Bank Holidays in October 2021: ಅಕ್ಟೋಬರ್​ನಲ್ಲಿ ವಿವಿಧ ರಾಜ್ಯಗಳೆಲ್ಲ ಸೇರಿ 21 ಬ್ಯಾಂಕ್ ರಜಾ ದಿನಗಳು

2021ರ ಅಕ್ಟೋಬರ್​ ತಿಂಗಳಲ್ಲಿ ಬ್ಯಾಂಕ್​ಗಳ ರಜಾ ದಿನಗಳ ಪಟ್ಟಿ ಇಲ್ಲಿದೆ. ವಿವಿಧ ರಾಜ್ಯಗಳೆಲ್ಲದರ ಲೆಕ್ಕವೆಲ್ಲ ಸೇರಿ ಒಟ್ಟು 21 ದಿನಗಳು ರಜಾ ಇರುತ್ತದೆ.

Bank Holidays in October 2021: ಅಕ್ಟೋಬರ್​ನಲ್ಲಿ ವಿವಿಧ ರಾಜ್ಯಗಳೆಲ್ಲ ಸೇರಿ 21 ಬ್ಯಾಂಕ್ ರಜಾ ದಿನಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 24, 2021 | 12:41 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ)ದಿಂದ ಬಿಡುಗಡೆ ಮಾಡಿರುವ ಅಕ್ಟೋಬರ್ ತಿಂಗಳ ಅಧಿಕೃತ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕ್​ಗಳಿಗೆ ಬಹುತೇಕ ರಜಾ ದಿನಗಳಿಂದಲೇ ತುಂಬಿಹೋಗಿದೆ. ಮುಂಬರುವ ಕ್ಯಾಲೆಂಡರ್ ತಿಂಗಳು (2021ರ ಅಕ್ಟೋಬರ್​) ರಜಾದಿನಗಳು ಮತ್ತು ಹಬ್ಬಗಳಿಂದ ತುಂಬಿದೆ. ಭಾರತದ ಅನೇಕ ನಗರಗಳಲ್ಲಿ ವಿವಿಧ ಹಬ್ಬ- ಆಚರಣೆಗಳ ಪ್ರಯುಕ್ತ ಬ್ಯಾಂಕ್​ಗಳಿಗೆ ರಜಾ ಇರುತ್ತವೆ. ಒಟ್ಟಾರೆಯಾಗಿ, ಬ್ಯಾಂಕ್​ಗಳಿಗೆ ಅಕ್ಟೋಬರ್ ತಿಂಗಳಲ್ಲಿ ಸುಮಾರು 21 ರಜಾ ದಿನಗಳನ್ನು ನಿರೀಕ್ಷಿಸಬಹುದು. ಇದರಲ್ಲಿ ಶನಿವಾರ- ಭಾನುವಾರದ ವಾರಾಂತ್ಯಗಳು ಮತ್ತು ಆರ್​ಬಿಐನಿಂದ ಕಡ್ಡಾಯವಾದ ಅಧಿಕೃತ ರಜಾ ದಿನಗಳು ಒಳಗೊಂಡಿವೆ. ಸ್ವತಃ ಆರ್‌ಬಿಐ ಅಕ್ಟೋಬರ್ ತಿಂಗಳಿಗೆ ಒಟ್ಟು 14 ರಜಾದಿನಗಳನ್ನು ನೀಡಿದೆ. ವಾರಾಂತ್ಯದ ರಜಾದಿನಗಳಲ್ಲಿ ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿವೆ. ಅವೆಲ್ಲ ಒಟ್ಟು ಸೇರಿಸಿ ಏಳು ದಿನಗಳು ಒಳಗೊಂಡಿವೆ.

ಆರ್‌ಬಿಐನ ರಜಾದಿನಗಳ ಪಟ್ಟಿ ರಾಜ್ಯವಾರು ಆಚರಣೆಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬದ ಆಚರಣೆಗಳ ವರ್ಗಕ್ಕೆ ಬರುತ್ತದೆ. ಆದರೂ ಅಧಿಕೃತ ವರ್ಗೀಕರಣಗಳನ್ನು ಪರಿಗಣಿಸಬೇಕಾದರೆ, ರಜಾದಿನಗಳ ಪಟ್ಟಿಯನ್ನು ಸಾಮಾನ್ಯವಾಗಿ ‘ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನಗಳು’, ‘ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್​ಮೆಂಟ್ ರಜಾದಿನಗಳು’ ಮತ್ತು ‘ಬ್ಯಾಂಕುಗಳ’ ಖಾತೆಗಳ ಕ್ಲೋಸಿಂಗ್ ಎಂಬ ಶೀರ್ಷಿಕೆಗಳ ಅಡಿಯಲ್ಲಿ ವಿಭಾಗದ ಅಡಿಯಲ್ಲಿ ಮಾಡಲಾಗುತ್ತದೆ.’ ಅಕ್ಟೋಬರ್‌ನ ಸಂದರ್ಭದಲ್ಲಿ ಹೆಚ್ಚಿನ ರಜಾದಿನಗಳು ‘ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ’ ಅಡಿಯಲ್ಲಿ ಬರುತ್ತವೆ

ಅಕ್ಟೋಬರ್​ನಲ್ಲಿ ಬಹಳಷ್ಟು ರಜಾದಿನಗಳಿವೆ ಎಂಬುದು ಹೌದು. ಆದರೆ ಈ ತಿಂಗಳು ಕೆಲವು ದಿನಗಳನ್ನು ಹೊರತುಪಡಿಸಿ, ಬಹುಪಾಲು ರಜಾದಿನಗಳು ಕೆಲವು ರಾಜ್ಯಗಳು ಮತ್ತು ನಗರಗಳಲ್ಲಿ ಮಾತ್ರ ನಡೆಯುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಬ್ಯಾಂಕ್ ಗ್ರಾಹಕರಾಗಿ, ಇಲ್ಲಿರುವ ಪಟ್ಟಿ ನಿಮಗೆ ಸಹಾಯ ಮಾಡಲಿದೆ.

1) ಅಕ್ಟೋಬರ್ 1- ಅರ್ಧ ವಾರ್ಷಿಕ ಬ್ಯಾಂಕ್ ಖಾತೆಗಳ ಕ್ಲೋಸಿಂಗ್ (ಗ್ಯಾಂಗ್ಟಕ್) 2) ಅಕ್ಟೋಬರ್ 2 – ಗಾಂಧೀ ಜಯಂತಿ (ಎಲ್ಲ ರಾಜ್ಯಗಳು) 3) ಅಕ್ಟೋಬರ್ 3 – ಭಾನುವಾರ 4) ಅಕ್ಟೋಬರ್ 6 – ಮಹಾಲಯ ಅಮಾವಾಸ್ಯೆ (ಅಗರ್ತಲಾ, ಬೆಂಗಳೂರು, ಕೋಲ್ಕತ್ತಾ) 5) ಅಕ್ಟೋಬರ್ 7 – ಮೇರಾ ಚೌರೆನ್ ಹೌಬಾ ಲೈನಿಂಗ್‌ಥೌ ಸನಾಮಹಿ (ಇಂಫಾಲ್) 6) ಅಕ್ಟೋಬರ್ 9 – ಎರಡನೇ ಶನಿವಾರ 7) ಅಕ್ಟೋಬರ್ 10 – ಭಾನುವಾರ 8) ಅಕ್ಟೋಬರ್ 12 – ದುರ್ಗಾ ಪೂಜೆ (ಮಹಾ ಸಪ್ತಮಿ)/(ಅಗರ್ತಲಾ, ಕೋಲ್ಕತ್ತಾ) 9) ಅಕ್ಟೋಬರ್ 13 – ದುರ್ಗಾ ಪೂಜೆ (ಮಹಾ ಅಷ್ಟಮಿ) / (ಅಗರ್ತಲಾ, ಭುವನೇಶ್ವರ, ಗ್ಯಾಂಗ್ಟಕ್, ಗುವಾಹತಿ, ಇಂಫಾಲ್, ಕೋಲ್ಕತ್ತಾ, ಪಾಟ್ನಾ, ರಾಂಚಿ) 10) ಅಕ್ಟೋಬರ್ 14 – ದುರ್ಗಾ ಪೂಜೆ/ದಸರಾ (ಮಹಾ ನವಮಿ)/ಆಯುಧ ಪೂಜೆ (ಅಗರ್ತಲಾ, ಬೆಂಗಳೂರು, ಚೆನ್ನೈ, ಗ್ಯಾಂಗ್ಟಕ್, ಗುವಾಹತಿ, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಖನೌ, ಪಾಟ್ನಾ, ರಾಂಚಿ, ಶಿಲ್ಲಾಂಗ್, ಶ್ರೀನಗರ, ತಿರುವನಂತಪುರಂ) 11) ಅಕ್ಟೋಬರ್ 15 – ದುರ್ಗಾ ಪೂಜೆ/ದಸರಾ/(ವಿಜಯ ದಶಮಿ)/(ಇಂಫಾಲ್ ಮತ್ತು ಶಿಮ್ಲಾ ಹೊರತುಪಡಿಸಿ ಎಲ್ಲ ಬ್ಯಾಂಕ್​ಗಳು) 12) ಅಕ್ಟೋಬರ್ 16 – ದುರ್ಗಾ ಪೂಜೆ (ದಸೈನ್) / (ಗ್ಯಾಂಗ್ಟಕ್) 13) ಅಕ್ಟೋಬರ್ 17 – ಭಾನುವಾರ 14) ಅಕ್ಟೋಬರ್ 18- ಕತಿ ಬಿಹು (ಗುವಾಹತಿ) 15) ಅಕ್ಟೋಬರ್ 19- ಈದ್​-ಮಿಲಾದ್/ಈದ್​-ಇ-ಮಿಲದುನ್ನಬಿ/ಮಿಲದ್-ಇ-ಷರೀಫ್ (ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ)/ಬರವಫತ್/(ಅಹಮದಾಬಾದ್, ಬೇಲಾಪುರ, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ್, ರಾಂಚಿ, ಶ್ರೀನಗರ, ತಿರುವನಂತಪುರಂ) 16) ಅಕ್ಟೋಬರ್ 20- ಮಹರ್ಷಿ ವಾಲ್ಮೀಕಿ ಜನ್ಮದಿನ/ಲಕ್ಷ್ಮಿ ಪೂಜೆ/ಈದ್-ಇ-ಮಿಲಾದ್ (ಅಗರ್ತಲಾ, ಬೆಂಗಳೂರು, ಚಂಡೀಗಡ, ಕೋಲ್ಕತ್ತಾ, ಶಿಮ್ಲಾ) 17) ಅಕ್ಟೋಬರ್ 22- ಶುಕ್ರವಾರ ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು, ಶ್ರೀನಗರ) 18) ಅಕ್ಟೋಬರ್ 23 – 4ನೇ ಶನಿವಾರ 19) ಅಕ್ಟೋಬರ್ 24 – ಭಾನುವಾರ 20) ಅಕ್ಟೋಬರ್ 26 – ಆಕ್ಸೆಷನ್ ಡೇ (ಜಮ್ಮು, ಶ್ರೀನಗರ) 21) ಅಕ್ಟೋಬರ್ 31 – ಭಾನುವಾರ

ಇದನ್ನೂ ಓದಿ: Bank Deposits: ಬ್ಯಾಂಕ್​ ಠೇವಣಿಯಲ್ಲಿ ಪ್ರಗತಿ; ಎಷ್ಟಾಗಿದೆ ಎಂಬ ವಿವರಕ್ಕೆ ಇಲ್ಲಿದೆ ಆರ್​ಬಿಐ ಮಾಹಿತಿ

(Here Is The List Of Bank Holidays For 2021 October Month)