AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sensex Crosses 60,000: ಷೇರುಪೇಟೆಯ ಸೆನ್ಸೆಕ್ಸ್​ ಸೂಚ್ಯಂಕ 60,000 ಪಾಯಿಂಟ್ಸ್ ಆಚೆಗೆ; 18 ಸಾವಿರದತ್ತ ನಿಫ್ಟಿ 50

ಭಾರತದ ಷೇರುಪೇಟೆ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ (ಸೆಪ್ಟೆಂಬರ್ 24, 2021) ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ 60,000 ಪಾಯಿಂಟ್ಸ್​ ಗಡಿಯನ್ನು ದಾಟಿದೆ. ಆರಂಭದ ಮೊದಲ ಗಂಟೆಯ ವಹಿವಾಟಿನಲ್ಲಿ ಹತ್ತಿರಹತ್ತಿರ ಶೇ 60ರಷ್ಟು ಸ್ಟಾಕ್​ಗಳು ಏರಿಕೆ ಕಂಡವು. ಕೇವಲ 161 ಟ್ರೇಡಿಂಗ್ ಸೆಷನ್​ನಲ್ಲಿ ಸೆನ್ಸೆಕ್ಸ್ 50 ಸಾವಿರ ಪಾಯಿಂಟ್ಸ್​ನಿಂದ 60 ಸಾವಿರ ಪಾಯಿಂಟ್ಸ್​ಗೆ ಜಿಗಿದಿದೆ. ಇದು ಅತ್ಯಂತ ವೇಗವಾಗಿ 10 ಸಾವಿರ ಪಾಯಿಂಟ್ಸ್​ ಗಳಿಕೆ ಕಂಡ ಸಮಯ ಆಗಿದೆ. ಇದಕ್ಕೂ ಮುನ್ನ 10 ಸಾವಿರ […]

Sensex Crosses 60,000: ಷೇರುಪೇಟೆಯ ಸೆನ್ಸೆಕ್ಸ್​ ಸೂಚ್ಯಂಕ 60,000 ಪಾಯಿಂಟ್ಸ್ ಆಚೆಗೆ; 18 ಸಾವಿರದತ್ತ ನಿಫ್ಟಿ 50
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Sep 24, 2021 | 10:59 AM

Share

ಭಾರತದ ಷೇರುಪೇಟೆ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ (ಸೆಪ್ಟೆಂಬರ್ 24, 2021) ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ 60,000 ಪಾಯಿಂಟ್ಸ್​ ಗಡಿಯನ್ನು ದಾಟಿದೆ. ಆರಂಭದ ಮೊದಲ ಗಂಟೆಯ ವಹಿವಾಟಿನಲ್ಲಿ ಹತ್ತಿರಹತ್ತಿರ ಶೇ 60ರಷ್ಟು ಸ್ಟಾಕ್​ಗಳು ಏರಿಕೆ ಕಂಡವು. ಕೇವಲ 161 ಟ್ರೇಡಿಂಗ್ ಸೆಷನ್​ನಲ್ಲಿ ಸೆನ್ಸೆಕ್ಸ್ 50 ಸಾವಿರ ಪಾಯಿಂಟ್ಸ್​ನಿಂದ 60 ಸಾವಿರ ಪಾಯಿಂಟ್ಸ್​ಗೆ ಜಿಗಿದಿದೆ. ಇದು ಅತ್ಯಂತ ವೇಗವಾಗಿ 10 ಸಾವಿರ ಪಾಯಿಂಟ್ಸ್​ ಗಳಿಕೆ ಕಂಡ ಸಮಯ ಆಗಿದೆ. ಇದಕ್ಕೂ ಮುನ್ನ 10 ಸಾವಿರ ಪಾಯಿಂಟ್ಸ್​​ ದಾಟುವುದಕ್ಕೆ ಸರಾಸರಿ 931 ಸೆಷನ್​ಗಳನ್ನು ಸೂಚ್ಯಂಕವು ತೆಗೆದುಕೊಂಡಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ 2020ರ ಮಾರ್ಚ್​ನಲ್ಲಿ ಸೆನ್ಸೆಕ್ಸ್​ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತು. ಆ ನಂತರ ಜಾಗತಿಕ ನಗದು ಲಭ್ಯತೆ ಮತ್ತು ನಿರೀಕ್ಷೆಗಿಂತ ವೇಗವಾಗಿ ಗಳಿಕೆಯಲ್ಲಿನ ಚೇತರಿಕೆ ಕಂಡುಬಂತು.

“ಅಲ್ಪಾವಧಿಯಲ್ಲಿ ಮಾರುಕಟ್ಟೆ ಇನ್ನೊಂದಿಷ್ಟು ಮೇಲಕ್ಕೆ ಏರಬಹುದು. ಸ್ಥಳೀಯ ಅಂಶಗಳು ಸಕಾರಾತ್ಮಕವಾಗಿವೆ. ಲಸಿಕೆ ಹಾಕುವ ಕಾರ್ಯಕ್ರಮ ವೇಗ ಪಡೆದುಕೊಂಡಿದೆ ಮತ್ತು ಕೊರೊನಾ ಮೂರನೇ ಅಲೆ ಇರುವುದಿಲ್ಲ ಎಂಬ ಭರವಸೆ ಇದೆ,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಈಗಿನ ಗೂಳಿ ಓಟಕ್ಕೆ (Bull Run) ಕಾರಣ ಆಗಿರುವುದು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾವು ಸೇರಿದಂತೆ ಜಾಗತಿಕ ಕೇಂದ್ರ ಬ್ಯಾಂಕ್​ಗಳು ನಗದು ಬೆಂಬಲದಿಂದ. ಆ ನಂತರ ಆದಾಯದಲ್ಲಿನ ಬೆಳವಣಿಯ ಉತ್ತೇಜನ ಮತ್ತು ಆರ್ಥಿಕ ಚೇತರಿಕೆಯ ನಿರೀಕ್ಷೆಯಿಂದಾಗಿ ಅನುಕೂಲ ಆಯಿತು.

ವಿಶ್ಲೇಷಕರು ನಿರೀಕ್ಷೆ ಮಾಡುವಂತೆ ಸೂಚ್ಯಂಕ ಕಂಪೆನಿಗಳ ಗಳಿಕೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 35ರಷ್ಟು ಬೆಳವಣಿಗೆ ಮತ್ತು ಮುಂದಿನ ವರ್ಷ ಶೇ 20ರಷ್ಟು ಬೆಳವಣಿಗೆ ಕಾಣಲಿದೆ. ಇದೇ ವೇಳೆ ಕೊರೊನಾ ಲಸಿಕೆ ಹಾಕುತ್ತಿರುವ ವೇಗದ ಪರಿ ನೋಡಿದರೆ ಆರ್ಥಿಕ ಬೆಳವಣಿಗೆ ಇನ್ನಷ್ಟು ಬೇಗ ಆಗಬಹುದು. ಸದ್ಯಕ್ಕಂತೂ ಕೊರೊನಾ ಮೂರನೇ ಅಲೆಯ ಗಂಭೀರ ಪರಿಣಾಮ ಎದುರಿಸುವಂಥ ಪ್ರಮೇಯ ಬರುವುದಿಲ್ಲ ಎನ್ನಲಾಗುತ್ತಿದೆ. ಈಗ 50ರಿಂದ 60 ಸಾವಿರ ಪಾಯಿಂಟ್ಸ್​ಗೆ ಏರಿಕೆ ಕಂಡಿದ್ದರಲ್ಲಿ ಪ್ರಮುಖವಾಗಿ ಇನ್ಫೋಸಿಸ್ (ಶೇ 30 ಏರಿಕೆ), ರಿಲಯನ್ಸ್​ ಇಂಡಸ್ಟ್ರೀಸ್ (ಶೇ 19 ಏರಿಕೆ), ಐಸಿಐಸಿಐ ಬ್ಯಾಂಕ್ (ಶೇ 30ರಷ್ಟು ಏರಿಕೆ) ಮತ್ತು ಭಾರ್ತಿ ಏರ್​ಟೆಲ್​ ಕೊಡುಗೆ ಪ್ರಮುಖವಾಗಿದೆ.

ಈ ವರದಿ ಪ್ರಕಟವಾಗುವ ಹೊತ್ತಿಗೆ ಸೆನ್ಸೆಕ್ಸ್ 417.34 ಪಾಯಿಂಟ್ಸ್​ ಅಥವಾ ಶೇ 0.70 ಏರಿಕೆ ಕಂಡು, 60,302.70 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 111.80 ಪಾಯಿಂಟ್ಸ್ ಅಥವಾ ಶೇ 0.63ರಷ್ಟು ಮೇಲೇರಿ 17,934.80 ಪಾಯಿಂಟ್ಸ್​ನಲ್ಲಿ ವಹಿಬಾಟು ನಡೆಸುತ್ತಿತ್ತು.

ಬಿಎಸ್​ಇ ಸೆನ್ಸೆಕ್ಸ್​ನಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಏಷ್ಯನ್ ಪೇಂಟ್ಸ್ ಶೇ 4.76 ಭಾರ್ತಿ ಏರ್​ಟೆಲ್​ ಶೇ 3.04 ಎಚ್​ಸಿಎಲ್​ ಟೆಕ್​ ಶೇ 3.09 ಇನ್ಫೋಸಿಸ್​ ಶೇ 2.33 ಟಿಸಿಎಸ್ ಶೇ 1.81

ಇದನ್ನೂ ಓದಿ: Sensex Stocks: ಸೆನ್ಸೆಕ್ಸ್ ಲಿಸ್ಟೆಡ್ ಷೇರುಗಳ ಹೂಡಿಕೆದಾರರ ಸಂಪತ್ತು 3 ಲಕ್ಷ ಕೋಟಿ ರೂಪಾಯಿ ಏರಿಕೆ

(BSE Sensex Crosses 60000 Points Mark And Nifty50 Near 18000 Here Is The Stock Market Latest Updates)

Published On - 10:57 am, Fri, 24 September 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್