮಾವಳಿಗಳನ್ನು ಅನುಸರಿಸದ ಕೊರತೆಗಳ ಆಧಾರದ ಮೇಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವಕ್ಕೆ ಇದು ಸಂಬಂಧಿಸಿದ್ದಲ್ಲ ಎಂದು ಕೇಂದ್ರ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾಂಕ್​ನಲ್ಲಿ ನಿರ್ವಹಿಸಲಾದ ಗ್ರಾಹಕರ ಖಾತೆಯಲ್ಲಿ ಆರ್‌ಬಿಐ ಪರಿಶೀಲನೆ ನಡೆಸಿದ್ದು, ಖಾತೆಯಲ್ಲಿನ ವಂಚನೆಯ ವರದಿಯಲ್ಲಿ ನಿರ್ದೇಶನಗಳನ್ನು ಅನುಸರಿಸದಿರುವುದು ಬಹಿರಂಗಪಡಿಸಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

“ಇದರ ಮುಂದುವರಿಕೆಯಾಗಿ ಬ್ಯಾಂಕ್‌ಗೆ ಸೂಚನೆಯನ್ನು ನೀಡಲಾಗಿದ್ದು, ಸೂಚಿಸಿದ ನಿರ್ದೇಶನಗಳನ್ನು ಪಾಲಿಸದ ಕಾರಣಕ್ಕಾಗಿ ದಂಡವನ್ನು ಏಕೆ ವಿಧಿಸಬಾರದು ಎಂಬುದನ್ನು ತಿಳಿಸುವಂತೆ ನೋಟಿಸ್​ ನೀಡಲಾಗಿದೆ,” ಎಂದು ಆರ್‌ಬಿಐ ಹೇಳಿದೆ. ಎಸ್‌ಬಿಐನ ಉತ್ತರವನ್ನು ಪರಿಗಣಿಸಿದ ನಂತರ, ಈ ಮೇಲಿನ ಆರ್‌ಬಿಐ ನಿರ್ದೇಶನಗಳ ಅನುಸರಿಸದಿರುವ ಆರೋಪವು ದೃಢೀಕೃತವಾಗಿದೆ ಮತ್ತು ವಿತ್ತೀಯ ದಂಡವನ್ನು ವಿಧಿಸುವುದು ಸಮರ್ಥನೆಯಾಗಿದೆ ಎಂದು ತೀರ್ಮಾನಿಸಿತು ಎಂಬುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ. ಈ ಹಿಂದೆ, ನಿಗದಿತ ಸಮಯದೊಳಗೆ ಸೈಬರ್ ಭದ್ರತಾ ಘಟನೆಯನ್ನು ವರದಿ ಮಾಡಲು ವಿಫಲವಾದ ಕಾರಣ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗೆ ಆರ್‌ಬಿಐ 1.95 ಕೋಟಿ ರುಪಾಯಿ ದಂಡವನ್ನು ಘೋಷಿಸಿತು. ಮತ್ತು ಅನಧಿಕೃತ ಎಲೆಕ್ಟ್ರಾನಿಕ್ ವಹಿವಾಟಿನಲ್ಲಿ ಒಳಗೊಂಡಿರುವ ಮೊತ್ತವನ್ನು ಇತರ ಕಾರಣಗಳಿಗಾಗಿ ಘೋಷಿಸಿತು.

ಈ ಕ್ರಮದ ಹಿಂದಿನ ಕಾರಣಗಳನ್ನು ಪಟ್ಟಿ ಮಾಡಿ, “ಗ್ರಾಹಕರ ರಕ್ಷಣೆ” ಕುರಿತು ನೀಡಲಾದ ನಿರ್ದೇಶನಗಳನ್ನು ಪಾಲಿಸದ ಕಾರಣ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮೇಲೆ 1.95 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಆರ್​ಬಿಐ ಪ್ರಕಟಣೆಯಲ್ಲಿ ತಿಳಿಸಿತ್ತು. ಆರ್‌ಬಿಐ ಜಾರಿ ಕಾರ್ಯಾಚರಣೆಗಳನ್ನು ಜಾರಿ ಇಲಾಖೆಯು ನಡೆಸುತ್ತದೆ. ಮೇಲ್ವಿಚಾರಣಾ ಪ್ರಕ್ರಿಯೆಯಿಂದ ಜಾರಿಗೊಳಿಸುವ ಕ್ರಮವನ್ನು ಪ್ರತ್ಯೇಕಿಸಲು 2017ರ ಏಪ್ರಿಲ್​ನಲ್ಲಿ ಆರ್‌ಬಿಐನ ಇಎಫ್‌ಡಿ ಸ್ಥಾಪಿಸಲಾಯಿತು. ಇಎಫ್‌ಡಿ ತಪಾಸಣೆ ವರದಿಗಳು, ಅಪಾಯದ ಮೌಲ್ಯಮಾಪನ ವರದಿಗಳು ಮತ್ತು ಪರಿಶೀಲನಾ ವರದಿಗಳಿಂದ ಕ್ರಿಯಾತ್ಮಕ ಉಲ್ಲಂಘನೆಗಳನ್ನು ಗುರುತಿಸುತ್ತದೆ.

ಮಾರುಕಟ್ಟೆ ಗುಪ್ತಚರ ವರದಿಗಳು, ಉನ್ನತ ನಿರ್ವಹಣೆಯ ಉಲ್ಲೇಖಗಳು ಮತ್ತು ದೂರುಗಳನ್ನು ಸಹ ತನಿಖೆಗಾಗಿ ಬಳಸಲಾಗುತ್ತದೆ. ತೀರ್ಪು ಸಮಿತಿಯು ನಂತರ ಉಲ್ಲಂಘನೆಗಳನ್ನು ನಿರ್ಣಯಿಸುತ್ತದೆ ಮತ್ತು ದಂಡದ ಪ್ರಮಾಣವನ್ನು ನಿರ್ಧರಿಸುತ್ತದೆ. ಹೀಗೆ ವಿಧಿಸಿದ ದಂಡವನ್ನು ಆರ್​ಬಿಐ ಪತ್ರಿಕಾ ಪ್ರಕಟಣೆಯ ರೂಪದಲ್ಲಿ ಮತ್ತು ನಿಯಮಗಳ ಪ್ರಕಾರ ನಿಯಂತ್ರಿತ ಸಂಸ್ಥೆಯಿಂದ ಬಹಿರಂಗಪಡಿಸಲಾಗುತ್ತದೆ. ನಿಯಂತ್ರಿತ ಘಟಕವು ಒಂದು ನಿರ್ದಿಷ್ಟ ಅವಧಿಯೊಳಗೆ ದಂಡವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: SREI Superseded: 30 ಸಾವಿರ ಕೋಟಿಗೂ ಹೆಚ್ಚು ಸಾಲ ಉಳಿಸಿಕೊಂಡಿರುವ SREI ಆರ್​ಬಿಐನಿಂದ ಸೂಪರ್​ಸೀಡ್