AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 14ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 14ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 14ರ ದಿನಭವಿಷ್ಯ
Numerology Image Credit source: google
ಸ್ವಾತಿ ಎನ್​ಕೆ
| Edited By: |

Updated on: Feb 14, 2026 | 12:30 AM

Share

ಈ ದಿನ ಗಣಪತಿ ದೇವಸ್ಥಾನಕ್ಕೆ ದೂರ್ವಾ ಅಂದರೆ ಗರಿಕೆಯನ್ನು ಸಮರ್ಪಿಸುವುದರಿಂದ ಒತ್ತಡ, ಜಗಳ- ಕಲಹದಿಂದ ದೂರ ಇರುವುದಕ್ಕೆ ಅನುಗ್ರಹ ಆಗುತ್ತದೆ. ಇದು ಸಾಧ್ಯವಾದಲ್ಲಿ ಮನೆಯಲ್ಲಿ ಸಹ ಮಾಡಬಹುದು. ದೇವರ ಮನೆಯಲ್ಲಿ ಗಣಪತಿ ಚಿತ್ರದ ಎದುರು ಇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸ್ವತಂತ್ರ ಆಲೋಚನೆಗಳು ನಿಮ್ಮ ಸಹೋದ್ಯೋಗಿಗಳಿಗಿಂತ ಪ್ರತ್ಯೇಕವಾಗಿ ನಿಲ್ಲುವಂತೆ ಮಾಡುತ್ತವೆ. ಪ್ರಾಡಕ್ಟ್ ಅಥವಾ ಪ್ರಾಜೆಕ್ಟ್ ಗಳನ್ನು ನೀವು ನೋಡುವ ರೀತಿ, ಪ್ಲಾನಿಂಗ್ ನಲ್ಲಿ ಅದನ್ನು ಕಟ್ಟುತ್ತಾ ಹೋಗುವ ಪರಿಗೆ ಮೇಲಧಿಕಾರಿಗಳು ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ. ಕೆಲಸ- ಕಾರ್ಯಗಳನ್ನು ತೊಡಗುವ ಮುನ್ನವೇ ನಿಮ್ಮ ಆದ್ಯತೆಗಳ ಪಟ್ಟಿಯೊಂದನ್ನು ಮಾಡಿಕೊಳ್ಳಿ. ಅದರಂತೆ ಒಂದೊಂದೇ ಕಾರ್ಯಗಳನ್ನು ಪೂರ್ಣಗೊಳಿಸಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ವೈಯಕ್ತಿಕ ಬದುಕಿನಲ್ಲಿ ಆಗುವ ಬೆಳವಣಿಗೆಗಳು ಗಮನ ಒಂದೆಡೆ ಕೇಂದ್ರೀಕರಿಸಲು ಅವಕಾಶ ಕೊಡುವುದಿಲ್ಲ. ಅದರಲ್ಲಿ ಮುಖ್ಯವಾಗಿ ನೀವು ಪ್ರೀತಿಸುವ ವ್ಯಕ್ತಿ ಅಥವಾ ಸಂಗಾತಿ ತಮ್ಮ ಸಿಟ್ಟನ್ನು ನಿಮ್ಮ ಮೇಲೆ ಹಾಕುತ್ತಿದ್ದಾರೆ ಎಂದೆನಿಸಲಿದೆ. ಈ ಯೋಚನೆಯಿಂದಾಗಿ ಪರಿಸ್ಥಿತಿ ಸಂಭಾಳಿಸುವುದಕ್ಕೆ ಶ್ರಮ ಪಡುವಂತೆ ಆಗಲಿದೆ. ನಿಮ್ಮ ಮಾನಸಿಕ ಸ್ಥೈರ್ಯವು ಎಲ್ಲವನ್ನೂ ಮೀರಿ ನಿಂತು, ಕೀರ್ತಿ- ಅವಕಾಶಗಳನ್ನು ತಂದುಕೊಡಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗ್ರಹಿಸಲಿದ್ದೀರಿ. ಇತರರ ನಿರೀಕ್ಷೆಗಳಿಗೆ ಸ್ಪಂದಿಸುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗಲಿದೆ. ಉದ್ಯೋಗ ಸ್ಥಳದಲ್ಲಿ ಒತ್ತಡ ಇದ್ದರೂ ಅದನ್ನು ನಿಮ್ಮ ಮೇಲೆ ಹಾಕಿಕೊಳ್ಳಲಿದ್ದೀರಿ. ಇಂದು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸಮತೋಲನ ಅಗತ್ಯ. ಕುಟುಂಬದವರೊಂದಿಗೆ ಮಾತನಾಡುವಾಗ ಸಂಯಮ ಕಾಪಾಡಿದರೆ ಅನಗತ್ಯ ವಾದವಿವಾದ ತಪ್ಪಿಸಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅನಿವಾರ್ಯ.

ಲೇಖನ- ಸ್ವಾತಿ ಎನ್.ಕೆ.