AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SREI Superseded: 30 ಸಾವಿರ ಕೋಟಿಗೂ ಹೆಚ್ಚು ಸಾಲ ಉಳಿಸಿಕೊಂಡಿರುವ SREI ಆರ್​ಬಿಐನಿಂದ ಸೂಪರ್​ಸೀಡ್

SREI ಇನ್​ಫ್ರಾ ಹಾಗೂ SREI ಎಕ್ವಿಪ್​ಮೆಂಟ್ ಫೈನಾನ್ಸ್ ಮಂಡಳಿ ನಿರ್ದೇಶಕರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸೂಪರ್​ಸೀಡ್ ಮಾಡಲಾಗಿದೆ. ಏಕೆ, ಏನು ಎಂಬಿತ್ಯಾದಿ ವಿವರಗಳು ಈ ವರದಿಯಲ್ಲಿದೆ.

SREI Superseded: 30 ಸಾವಿರ ಕೋಟಿಗೂ ಹೆಚ್ಚು ಸಾಲ ಉಳಿಸಿಕೊಂಡಿರುವ SREI ಆರ್​ಬಿಐನಿಂದ ಸೂಪರ್​ಸೀಡ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Oct 04, 2021 | 5:32 PM

Share

ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾವು ಅಕ್ಟೋಬರ್​ 4ನೇ ತಾರೀಕಿನ ಸೋಮವಾರದಂದು SREI ಇನ್​ಫ್ರಾ ಮತ್ತು SREI ಎಕ್ವಿಪ್​ಮೆಂಟ್​ ಫೈನಾನ್ಸ್​ ಲಿಮಿಟೆಡ್​ ಮಂಡಳಿ ನಿರ್ದೇಶಕರನ್ನು ಸೂಪರ್​ಸೀಡ್ ಮಾಡಲಾಗಿದೆ. ಆಡಳಿತಾತ್ಮಕ ಕಾರಣಗಳಿಂದ ಹಾಗೂ SREI ಸಮೂಹ ಕಂಪೆನಿಯು ಬಾಕಿ ಉಳಿಸಿಕೊಂಡ ಹಣ ಪಾವತಿ ಮಾಡದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಬ್ಯಾಂಕ್​ ಆಫ್​ ಬರೋಡಾದ ಮಾಜಿ ಚೀಫ್​ ಮ್ಯಾನೇಜರ್​ ರಜನೀಶ್​ ಶರ್ಮಾ ಅವರನ್ನು ಆರ್​ಬಿಐನಿಂದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಶೀಘ್ರದಲ್ಲೇ ಆರ್​ಬಿಐನಿಂದ ಎನ್​ಬಿಎಫ್​ಸಿಗಳ ತೀರುವಳಿ ಪ್ರಕ್ರಿಯೆಯನ್ನು ಈಬಿಸಿ ನಿಯಮಾವಳಿ 2019ರ ಅಡಿಯಲ್ಲಿ ಇತ್ಯರ್ಥಗೊಳಿಸಲು ಪ್ರಕ್ರಿಯೆ ಆರಂಭಿಸಲಾಗುವುದು ಮತ್ತು ಆಡಳಿತಾಧಿಕಾರಿಯನ್ನು ಸಾಲ ತೀರುವಳಿ ವೃತ್ತಿಪರರನ್ನಾಗಿ ನೇಮಕ ಮಾಡುವಂತೆ ಎನ್​ಸಿಎಲ್​ಟಿಗೆ (ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ) ಅರ್ಜಿ ಹಾಕಲಾಗುವುದು.

ಆರ್​ಬಿಐನಿಂದ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ ಕಾಯ್ದೆ, 1934ರ ಸೆಕ್ಷನ್ 45-IE(1)ರ ಅಡಿಯಲ್ಲಿ ನೀಡಿರುವ ಆಧಿಕಾರವನ್ನು ಬಳಸಿಕೊಂಡು, ಆರ್​ಬಿಐನಿಂದ SREI iನ್​ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿಮಿಟೆಡ್ (SIFL) ಮತ್ತು SREI ಎಕ್ವಿಪ್​ಮೆಂಟ್ ಫೈನಾನ್ಸ್​ ಲಿಮಿಟೆಡ್​ (SEFL) ಮಂಡಳಿ ನಿರ್ದೇಶಕರನ್ನು ಸೂಪರ್​ಸೀಡ್​ ಮಾಡಲಾಗಿದೆ. ಈ ಕಂಪೆನಿಗಳಿಂದ ವಿವಿಧ ಪಾವತಿಗಳನ್ನು ನೀಡದೆ ಇರುವ ಕಾರಣಕ್ಕೆ ಮತ್ತು ಆಡಳಿತಾತ್ಮಕ ಸಮಸ್ಯೆಯ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

SREI ಸಮೂಹದ ಸಾಲಗಾರರು ಕಂಪೆನಿಯ ಟಾಪ್​ ಮ್ಯಾನೇಜ್​ಮೆಂಟ್​ ಇಟ್ಟಿದ್ದ ಪ್ರಸ್ತಾವವನ್ನು ತಿರಸ್ಕರಿಸಿದ ಮೇಲೆ ಈ ಬೆಳವಣಿಗೆ ಆಗಿದೆ. ಅಂದಹಾಗೆ ಅಂದಾಜು 35,000 ಕೋಟಿ ರೂಪಾಯಿಗಳ ಬಾಕಿ ಮೊತ್ತದ ವಸೂಲಿಗಾಗಿ ಯಾವುದೇ ಕ್ರಮ, ಕಾನೂನು ಅಥವಾ ಮತ್ತ್ಯಾವುದಾರೂ ಸರಿ, ತೆಗೆದುಕೊಳ್ಳದಂತೆ ಒಂದು ವರ್ಷಗಳ ಸಮಯ ನೀಡಬೇಕಾಗಿ ವಾರದ ಹಿಂದಷ್ಟೇ ಕೇಳಿಕೊಳ್ಳಲಾಗಿತ್ತು. SREI ಸಮೂಹವು ಕ್ಯುಮ್ಯುಲೇಟಿವ್ ಆಗಿ ಬ್ಯಾಂಕ್​ಗಳಿಗೆ 30,000 ಕೋಟಿ ರೂಪಾಯಿಗಳ ಬಾಕಿ ಉಳಿಸಿಕೊಂಡಿದೆ. ಡಿಎಚ್​ಎಫ್​ಎಲ್​ ಅನ್ನು ಹೇಗೆ ಪಿರಾಮಲ್ ಸಮೂಹದಿಂದ 38,000 ಕೋಟಿ ರೂಪಾಯಿಗೆ ಸ್ವಾಧೀನ ಮಾಡಿಕೊಂಡು ಹೇಗೆ ತೀರುವಳಿ ಪರಿಹಾರ ನೀಡಲಾಯಿತೋ ಅಂಥದ್ದೇ ಪರಿಹಾರಕ್ಕೆ ಆರ್​ಬಿಐ ಅನ್ನು SREI ಸಂಪರ್ಕಿಸಿತ್ತು.

ಇದನ್ನೂ ಓದಿ: Bank Holidays in October 2021: ಅಕ್ಟೋಬರ್​ನಲ್ಲಿ ವಿವಿಧ ರಾಜ್ಯಗಳೆಲ್ಲ ಸೇರಿ 21 ಬ್ಯಾಂಕ್ ರಜಾ ದಿನಗಳು

Published On - 5:26 pm, Mon, 4 October 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ