AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೀಟೇಲ್ ಹೂಡಿಕೆದಾರರಿಗೆ ಫೇವರಿಟ್ ಆಗಿರುವ ಇಂಡೆಕ್ಸ್ ಫಂಡ್​ಗಳು; ಐದು ವರ್ಷದಲ್ಲಿ ಹೂಡಿಕೆಯಲ್ಲಿ ಗಣನೀಯ ಏರಿಕೆ

Retail investors share in index funds total AUM rises to 55pc: ಕಳೆದ ಐದು ವರ್ಷದಲ್ಲಿ ಇಂಡೆಕ್ಸ್ ಫಂಡ್​ಗಳಲ್ಲಿ ರೀಟೇಲ್ ಹೂಡಿಕೆದಾರರ ಪಾಲು ಶೇ. 12ರಿಂದ 55ಕ್ಕೆ ಏರಿದೆ. ಕಡಿಮೆ ಎಕ್ಸ್​ಪೆನ್ಸ್ ರೇಶಿಯೋ, ಸುಲಭ ಹೂಡಿಕೆ, ದೀರ್ಘಾವಧಿ ಉತ್ತಮ ರಿಟರ್ನ್ಸ್ ಇತ್ಯಾದಿ ಕಾರಣಗಳು ಹೂಡಿಕೆದಾರರನ್ನು ಸೆಳೆದಿರಬಹುದು. ಆ್ಯಕ್ಟಿವ್ ಫಂಡ್​ಗಳಿಗಿಂತ ಪಾಸಿವ್ ಫಂಡ್​ಗಳು ಕಡಿಮೆ ವೆಚ್ಚ, ಹೆಚ್ಚು ಸುರಕ್ಷತೆ ಎನ್ನುವ ಭಾವನೆ ಇದೆ.

ರೀಟೇಲ್ ಹೂಡಿಕೆದಾರರಿಗೆ ಫೇವರಿಟ್ ಆಗಿರುವ ಇಂಡೆಕ್ಸ್ ಫಂಡ್​ಗಳು; ಐದು ವರ್ಷದಲ್ಲಿ ಹೂಡಿಕೆಯಲ್ಲಿ ಗಣನೀಯ ಏರಿಕೆ
ಶೇರು ಮಾರುಕಟ್ಟೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 26, 2026 | 7:20 PM

Share

ನವದೆಹಲಿ, ಆಗಸ್ಟ್ 26: ಚಿಲ್ಲರೆ ಹೂಡಿಕೆದಾರರ (Retail Investors) ಆದ್ಯತೆ ಕಳೆದ 5 ವರ್ಷದಲ್ಲಿ ಗಮನಾರ್ಹವಾಗಿ ಬದಲಾಗಿದೆ. ಈ ವರ್ಗದ ಹೂಡಿಕೆದಾರರು ಇಂಡೆಕ್ಸ್ ಫಂಡ್​ಗಳಲ್ಲಿ (Index Funds) ಹೂಡಿಕೆ ಮಾಡುವುದು ಹೆಚ್ಚಾಗಿದೆ. ವರದಿಗಳ ಪ್ರಕಾರ, ಕಳೆದ 5 ವರ್ಷಗಳಲ್ಲಿ ಇಂಡೆಕ್ಸ್ ಫಂಡ್‌ಗಳಲ್ಲಿ ಚಿಲ್ಲರೆ ಹೂಡಿಕೆದಾರರ ಪಾಲು ಶೇ. 12 ರಿಂದ ಶೇಕಡಾ 55 ಕ್ಕೆ ಭಾರಿ ಏರಿಕೆ ಕಂಡಿದೆ.

ಇಂಡೆಕ್ಸ್ ಫಂಡ್​ಗಳಿಗೆ ಹೂಡಿಕೆದಾರರು ಮುಗಿಬೀಳಲು ಏನು ಕಾರಣ?

  • ಕಡಿಮೆ ವೆಚ್ಚ (Low Expense Ratio): ಆಕ್ಟಿವ್ Mutual Funds ಗೆ ಹೋಲಿಸಿದರೆ ಇಂಡೆಕ್ಸ್ ಫಂಡ್‌ಗಳ ನಿರ್ವಹಣಾ ವೆಚ್ಚ (TER) ಅತ್ಯಂತ ಕಡಿಮೆಯಾಗಿರುವುದು ಹೂಡಿಕೆದಾರರನ್ನು ಆಕರ್ಷಿಸಲು ಮುಖ್ಯ ಕಾರಣ.
  • ಸುಲಭ ಹಾಗೂ ಸರಳ ಹೂಡಿಕೆ: ಶೇರು ಮಾರುಕಟ್ಟೆಯ ಪ್ರತ್ಯೇಕ ಶೇರುಗಳನ್ನು ಆಯ್ಕೆ ಮಾಡಿ ರಿಸ್ಕ್ ತೆಗೆದುಕೊಳ್ಳುವ ಬದಲು, Nifty 50 ಅಥವಾ Sensex ನಂತಹ ಪ್ರಮುಖ ಸೂಚ್ಯಂಕಗಳನ್ನು (Indices) ಆಧರಿಸಿ ಹೂಡಿಕೆ ಮಾಡುವುದು ಸರಳವಾಗಿದೆ.
  • ಉತ್ತಮ ರಿಟರ್ನ್ಸ್: ದೀರ್ಘಾವಧಿಯಲ್ಲಿ ಹೆಚ್ಚಿನ ಆಕ್ಟಿವ್ ಫಂಡ್‌ಗಳು ಮಾರುಕಟ್ಟೆಯ ಸೂಚ್ಯಂಕವನ್ನು (Benchmark Index) ಹಿಂದಿಕ್ಕಲು ವಿಫಲವಾಗುತ್ತಿರುವುದರಿಂದ, ಹೂಡಿಕೆದಾರರು ಪ್ಯಾಸಿವ್ ಹೂಡಿಕೆ (Passive Investing) ವಿಧಾನವಾದ ಇಂಡೆಕ್ಸ್ ಫಂಡ್‌ಗಳತ್ತ ವಾಲುತ್ತಿದ್ದಾರೆ.

ಇದನ್ನೂ ಓದಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಮೂಲಕ ಹೂಡಿಕೆ ಮಾಡುವ ಮುನ್ನ ಈ ವಿಷಯಗಳು ತಿಳಿದಿರಲಿ

ಆ್ಯಕ್ಟಿವ್ ಫಂಡ್ ಮತ್ತು ಪಾಸಿವ್ ಫಂಡ್ ಮಧ್ಯೆ ಏನು ವ್ಯತ್ಯಾಸ?

ಆ್ಯಕ್ಟಿವ್ ಫಂಡ್​ನಲ್ಲಿರುವ ಹಣವನ್ನು ಮ್ಯೂಚುವಲ್ ಫಂಡ್​ನಲ್ಲಿನ ತಜ್ಞ ನಿರ್ವಹಣಾ ತಂಡವು ನಿರ್ವಹಿಸುತ್ತದೆ. ಅವರು ಮಾರುಕಟ್ಟೆಯ ಅಧ್ಯಯನ ನಡೆಸಿ ಸೂಕ್ತವಾದ ಶೇರುಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಫಂಡ್ ಮ್ಯಾನೇಜರ್ ಸಕ್ರಿಯವಾಗಿ ನಿರ್ವಹಣೆ ಮಾಡುವುದರಿಂದ ಅದು ಆ್ಯಕ್ಟಿವ್ ಫಂಡ್ ಎನಿಸುತ್ತದೆ.

ಇನ್ನೊಂದೆಡೆ, ಪಾಸಿವ್ ಫಂಡ್​ನಲ್ಲಿ ಮ್ಯಾನೇಜರ್ ಪಾತ್ರ ತೀರಾ ನಗಣ್ಯ. ನಿರ್ದಿಷ್ಟ ಇಂಡೆಕ್ಸ್​ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಇಂಡೆಕ್ಸ್ ಫಂಡ್ ಇದಕ್ಕೆ ಉದಾಹರಣೆ. ನಿಫ್ಟಿ50 ಇಂಡೆಕ್ಸ್, ಮಿಡ್ ಕ್ಯಾಪ್ ಇಂಡೆಕ್ಸ್, ಐಟಿ ಇಂಡೆಕ್ಸ್ ಹೀಗೆ ವಿವಿಧ ಇಂಡೆಕ್ಸ್​ಗಳಿಗೆ ಪ್ರತ್ಯೇಕ ಇಂಡೆಕ್ಸ್ ಫಂಡ್​ಗಳಿರುತ್ತವೆ.

ಆ್ಯಕ್ಟಿವ್ ಫಂಡ್ ಅನ್ನು ಮ್ಯಾನೇಜರ್ ನಿರ್ವಹಿಸುವುದರಿಂದ ಅವರಿಗೆ ತಗುಲುವ ವೆಚ್ಚ ಇತ್ಯಾದಿಗಾಗಿ ಎಕ್ಸ್​ಪೆನ್ಸ್ ರೇಶಿಯೋ ನಿಗದಿಯಾಗಿರುತ್ತದೆ. ಪಾಸಿವ್ ಫಂಡ್​ಗೆ ಎಕ್ಸ್​ಪೆನ್ಸ್ ರೇಶಿಯೋ ಬಹಳ ಕಡಿಮೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ