ಸ್ವಿಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯೋದು ಹೇಗೆ? ಎಷ್ಟು ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ? ಇಲ್ಲಿದೆ ಡೀಟೇಲ್ಸ್

How to open swiss bank account: ಬೇರೆಲ್ಲೆಡೆಯಲ್ಲಿರುವಂತಹ ಬ್ಯಾಂಕಿಂಗ್ ವ್ಯವಸ್ಥೆಯೇ ಸ್ವಿಟ್ಜರ್​ಲ್ಯಾಂಡ್​ನಲ್ಲಿರುವುದು. ಸ್ವಿಸ್ ಬ್ಯಾಂಕ್ ಎನ್ನುವುದು ಒಂದು ಬ್ಯಾಂಕ್ ಹೆಸರಲ್ಲ. ಪ್ರಾತಿನಿಧಿಕವಾಗಿ ಆ ಹೆಸರು ಹೇಳಲಾಗುತ್ತದೆ. 240ಕ್ಕೂ ಹೆಚ್ಚು ಬ್ಯಾಂಕುಗಳು ಆ ದೇಶದಲ್ಲಿವೆ. ಒಂದು ಬ್ಯಾಂಕ್ ಖಾತೆ ತೆರೆಯಲು ಬೇಕಾದ ವಿಧಾನಗಳು ಸ್ವಿಸ್ ಬ್ಯಾಂಕ್ ಖಾತೆಗೂ ಅನ್ವಯ ಆಗುತ್ತವೆ. ಆದರೆ, ಇತರೆಡೆಗಿಂತ ಹೆಚ್ಚು ಕಟ್ಟುನಿಟ್ಟಾಗಿ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಸ್ವಿಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯೋದು ಹೇಗೆ? ಎಷ್ಟು ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ? ಇಲ್ಲಿದೆ ಡೀಟೇಲ್ಸ್
ಸ್ವಿಟ್ಜರ್​ಲ್ಯಾಂಡ್ ನ್ಯಾಷನಲ್ ಬ್ಯಾಂಕ್
Follow us
|

Updated on:Oct 09, 2023 | 6:52 PM

ದಶಕದ ಹಿಂದೆ ಸ್ವಿಸ್ ಬ್ಯಾಂಕ್ ಎಂದರೆ ಭಾರತದಲ್ಲಿ ಜನಸಾಮಾನ್ಯರಿಗೆ ಇದ್ದ ಭಾವನೆಯೇ ಬೇರೆ. ಕಳ್ಳತನದ ದುಡ್ಡೆಲ್ಲವೂ ಸ್ವಿಸ್ ಬ್ಯಾಂಕ್​ನಲ್ಲಿಡಲಾಗುತ್ತೆ ಎಂದೇ ಆಡಿಕೊಳ್ಳುತ್ತಿದ್ದುದುಂಟು. ಯಾರಾದರೂ ಸ್ವಿಸ್ ಬ್ಯಾಂಕಲ್ಲಿ ಅಕೌಂಟ್ (swiss bank account) ಇಟ್ಟಿದ್ದಾರೆಂದರೆ ಆತ ದೊಡ್ಡ ಕುಳನೇ ಆಗಿರುತ್ತಾನೆ ಎಂದು ಭಾವಿಸಲಾಗುತ್ತಿತ್ತು. ಒಂದು ಮಟ್ಟಿನವರೆಗೂ ಈ ಭಾವನೆ ನಿಜ. ತೆರಿಗೆಕಳ್ಳರು (tax evaders) ಸ್ವಿಸ್ ಬ್ಯಾಂಕಲ್ಲಿ ಹಣ ಇಟ್ಟುಕೊಂಡಿರಬಹುದು. ಆದರೆ ಸ್ವಿಸ್ ಬ್ಯಾಂಕ್​ನಲ್ಲಿ ಅಕೌಂಟ್ ಇಟ್ಟವರೆಲ್ಲರೂ ಕಳ್ಳರಲ್ಲ. ಸ್ವಿಟ್ಜರ್​ಲೆಂಡ್ ಸರ್ಕಾರ ಭಾರತವೂ ಸೇರಿದಂತೆ 104 ದೇಶಗಳಿಗೆ ಅವರ ಪ್ರಜೆಗಳಿಗೆ ಸೇರಿದ 36 ಲಕ್ಷ ಖಾತೆಗಳ ವಿವರಗಳಿರುವ ಪಟ್ಟಿಯನ್ನು ಆಯಾ ದೇಶಗಳಿಗೆ ಹಸ್ತಾಂತರಿಸಿದೆ. ಆದರೆ, ಯಾವ ದೇಶ ಕೂಡ ಈ ಪಟ್ಟಿಯಲ್ಲಿರುವ ಖಾತೆಯ ವಿವರವನ್ನು ಬಹಿರಂಗಪಡಿಸುವಂತಿಲ್ಲ. ಹಾಗಂತ ಷರುತ್ತು ಇಟ್ಟುಕೊಂಡೇ ಸ್ವಿಸ್ ಸರ್ಕಾರ ಬ್ಯಾಂಕ್ ಖಾತೆ ವಿವರಗಳನ್ನು ಹಸ್ತಾಂತರಿಸಿರುವುದು.

ಸ್ವಿಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯುವುದು ಹೇಗೆ?

ಮೊದಲಿಗೆ ಒಂದು ವಿಷಯ ಗೊತ್ತಿರಲಿ. ಬೇರೆಲ್ಲೆಡೆಯಲ್ಲಿರುವಂತಹ ಬ್ಯಾಂಕಿಂಗ್ ವ್ಯವಸ್ಥೆಯೇ ಸ್ವಿಟ್ಜರ್​ಲ್ಯಾಂಡ್​ನಲ್ಲಿರುವುದು. ಸ್ವಿಸ್ ಬ್ಯಾಂಕ್ ಎನ್ನುವುದು ಒಂದು ಬ್ಯಾಂಕ್ ಹೆಸರಲ್ಲ. ಪ್ರಾತಿನಿಧಿಕವಾಗಿ ಆ ಹೆಸರು ಹೇಳಲಾಗುತ್ತದೆ. 240ಕ್ಕೂ ಹೆಚ್ಚು ಬ್ಯಾಂಕುಗಳು ಆ ದೇಶದಲ್ಲಿವೆ. ಒಂದು ಬ್ಯಾಂಕ್ ಖಾತೆ ತೆರೆಯಲು ಬೇಕಾದ ವಿಧಾನಗಳು ಸ್ವಿಸ್ ಬ್ಯಾಂಕ್ ಖಾತೆಗೂ ಅನ್ವಯ ಆಗುತ್ತವೆ. ಆದರೆ, ಇತರೆಡೆಗಿಂತ ಹೆಚ್ಚು ಕಟ್ಟುನಿಟ್ಟಾಗಿ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಇದನ್ನೂ ಓದಿ: ಇಸ್ರೇಲ್ ಹಮಾಸ್ ಯುದ್ಧದ ಪರಿಣಾಮ; ಕಚ್ಛಾ ತೈಲಬೆಲೆ ಶೇ. 5ರಷ್ಟು ಹೆಚ್ಚಳ; ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ಸ್ವಿಟ್ಜರ್​ಲ್ಯಾಂಡ್ ದೇಶದಲ್ಲದವರು ಸ್ವಿಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯಬೇಕಾದರೆ 18 ವರ್ಷ ಮೇಲ್ಪಟ್ಟ ವಯಸ್ಸಿನವರಾಗಿರಬೇಕು. ಸಾಮಾನ್ಯವಾಗಿ ಖಾತೆ ತೆರೆಯುವುದು ಉಚಿತ. ಆದರೆ, ಮಿನಿಮಮ್ ಬ್ಯಾಲನ್ಸ್ ಪಾಲಿಸಬೇಕಾಗುತ್ತದೆ. ಈ ಮಿನಿಮಮ್ ಬ್ಯಾಲನ್ಸ್ ಮೊತ್ತ ಒಂದೊಂದು ಬ್ಯಾಂಕಲ್ಲಿ ಒಂದೊದು ಪ್ರಮಾಣದಲ್ಲಿರುತ್ತದೆ. ಕೆಲ ಬ್ಯಾಂಕುಗಳಲ್ಲಿ 8 ಲಕ್ಷ ರೂ ಇಟ್ಟರೆ ಸಾಕು. ಇನ್ನೂ ಕೆಲ ಬ್ಯಾಂಕುಗಳಲ್ಲಿ ನಾಲ್ಕೈದು ಕೋಟಿ ರೂಗಳಷ್ಟನ್ನಾರೂ ಇಟ್ಟಿರಬೇಕು.

ಸ್ವಿಸ್ ಬ್ಯಾಂಕಲ್ಲಿ ಹಣ ಇಟ್ಟರೆ ಬಡ್ಡಿ ಎಷ್ಟು ಸಿಗುತ್ತದೆ?

ಸ್ವಿಟ್ಜರ್​ಲ್ಯಾಂಡ್​ನ ಬ್ಯಾಂಕುಗಳಲ್ಲಿ ಇಡುವ ಠೇವಣಿಗಳಿಗೆ ಹೆಚ್ಚು ಬಡ್ಡಿ ಸಿಗುವುದಿಲ್ಲ. ಭಾರತದ ಬ್ಯಾಂಕುಗಳಲ್ಲಿ ವರ್ಷಕ್ಕೆ ಶೇ. 3ರಿಂದ 5ರಷ್ಟು ಬಡ್ಡಿ ಸಿಗುತ್ತದೆ. ಆದರೆ, ಸ್ವಿಸ್ ಬ್ಯಾಂಕುಗಳಲ್ಲಿ ಸಿಗೋ ಬಡ್ಡಿ ನಗಣ್ಯ.

ಸ್ವಿಸ್ ಬ್ಯಾಂಕಲ್ಲಿ ಯಾಕೆ ಹಣ ಇಡ್ತಾರೆ?

ಸ್ವಿಟ್ಜರ್​ಲ್ಯಾಂಡ್​ನ ಬ್ಯಾಂಕಿಂಗ್ ಕಾನೂನುಗಳು ಬಹಳ ಬಿಗಿಯಾಗಿವೆ. ಬ್ಯಾಂಕ್ ಖಾತೆಯ ವಿವರಗಳನ್ನು ಬಹಿರಂಗಪಡಿಸುವುದು ಕ್ರಿಮಿನಲ್ ಅಪರಾಧ ಎಂದು ಅಲ್ಲಿನ ಕಾನೂನು ಹೇಳುತ್ತದೆ. ಹೀಗಾಗಿ, ಸ್ವಿಸ್ ಬ್ಯಾಂಕುಗಳಲ್ಲಿರುವ ಖಾತೆಗಳ ವಿವರವನ್ನು ಬಹಳ ಗೌಪ್ಯವಾಗಿ ಇಡಲಾಗುತ್ತದೆ. ಹಾಗಂತ, ಸಿಕ್ಕಸಿಕ್ಕವರಿಗೆಲ್ಲಾ ಖಾತೆಗಳನ್ನು ತೆರೆಯಲು ಅವಕಾಶ ಕೊಡುವುದಿಲ್ಲ.

ಇದನ್ನೂ ಓದಿ: ಗಳಿಸಿದ ಹಣ ನಿಲ್ಲುತ್ತಿಲ್ಲವಾ? ನಾವು ಮಾಡುವ ಪ್ರಮುಖ ಹಣಕಾಸು ತಪ್ಪುಗಳೇನು? ಇದಕ್ಕೆ ಪರಿಹಾರವೇನು? ಇಲ್ಲಿದೆ ಅಮೂಲ್ಯ ಮಾಹಿತಿ

ವಿದೇಶಿಗರು ಸ್ವಿಸ್ ಬ್ಯಾಂಕಲ್ಲಿ ಖಾತೆ ತೆರೆಯಬೇಕಾದರೆ ಪಾಸ್​ಪೋರ್ಟ್ ದಾಖಲೆ ಒದಗಿಸಬೇಕು. ಆದಾಯ ಮೂಲಗಳಿಗೆ ದಾಖಲೆಗಳನ್ನು ಒದಗಿಸಬೇಕು. ಯಾವ ಮಾರ್ಗದಲ್ಲಿ ಹಣ ಸಂಪಾದನೆ ಮಾಡಲಾಗಿದೆ ಎಂಬ ಎಲ್ಲಾ ವಿವರಗಳನ್ನೂ ಸ್ವಿಸ್ ಬ್ಯಾಂಕುಗಳು ಖಾತೆದಾರರಿಂದ ಪಡೆಯುತ್ತವೆ. ಆದರೆ, ಈ ಯಾವ ಮಾಹಿತಿಯೂ ಬಹಿರಂಗಗೊಳ್ಳದೇ ರಹಸ್ಯವಾಗಿರುತ್ತವೆ.

ಹಾಗೆಯೇ, ತೆರಿಗೆ ನಿಯಮಗಳೂ ಕೂಡ ಬಹಳ ಉದಾರವಾಗಿವೆ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ಖಾತೆಯಲ್ಲಿ ಇಡಲು ಅಲ್ಲಿ ಆಕ್ಷೇಪಗಳಿರುವುದಿಲ್ಲ. ಹೀಗಾಗಿ, ಈ ಗೌಪ್ಯತೆಯ ರಕ್ಷೆಯಿಂದಾಗಿ ಕಪ್ಪುಹಣ ಹೊಂದಿರುವವರು ಸ್ವಿಸ್ ಬ್ಯಾಂಕಲ್ಲಿ ಖಾತೆ ತೆರೆದು ಹಣ ಶೇಖರಿಸಿಡಲು ಮುಂದಾಗುವುದುಂಟು. ಹಾಗೆಯೇ, ಉದ್ಯಮಿಗಳೂ ಕೂಡ ತಮ್ಮ ಹೆಚ್ಚುವರಿ ಹಣವನ್ನು ಸ್ವಿಸ್ ಬ್ಯಾಂಕಲ್ಲಿ ಇಟ್ಟುಕೊಳ್ಳುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Mon, 9 October 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ