AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing Bell: ಷೇರುಪೇಟೆಯಲ್ಲಿ ಹೊಸ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ; ಗೂಳಿ ಓಟಕ್ಕೆ ತಡೆಯೇ ಇಲ್ಲ

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್​, ನಿಫ್ಟಿ ದಾಖಲೆಯ ಎತ್ತರಕ್ಕೆ ಏರಿದೆ. ಗೂಳಿ ಓಟವು ಮುಂದುವರಿದಿದ್ದು, ಟಾಪ್ ಗೇಯ್ನರ್ಸ್ ಮಾಹಿತಿ ಇಲ್ಲಿದೆ.

Closing Bell: ಷೇರುಪೇಟೆಯಲ್ಲಿ ಹೊಸ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ; ಗೂಳಿ ಓಟಕ್ಕೆ ತಡೆಯೇ ಇಲ್ಲ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 24, 2021 | 5:18 PM

Share

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೆಪ್ಟೆಂಬರ್ 24, 2021ರ ಶುಕ್ರವಾರವೂ ಗೆಲುವಿನ ಓಟ ಮುಂದುವರಿಸಿದ್ದು, ದಿನಾಂತ್ಯದ ಹೊತ್ತಿಗೆ 60 ಸಾವಿರ ಪಾಯಿಂಟ್ಸ್ ದಾಟಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯ ಎತ್ತರವಾದ 60,333 ಹಾಗೂ 17,947.65 ಪಾಯಿಂಟ್ಸ್​ಗಳನ್ನು ಕ್ರಮವಾಗಿ ಇಂಟ್ರಾಡೇನಲ್ಲಿ ಮುಟ್ಟಿದವು. ದಿನದ ಕೊನೆಗೆ ಸೆನ್ಸೆಕ್ಸ್ 163.11 ಪಾಯಿಂಟ್ಸ್ ಅಥವಾ ಶೇ 0.27 ಏರಿಕೆಯಾಗಿ 60,048.47ರಲ್ಲಿ ಈ ವಾರದ ವ್ಯವಹಾರ ಕೊನೆ ಮಾಡಿದೆ. ಇನ್ನು ನಿಫ್ಟಿ 30.20 ಪಾಯಿಂಟ್ಸ್ ಅಥವಾ ಶೇ 0.17ರಷ್ಟು ಮೇಲೇರಿ 17,853.20 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾ ಮಾಡಿದೆ. ಈ ವಾರದಲ್ಲಿ (ಸೋಮವಾರದಿಂದ ಶುಕ್ರವಾರದ ತನಕ) ಸೆನ್ಸೆಕ್ಸ್​ ಹಾಗೂ ನಿಫ್ಟಿ ತಲಾ ಶೇ 1.5ರಷ್ಟು ಹೆಚ್ಚಳ ಆಗಿವೆ. 

“ಜಾಗತಿಕವಾಗಿ ದುರ್ಬಲ ಮಾರುಕಟ್ಟೆಯ ಪರಿಣಾಮವು ದೇಶೀಯವಾಗಿ ಮೇಲ್ಮುಖವಾದ ಚಲನೆಗೆ ಯಾವುದೇ ರೀತಿಯಲ್ಲಿ ಅಡೆತಡೆ ಆಗಲಿಲ್ಲ. ರಿಯಾಲ್ಟಿ ಹಾಗೂ ಐ.ಟಿ. ಸ್ಟಾಕ್​ಗಳು ಏರಿಕೆ ಕಾಣುವ ಮೂಲಕ ದೇಶೀ ಮಾರುಕಟ್ಟೆಯ ಏರಿಕೆ ಓಟಕ್ಕೆ ಸಹಕಾರಿ ಆಯಿತು. ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಖ್ಯೆ ಏರಿಕೆ ಆಗುವ ಮೂಲಕ ಭಾರತವೂ ಜಾಗತಿಕ ಈಕ್ವಿಟಿ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಆದರೂ ಮಿಡ್​-ಕ್ಯಾಪ್ ಹಾಗೂ ಸ್ಮಾಲ್​-ಕ್ಯಾಪ್​ ಷೇರುಗಳಲ್ಲಿ ಲಾಭದ ನಗದೀಕರಣ ಕಂಡುಬಂದಿದೆ. ಅವು ಒತ್ತಡದಲ್ಲಿವೆ. ಮತ್ತು ಅಲ್ಪಾವಧಿಯಲ್ಲಿ ಹಾಗೇ ಮುಂದುವರಿಯಬಹುದು,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಗೃಹ ಸಾಲದ ಮೇಲೆ ಕಡಿಮೆ ಬಡ್ಡಿ ದರ ಹಾಗೂ ಮುದ್ರಾಂಕ ಶುಲ್ಕದಲ್ಲಿ (ಕರ್ನಾಟಕ) ಇಳಿಕೆ ಈ ಕಾರಣಕ್ಕೆ ರಿಯಾಲ್ಟಿ ವಲಯಕ್ಕೆ ಉತ್ತೇಜನ ಸಿಕ್ಕಿದ್ದು, ಅದಕ್ಕೆ ಪೂರಕವಾದ ವಲಯಗಳಲ್ಲೂ ಏರಿಕೆ ಆಗಿದೆ ಎಂದು ತಿಳಿಸಲಾಗಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಏಷ್ಯನ್ ಪೇಂಟ್ಸ್ ಶೇ 3.85 ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.77 ಈಷರ್ ಮೋಟಾರ್ಸ್ ಶೇ 2.59 ಎಚ್​ಸಿಎಲ್ ಟೆಕ್ ಶೇ 2.25 ಎಚ್​ಡಿಎಫ್​ಸಿ ಬ್ಯಾಂಕ್ ಶೇ 2.01

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಟಾಟಾ ಸ್ಟೀಲ್ ಶೇ -3.53 ಜೆಎಸ್​ಡಬ್ಲ್ಯು ಸ್ಟೀಲ್ ಶೇ -2.67 ಎಸ್​ಬಿಐ ಶೇ -2.01 ಡಿವೀಸ್ ಲ್ಯಾಬ್ಸ್ ಶೇ -1.99 ಆಕ್ಸಿಸ್ ಬ್ಯಾಂಕ್ ಶೇ -1.74

ಇದನ್ನೂ ಓದಿ: Sensex Crosses 60,000: ಷೇರುಪೇಟೆಯ ಸೆನ್ಸೆಕ್ಸ್​ ಸೂಚ್ಯಂಕ 60,000 ಪಾಯಿಂಟ್ಸ್ ಆಚೆಗೆ; 18 ಸಾವಿರದತ್ತ ನಿಫ್ಟಿ 50

ಅಲ್ಪಾವಧಿಗೆ ರಿಟರ್ನ್ಸ್ ಬಯಸುವವರು ಷೇರುಗಳಲ್ಲಿ ಹಣ ಹೂಡಲೇಬಾರದು ಎನ್ನುತ್ತಾರೆ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್

(Stock Market Index Sensex And Nifty Closes At Record High On September 24 2021)

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್