RIL board: ರಿಲಾಯನ್ಸ್ ಮಂಡಳಿಗೆ ಅನಂತ್ ಅಂಬಾನಿ ನೇಮಕಾತಿ ಬೇಡ: ಐಐಎಎಸ್ ಶಿಫಾರಸು; ಕಿರಿಯ ಮಗನ ನೇಮಕಕ್ಕೆ ಯಾಕೆ ಹಿಂದೇಟು?
IiAS Recommends Against Anand Ambani: ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಆರ್ಐಎಲ್ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಇದಕ್ಕೆ ಷೇರುದಾರರ ಅನುಮೋದನೆ ಬೇಕಾಗುತ್ತದೆ. ಇದೇ ವೇಳೆ, ಐಐಎಎಸ್ ಎಂಬ ಪ್ರಾಕ್ಸಿ ಅಡ್ವೈಸರಿ ಸಂಸ್ಥೆಯೊಂದು ಕಿರಿಯ ಮಗ ಅನಂತ್ ಅಂಬಾನಿ ನೇಮಕಕ್ಕೆ ಅನುಮೋದನೆ ನೀಡಬೇಡಿ ಎಂದು ಷೇರುದಾರರಿಗೆ ಸಲಹೆ ನೀಡಿದೆ. ಆದರೆ, ಹಿರಿಯ ಮಕ್ಕಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ನೇಮಕಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಮುಕೇಶ್ ಅಂಬಾನಿ ತಮ್ಮ ರಿಲಾಯನ್ಸ್ ಸಾಮ್ರಾಜ್ಯವನ್ನು (Reliance Industries) ಮಕ್ಕಳಿಗೆ ಹಂಚಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಮೂವರು ಮಕ್ಕಳಿಗೆ ಬೇರೆ ಬೇರೆ ವಿಭಾಗಗಳ ಜವಾಬ್ದಾರಿ ಕೊಟ್ಟು ಬಿಸಿನೆಸ್ ಪಾಠ ಕಲಿಸುತ್ತಿದ್ದಾರೆ. ಇದರ ಇನ್ನೊಂದು ಹೆಜ್ಜೆಯಾಗಿ ಈ ಮೂವರನ್ನೂ ಕೂಡ ರಿಲಾಯನ್ಸ್ ಇಂಡಸ್ಟ್ರೀಸ್ನ ಮಂಡಳಿಗೆ ನೇಮಕ ಮಾಡಲು ಯತ್ನಿಸಿದ್ದಾರೆ. ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಆರ್ಐಎಲ್ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಆದರೆ, ಇದಕ್ಕೆ ಷೇರುದಾರರ ಅನುಮೋದನೆ ಬೇಕಾಗುತ್ತದೆ. ಇದೇ ವೇಳೆ, ಐಐಎಎಸ್ ಎಂಬ ಪ್ರಾಕ್ಸಿ ಅಡ್ವೈಸರಿ ಸಂಸ್ಥೆಯೊಂದು ಕಿರಿಯ ಮಗ ಅನಂತ್ ಅಂಬಾನಿ ನೇಮಕಕ್ಕೆ ಅನುಮೋದನೆ ನೀಡಬೇಡಿ ಎಂದು ಷೇರುದಾರರಿಗೆ ಸಲಹೆ ನೀಡಿದೆ. ಆದರೆ, ಹಿರಿಯ ಮಕ್ಕಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ನೇಮಕಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಪ್ರಾಕ್ಸಿ ಅಡ್ವೈಸರಿ ಸಂಸ್ಥೆ ಎಂದರೇನು?
ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ನಿರ್ದೇಶಕರ ನೇಮಕಕ್ಕೋ ಅಥವಾ ಇನ್ಯಾವುದಾದರೂ ಕೆಲ ನಿರ್ಧಾರ ಕೈಗೊಳ್ಳುವುದಕ್ಕೋ ಷೇರುದಾರರ ಅನುಮೋದನೆ ಪಡೆಯಬೇಕಾಗುತ್ತದೆ. ಇದಕ್ಕೆ ಷೇರುದಾರರಿಂದ ವೋಟಿಂಗ್ ನಡೆಯುತ್ತದೆ. ಷೇರುದಾರರು ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಪ್ರಾಕ್ಸಿ ಅಡ್ವೈಸರಿ ಸಂಸ್ಥೆಗಳು ಶಿಫಾರಸು ಮಾಡುತ್ತವೆ. ಈ ಅಡ್ವೈಸರಿ ಸಂಸ್ಥೆಗಳಿಗೂ ಆ ಕಂಪನಿಗೂ ಸಂಬಂಧ ಇರುವುದಿಲ್ಲ. ಸಾಂಸ್ಥಿಕ ಹೂಡಿಕೆದಾರರು ಸ್ವತಂತ್ರವಾಗಿ ಇಂತಹ ಅಡ್ವೈಸರಿ ಸಂಸ್ಥೆಗಳ ಸೇವೆ ಪಡೆಯುತ್ತವೆ. ಇದಕ್ಕೆ ಶುಲ್ಕ ಇರುತ್ತದೆ.
ಈ ಪ್ರಾಕ್ಸಿ ಸಂಸ್ಥೆಗಳು ವಿವಿಧ ನಿಯಮಗಳು, ಕಾನೂನು, ಮಾರುಕಟ್ಟೆ ಪರಿಸ್ಥಿತಿ, ಕಂಪನಿಯ ಸ್ಥಿತಿ ಇತ್ಯಾದಿ ಎಲ್ಲವನ್ನೂ ಅವಲೋಕಿಸಿ ಶಿಫಾರಸು ಮಾಡುತ್ತವೆ. ಅನಂತ್ ಅಂಬಾನಿ ನೇಮಕವನ್ನು ವಿರೋಧಿಸಿರುವ ಐಐಎಎಸ್ (IiAS- Institutional Investor Advisor Service) ಕೂಡ ಇಂಥ ಒಂದು ಪ್ರಾಕ್ಸಿ ಅಡ್ವೈಸರಿ ಸಂಸ್ಥೆ.
ಅನಂತ್ ಅಂಬಾನಿ ನೇಮಕ ಬೇಡ ಎಂದದ್ದು ಯಾಕೆ?
ಐಐಎಎಸ್ನ ವೋಟಿಂಗ್ ಗೈಡ್ಲೈನ್ಸ್ ಪ್ರಕಾರ, ನಿರ್ದೇಶಕ ಸ್ಥಾನಕ್ಕೆ ನೇಮಕವಾಗುವವರು ಸಾಕಷ್ಟು ಅನುಭವಿ ಆಗಿರಬೇಕು. 10 ವರ್ಷ ಕೆಲಸದ ಅನುಭವ ಹೊಂದಿರಬೇಕು. ಅಥವಾ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನರಾಗಿರಬೇಕು. ಅಥವಾ ಕಂಪನಿಯ ಸಂಸ್ಥಾಪನಾಗಿರಬೇಕು. ಅನಂತ್ ಅಂಬಾನಿ ಈ ಯಾವ ಮಾನದಂಡಗಳನ್ನು ಹೊಂದಿಲ್ಲ.
ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಇಬ್ಬರೂ 31 ವರ್ಷ ವಯಸ್ಸಿನರಾಗಿದ್ದಾರೆ. ಅವರಿಬ್ಬರು ಮಂಡಳಿ ನಿರ್ದೇಶಕರಾಗಲು ಯಾವ ಅಡ್ಡಿ ಇಲ್ಲ. ಆದರೆ, ಅನಂತ್ ಅಂಬಾನಿ ವಯಸ್ಸು 28 ವರ್ಷ ಮಾತ್ರ. ಅವರಿಗೆ ಕೆಲಸದ ಅನುಭವ 10 ವರ್ಷಕ್ಕಿಂತ ಕಡಿಮೆ ಇದೆ. ಹೀಗಾಗಿ, ಅನಂತ್ ಅಂಬಾನಿ ಅವರಿಗೆ ಅನುಮೋದನೆ ಮಾಡಬೇಡಿ ಎಂದು ಷೇರುದಾರರಿಗೆ ಐಐಎಎಸ್ ಶಿಫಾರಸು ಮಾಡಿದೆ.
ಇದನ್ನೂ ಓದಿ: ಸ್ವಿಸ್ ಬ್ಯಾಂಕ್ನಲ್ಲಿ ಖಾತೆ ತೆರೆಯೋದು ಹೇಗೆ? ಎಷ್ಟು ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ? ಇಲ್ಲಿದೆ ಡೀಟೇಲ್ಸ್
ಆದರೆ, ಬೇರೆ ಕೆಲ ಪ್ರಾಕ್ಸಿ ಅಡ್ವೈಸರಿ ಸಂಸ್ಥೆಗಳು ಅನಂತ್ ಅಂಬಾನಿ ನೇಮಕವನ್ನು ವಿರೋಧಿಸಿಲ್ಲ. ಮೂರೂ ಮಂದಿಯನ್ನು ನಿರ್ದೇಶಕರನ್ನಾಗಿ ನೇಮಕ ಮಾಡುವ ಆರ್ಐಎಲ್ ಮಂಡಳಿ ಪ್ರಸ್ತಾಪಕ್ಕೆ ಅನುಮೋದನೆ ಕೊಡಬಹುದು ಎಂಬ ಸಲಹೆಗಳನ್ನು ಇನ್ಗವರ್ನ್ ಇತ್ಯಾದಿ ಇತರ ಅಡ್ವೈಸರಿ ಸಂಸ್ಥೆಗಳು ನೀಡಿವೆ.
ಷೇರುದಾರರು ಪೋಸ್ಟರ್ ಬ್ಯಾಲಟ್ ಮೂಲಕ ಓಟಿಂಗ್ ನಡೆಸಬಹುದು. 2023ರ ಸೆಪ್ಟೆಂಬರ್ 27ರಂದೇ ಇ-ವೋಟಿಂಗ್ ಶುರುವಾಗಿದೆ. ಅಕ್ಟೋಬರ್ 26ಕ್ಕೆ ಈ ಪ್ರಕ್ರಿಯೆ ಮುಗಿಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ