AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Deposits: ಬ್ಯಾಂಕ್​ ಠೇವಣಿಯಲ್ಲಿ ಪ್ರಗತಿ; ಎಷ್ಟಾಗಿದೆ ಎಂಬ ವಿವರಕ್ಕೆ ಇಲ್ಲಿದೆ ಆರ್​ಬಿಐ ಮಾಹಿತಿ

ಸಾಂಸ್ಥಿಕ ವಿಭಾಗಗಳಲ್ಲಿ ಒಟ್ಟು ಠೇವಣಿಗಳಲ್ಲಿ ಗೃಹ ವಲಯವು ಶೇ 64.1ರಷ್ಟು ಹೊಂದಿದೆ. ಹಿಂದೂ ಅವಿಭಜಿತ ಕುಟುಂಬಗಳು (HUFಗಳು) ಈ ವಲಯದಲ್ಲಿ ಒಂದು ಪ್ರಮುಖ ಪಾಲಾಗಿದ್ದು, ಒಟ್ಟು ಠೇವಣಿಗಳಲ್ಲಿ ಶೇ 55.8ರಷ್ಟು ಕೊಡುಗೆಯನ್ನು ನೀಡಿವೆ ಎಂದು ಡೇಟಾ ತೋರಿಸಿದೆ.

Bank Deposits: ಬ್ಯಾಂಕ್​ ಠೇವಣಿಯಲ್ಲಿ ಪ್ರಗತಿ; ಎಷ್ಟಾಗಿದೆ ಎಂಬ ವಿವರಕ್ಕೆ ಇಲ್ಲಿದೆ ಆರ್​ಬಿಐ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Updated By: shruti hegde|

Updated on: Sep 24, 2021 | 9:12 AM

Share

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಡೇಟಾದ ಪ್ರಕಾರ, 2020-21ರ ಅವಧಿಯಲ್ಲಿ ಬ್ಯಾಂಕ್ ಠೇವಣಿಗಳು ಶೇ 11.9ರಷ್ಟು ವೃದ್ಧಿಯಾಗಿದ್ದು, 2019-20ರಲ್ಲಿ ಶೇ 8.8ರಷ್ಟಾಗಿತ್ತು. ಕರೆಂಟ್​ ಅಕೌಂಟ್ ಮತ್ತು ಸೇವಿಂಗ್ಸ್​ ಅಕೌಂಟ್ (CASA) ಠೇವಣಿಗಳಲ್ಲಿ ಹೆಚ್ಚಿನ ಬೆಳವಣಿಗೆ ಕಂಡುಬಂದಿದೆ. CASA ಠೇವಣಿಗಳ ಪಾಲು ಮಾರ್ಚ್ 2021ರಲ್ಲಿ ಶೇ 43.7ಕ್ಕೆ ಏರಿದೆ. ವರ್ಷದ ಹಿಂದಿನ ಅವಧಿಯಲ್ಲಿ ಶೇ 41.7ರಷ್ಟಿತ್ತು. ಆರ್‌ಬಿಐನ ಮಾರ್ಚ್ 2021ರ ಅಂಕಿ- ಅಂಶಗಳ ಪ್ರಕಾರ, ನಿಗದಿತ ವಾಣಿಜ್ಯ ಬ್ಯಾಂಕ್​ಗಳಲ್ಲಿನ ಠೇವಣಿಗಳ ಮೇಲೆ ಗುರುವಾರ ಈ ಡೇಟಾ ತೋರಿಸಲಾಗಿದೆ.

ಅಲ್ಪಾವಧಿ ಠೇವಣಿಗಳ ಪಾಲು ಹೆಚ್ಚುತ್ತಿದೆ ಸಾಂಸ್ಥಿಕ ವಿಭಾಗಗಳಲ್ಲಿ ಒಟ್ಟು ಠೇವಣಿಗಳಲ್ಲಿ ಗೃಹ ವಲಯವು ಶೇ 64.1ರಷ್ಟು ಹೊಂದಿದೆ. ಹಿಂದೂ ಅವಿಭಜಿತ ಕುಟುಂಬಗಳು (HUFಗಳು) ಈ ವಲಯದಲ್ಲಿ ಒಂದು ಪ್ರಮುಖ ಪಾಲಾಗಿದ್ದು, ಒಟ್ಟು ಠೇವಣಿಗಳಲ್ಲಿ ಶೇ 55.8ರಷ್ಟು ಕೊಡುಗೆಯನ್ನು ನೀಡಿವೆ ಎಂದು ಡೇಟಾ ತೋರಿಸಿದೆ. ಹಣಕಾಸೇತರ ನಿಗಮದ ಬ್ಯಾಂಕ್ ಠೇವಣಿಗಳು 2020-21ರಲ್ಲಿ ಶೇ 18.8ರಷ್ಟು ಹೆಚ್ಚಾಗಿದೆ ಮತ್ತು ಒಟ್ಟು ಠೇವಣಿಗಳಲ್ಲಿ ಅದರ ಪಾಲು ಮಾರ್ಚ್ 2021ರಲ್ಲಿ ಶೇ 16.2ಕ್ಕೆ ಏರಿತು. ಮೆಟ್ರೋಪಾಲಿಟನ್ ನಗರಗಳಲ್ಲಿನ ಬ್ಯಾಂಕ್​ಗಳು ಒಟ್ಟು ಠೇವಣಿಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಹೊಂದಿವೆ. ಹಿಂದಿನ ವರ್ಷದಲ್ಲಿ ಶೇ 43.2ಕ್ಕೆ ಹೋಲಿಸಿದರೆ, 2020-21ರಲ್ಲಿ ಶೇ 59.6ಕ್ಕೆ ಹೆಚ್ಚಿದ ಠೇವಣಿಗಳನ್ನು ಹೊಂದಿದೆ.

ದತ್ತಾಂಶದ ಪ್ರಕಾರ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಕರ್ನಾಟಕ ಮೂರು ಪ್ರಮುಖ ರಾಜ್ಯಗಳಾಗಿದ್ದು, ಒಟ್ಟು ಗೃಹ ವಲಯದ ಮೂರನೇ ಒಂದು ಭಾಗದಷ್ಟು ಠೇವಣಿಗಳನ್ನು ಹೊಂದಿದೆ. ಮತ್ತು 2020-21ರಲ್ಲಿ ಅದರ ಹೆಚ್ಚುತ್ತಿರುವ ಠೇವಣಿಗಳಲ್ಲಿ ಶೇ 40ಕ್ಕಿಂತ ಜಾಸ್ತಿಯಿದೆ.

ಖಾಸಗಿ ವಲಯ ಬೆಳೆಯುತ್ತಿದೆ ಒಟ್ಟು ಬ್ಯಾಂಕ್ ಠೇವಣಿಗಳಲ್ಲಿ ಖಾಸಗಿ ವಲಯದ ಬ್ಯಾಂಕ್​ಗಳ ಪಾಲು ಸಾರ್ವಜನಿಕ ವಲಯದ ಬ್ಯಾಂಕ್​ಗಳಿಗಿಂತ ಏರಿಕೆಯಾಗುತ್ತಲೇ ಶೇ 30.5ರಷ್ಟಿದ್ದು, ಒಂದು ವರ್ಷದ ಹಿಂದೆ ಶೇ 29.5 ರಷ್ಟಿತ್ತು. ಇದು ಹಣಕಾಸು ಮತ್ತು ಹಣಕಾಸೇತರ ನಿಗಮಗಳ ಅರ್ಧದಷ್ಟು ಠೇವಣಿಗಳ ಲೆಕ್ಕವಾಗಿದೆ. ನಿಗದಿತ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳು ಇಳಿಮುಖ ಆಗುತ್ತಿರುವುದರಿಂದ ಶೇ 6ಕ್ಕಿಂತ ಕಡಿಮೆ ಬಡ್ಡಿಯ ಟರ್ಮ್​ ಠೇವಣಿಗಳ ಪಾಲು 2021ರ ಮಾರ್ಚ್‌ನಲ್ಲಿ ಶೇ 21.3ರಿಂದ ಶೇ 69ಕ್ಕೆ ಏರಿತು.

ಅಲ್ಪಾವಧಿಯ ಠೇವಣಿಗಳ ಪಾಲು ಶೇ 32.8ಕ್ಕೆ ಏರಿತು, ಒಂದು ವರ್ಷದ ಹಿಂದೆ ಶೇ 25.4ರಷ್ಟಿತ್ತು ಎಂದು ಡೇಟಾ ತೋರಿಸಿದೆ. ಶೇ 5ರಿಂದ ಶೇ 6ರ ಬಡ್ಡಿದರದ ಆವರಣದಲ್ಲೇ ಒಟ್ಟು ಠೇವಣಿಗಳ ಶೇ 36.8ರಷ್ಟು ಹಣವನ್ನು ಜಮೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:

TDS: ಬ್ಯಾಂಕ್​ ಠೇವಣಿ ಮೇಲೆ ಬರುವ ಬಡ್ಡಿಗೆ ಪರಿಶಿಷ್ಟ ಪಂಗಡವರಿಗೆ ಟಿಡಿಎಸ್​ ಕಡಿತವಿಲ್ಲ; ಕೇಂದ್ರದ ಅಧಿಸೂಚನೆ

TV9 Facebook Live: ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರು ಇನ್​ಕಮ್​ ಟ್ಯಾಕ್ಸ್​ ಸಮಸ್ಯೆ ಹೀಗೆ ಬಗೆಹರಿಸಿಕೊಳ್ಳಿ

(Bank Deposits Progress in Bank Deposits Here a look at the RBI information)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ