ದಿನ ಭವಿಷ್ಯ: ಇಂದು ಈ ರಾಶಿಯವರು ಸಾಮರ್ಥ್ಯವನ್ನು ತೋರಿಸಬೇಕಾದಲ್ಲಿ ತೋರಸರು
Daily Horoscope 14 February: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ದ್ವಾದಶೀ ತಿಥಿ ಶನಿವಾರ ಕ್ರಿಯಾಶೀಲತೆ, ಪರೋಪಕಾರ, ಅಭಿಮಾನ, ಪ್ರತಿಭಟನೆ, ಉತ್ಸಾಹ, ಅಪನಂಬಿಕೆ, ಸ್ನೇಹ, ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ:
ನೀವು ನೆಟ್ಟ ಗಿಡಕ್ಕೆ ಎಲ್ಲ ರೀತಿಯ ಆರೈಕೆ ಬೇಕು. ಸಹಜವಾಗಿ ಇರುವುದುದಕ್ಕೆ ಅದು ಬೇಡ. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳಬಹುದು. ಕಛೇರಿಯ ಕೆಲಸಗಳನ್ನು ಮುಗಿಸಲು ಹೆಚ್ಚು ಸಮಯವನ್ನು ತೆಗದುಕೊಳ್ಳುವಿರಿ. ಮನೆಯನ್ನು ಬದಲಿಸಬೇಕಾಗುವುದು. ಕೆಲವನ್ನು ನೀವು ಮನಃಪೂರ್ವಕವಾಗಿಯೇ ಕಡೆಗಣಿಸುವಿರಿ. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು.
ವೃಷಭ ರಾಶಿ:
ಬೇಸರವನ್ನು ಕೆಲಸದಲ್ಲಿ ಗಮನಕೊಡುವ ಮೂಲಕ ಪರಿಹರಿಸಿಕೊಳ್ಳುವಿರಿ. ಸಮುದ್ರದಲ್ಲಿ ಅಲೆ ನಿಂತಮೇಲೆ ಸ್ನಾನವೆಂದರೆ ಆಗದು. ಸಹಾವಾಸದಿಂದ ನಿಮಗೆ ಅಪವಾದವು ಬರಬಹುದು. ಕುಟುಂಬದ ಜೊತೆ ಬಹಳ ದಿನಗಳ ಅನಂತರ ಸಂಯೋಷದ ಸಮಯವನ್ನು ಕಳೆಯುವಿರಿ. ಉನ್ನತ ವ್ಯಾಸಂಗದಲ್ಲಿ ಆಸಕ್ತಿಯು ಕಡಿಮೆ ಆಗುವುದು. ನಿಮ್ಮನ್ನು ಹಿಮ್ಮೆಟ್ಟಿಸುವ ಕಾರ್ಯವು ಗೌಪ್ಯವಾಗಿ ಸಾಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು.
ಮಿಥುನ ರಾಶಿ:
ನಿಮ್ಮ ಅಶಿಸ್ತಿನ ವರ್ತನೆಯಿಂದ ಸಹೋದ್ಯೋಗಿಗಳ ನಡುವೆ ಮಾತುಕತೆಗಳು ಆಗಬಹುದು. ನಿಮ್ಮ ಬಗ್ಗೆ ಆಶಾದಾಯಕ ಬೆಳವಣಿಗೆ ಇರುವುದು. ನಿಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎಂಬ ಭಯವು ಕಾಡುವುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಹಿಳೆಯರು ಅಲಂಕಾರಿಕ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗುವುದು. ಮಿತ್ರರ ನಡುವೆ ವೈಮನಸ್ಯ ಬರಬಹುದು.
ಕರ್ಕಾಟಕ ರಾಶಿ:
ನಿಮ್ಮ ಬಗ್ಗೆ ನಿಮಗೇ ಸರಿಯಾದ ಸ್ಥಿರತೆಯನ್ನು ಕಂಡುಕೊಳ್ಳಲಾಗದು. ಕಡ್ಡಿ ಮುರಿದಂತೆ ಮಾತನ್ನು ಹೇಳುವುದು ಬೇಡ. ಎಲ್ಲ ತಪ್ಪುಗಳಿಗೂ ನಿಮ್ಮನ್ನೇ ಬೆರಳು ಮಾಡಿ ತೋರಿಸಬಹುದು. ಸರಿಯಾದ ಉತ್ತರವನ್ನು ನೀಡಬೇಕಾಗುತ್ತದೆ. ಅಲ್ಪ ಲಾಭಕ್ಕೆ ನೀವು ತೃಪ್ತಿ ಪಡಬೇಕಾಗುವುದು. ಸ್ತ್ರೀಯರ ವಿಚಾರದಲ್ಲಿ ನೀವು ಜಾಗರೂಕತೆಯಿಂದ ಇರಬೇಕಾಗುವುದು. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ.
ಸಿಂಹ ರಾಶಿ:
ನಿಮಗೆ ಇಂದು ಶುಭವಾರ್ತೆಯು ಬರುವುದು. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ಕಾಣಿಸಿಕೊಳ್ಳಬಹುದು. ನಿಶ್ಚಲವಾದ ಮನಸ್ಸನ್ನು ಯಾರಾದರೂ ಕಲಕಿ ಹಾಳು ಮಾಡಬಹುದು. ಆಪ್ತರ ಸಹಕಾರದಿಂದ ಸ್ಪರ್ಧೆಗಳನ್ನು ಗೆಲ್ಲುವಿರಿ. ಎಲ್ಲರನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಲಲಿತಕಲೆಗಳು ನಿಮ್ಮನ್ನು ಸೆಳೆಯಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು.
ಕನ್ಯಾ ರಾಶಿ:
ನೀವು ಮಾಡಿದ ಕಾರ್ಯಾಚಾರಣೆ ಸಫಲವಾಗಲಿದೆ. ನಿಮ್ಮ ಇಂದಿನ ವರ್ತನೆಯಿಂದ ಬಂಧುಗಳಿಗೆ ಅಸಮಾಧಾನವಾಗುವುದು. ಸಂಗಾತಿಯ ಜೊತೆ ಪ್ರೀತಿಯ ಮಾತೆಕತೆಯು ಆರಂಭವಾಗಿ ಕಲಹದಲ್ಲಿ ಮುಕ್ತಾಯವಾಗುವುದು. ಕಾರ್ಯಗಳಿಗೆ ಅಡೆತಡೆ ಉಂಟಾಗುವ ಶಂಕೆಯು ದೂರವಾಗುವುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು. ಎಲ್ಲ ತೊಂದರಗಳಿಗೂ ಯಾರನ್ನೋ ಬೈಯುತ್ತಾ ಕುಳಿತಿರುವುದರಲ್ಲಿ ಅರ್ಥವಿರದು.
ತುಲಾ ರಾಶಿ:
ನಿಮಗೂ ಅದು ಅನಿವಾರ್ಯವಾದೀತು. ನಿಮ್ಮ ಪೊರ್ವಯೋಜಿತ ಕಾರ್ಯಗಳನ್ನು ಕ್ರಿಯಾರೂಪಕ್ಕೆ ತರಲು ನಿಮಗೆ ಸಾಧ್ಯವಾಗದು. ಏನಾದರೂ ಅಡೆತಡೆಗಳು ಬರಬಹುದು. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಸಿಗುವುದು. ನೌಕರರು ನಿಮ್ಮ ಮೇಲೆ ಅಪನಂಬಿಕೆಯನ್ನು ಇಡಬಹುದು. ನಿಮಗೆ ಯಾರೂ ಸ್ಪಂದನೆ ಕೊಡದೇ ಹೋಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಅನುಮಾನದ ಬುದ್ಧಿಯಿಂದಲೇ ಅವಕಾಶಗಳನ್ನು ಕಳೆದುಕೊಳ್ಳುವಿರಿ.
ವೃಶ್ಚಿಕ ರಾಶಿ:
ಇಂದು ಕಾರ್ಯಗಳನ್ನು ಪರೀಕ್ಷಿಸಿಕೊಂಡು ಮುಂದೆಸಾಗಿರಿ. ಇಲ್ಲವಾದರೆ ಕುರುಡನು ಹಗ್ಗವನ್ನು ಹೊಸೆದಂತೆ ಆದೀತು. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸರ್ಕಾರದಿಂದ ಆಗಬೇಕಾದ ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ಹಳೆಯ ರಹಸ್ಯ ವಿಚಾರವು ಪುನಃ ಬೆಳಕಿಗೆ ಬರಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಮತ್ತೆ ಮತ್ತೆ ನಿಮಗೆ ಅನಾರೋಗ್ಯವು ಕಾಣಿಸಿಕೊಂಡಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯಿರಿ.
ಧನು ರಾಶಿ:
ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು. ನಿಮಗೆ ಇಂದು ಜಲಾಭಾವ ಕಾಣಿಸೀತು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ವಿಳಂಬವಾಗಿ ನಿಮ್ಮ ಮುಂದಿನ ಕಾರ್ಯಗಳಿಗೆ ತೊಂದರೆ ಆಗುವಂತೆ ತೋರುವುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ಕಛೇರಿಯ ಒತ್ತಡದಿಂದ ಬೇರೆ ಯೋಚನೆಯ ಕಡೆ ಮನಸ್ಸು ಹೋಗದು.
ಮಕರ ರಾಶಿ:
ಕರ್ತವ್ಯದ ಕಡೆ ಗಮನ ಕೊಡಿ. ಹಣಕಾಸಿನ ವಹಿವಾಟುಗಳನ್ನು ತಪ್ಪಿಸಿ ಮತ್ತು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ನೀವು ಮಾಡುವ ಕೆಲಸಕ್ಕೆ ನಿಮ್ಮ ಸುತ್ತಲೇ ವಿರೋಧವಿರುತ್ತದೆ. ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಜೊತೆಗಾರರನ್ನು ಆತ್ಮೀಯವಾಗಿ ಕಾಣುವಿರಿ. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು.
ಕುಂಭ ರಾಶಿ:
ಬೇಡದ ವಿಚಾರಗಳನ್ನು ಮಾತನಾಡುತ್ತ ಇರುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ತೊಡಗಿ. ಪಾಲದಾರಿಕೆಯಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡಲಾರಿರಿ. ಕಲಾವಿದರು ತಮ್ಮ ಸಂಪಾದನೆಗೆ ಹೊಸ ಯೋಜನೆ ಹಾಕಿಕೊಳ್ಳುಬರು. ಪ್ರೀತಿಯಿಂದ ಹೇಳಿದರೆ ನಿಮ್ಮ ಕಾರ್ಯವು ಸಲೀಸಾಗಿ ಆಗುವುದು. ಸಂತಾನದ ಬಗ್ಗೆ ಸಂಗಾತಿಯ ಜೊತೆ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಮಕ್ಕಳಿಗೆ ಭವಿಷ್ಯದ ಬಗ್ಗೆ ಕಲ್ಪನೆಯನ್ನು ಕೊಡುವಿರಿ.
ಮೀನ ರಾಶಿ:
ಹೊಸದಾಗಿ ಸೇರಿದ ವೃತ್ತಿಯಲ್ಲಿ ಗೊಂದಲವಾಗಬಹುದು. ಸಕ್ರಿಯ ವಿರೋಧಿಗಳು ಸಹ ಸೋಲಿಸಲ್ಪಡುತ್ತಾರೆ. ನಿರ್ಮಾಣ ಕಾರ್ಯದ ಅಗತ್ಯವನ್ನು ಅನುಭವಿಸಲಾಗುವುದು. ಕೆಲವು ಒಳ್ಳೆಯ ಸುದ್ದಿಗಳು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತವೆ. ಮೌಲ್ಯಯುತವಾದ ವಸ್ತುವೊಂದನ್ನು ಖರೀದಿಸುವಿರಿ. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಶ್ರವಣ, ಯೋಗ : ಹರ್ಷಣ, ಕರಣ : ಬಾಲವ, ಸೂರ್ಯೋದಯ – 06 – 49 am, ಸೂರ್ಯಾಸ್ತ – 06 – 27 pm, ಇಂದಿನ ಶುಭಾಶುಭ ಕಾಲ : ರಾಹು 09:44 – 11:11, ಯಮಗಂಡ ಕಾಲ 14:06 – 15:33, ಗುಳಿಕ ಕಾಲ 06:50 – 08:15
-ಲೋಹಿತ ಹೆಬ್ಬಾರ್ – 8762924271 (what’s app only)
