Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 14ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 14ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಹಿರಿಯರಿಗೆ ಅಗತ್ಯ ಇರುವಂಥ ಕೆಲಸ ಮಾಡಿಕೊಡುವುದರಿಂದ, ಅವರ ಆಶೀರ್ವಾದ ದೊರೆಯಲಿದ್ದು ಅದರ ಮೂಲಕವಾಗಿ ನಿಮ್ಮನ್ನು ಕಾಡುತ್ತಿರುವ ಸಂಬಂಧಗಳಲ್ಲಿನ ಗೊಂದಲ ದೂರವಾಗಲಿದೆ. ಇನ್ನು ಹೊಸ ಆರ್ಡರ್, ಪ್ರಾಜೆಕ್ಟ್ ಗಳು ದೊರೆಯಲಿವೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಒಂದು ಸಮಯಕ್ಕೆ ಒಂದೇ ವಿಷಯದ ಮೇಲೆ ಗಮನ ಕೇಂದ್ರೀಕರಿಸಿ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮಗೆ ದೊರೆಯುತ್ತವೆ, ಪರಿಶ್ರಮಕ್ಕೆ ಮೇಲಧಿಕಾರಿಗಳ ಮೆಚ್ಚುಗೆ ಸಹ ಸಿಗಲಿದೆ. ಕುಟುಂಬದ ಅಗತ್ಯಗಳನ್ನು ಪ್ರತ್ಯೇಕವಾಗಿ ನೋಡಿದರೆ ಉತ್ತಮ. ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲವೂ ಪಡೆಯಬಹುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಿ; ಬ್ಯಾಂಕ್ ಬ್ಯಾಲೆನ್ಸ್ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಕುಟುಂಬದಲ್ಲಿ ಸಣ್ಣ ಅಸಮಾಧಾನ ಕಂಡರೂ ಮಾತನಾಡುವ ಮೂಲಕ ಪರಿಹಾರ ಸುಲಭವಾಗುತ್ತದೆ. ಸಂಗಾತಿಯೊಂದಿಗೆ ಕಳೆದ ಸಮಯ ಭಾವನಾತ್ಮಕವಾಗಿ ಬಲವನ್ನು ನೀಡುತ್ತದೆ. ವಿಶ್ರಾಂತಿ ಮತ್ತು ನೀರಿನ ಸೇವನೆ ಮುಖ್ಯ. ದಿನಾಂತ್ಯದಲ್ಲಿ ಮಾಡಿದ ಕಾರ್ಯಗಳಿಗೆ ತೃಪ್ತಿ ದೊರೆಯುತ್ತದೆ. ಇಂದು ಕೈಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿ, ಯಾವುದು ನಿಮಗೆ ದೀರ್ಘಕಾಲದ ಬೆಳವಣಿಗೆ ನೀಡುತ್ತದೆ ಎಂಬುದನ್ನು ಆಲೋಚಿಸುವುದು ಒಳಿತು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಓದು- ಬರಹ, ಸಂಶೋಧನೆ ಇಂಥವುಗಳಲ್ಲಿ ಮುಳುಗಿ ಹೋಗುತ್ತೀರಿ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದನ್ನು ಮರೆಯವಷ್ಟು ಕೆಲಸಗಳನ್ನು ಮೈ ಮೇಲೆ ಹಾಕಿಕೊಳ್ಳಬೇಡಿ. ಉದ್ಯೋಗ ಸ್ಥಳದಲ್ಲಿ ಹೊಸ ಕಲಿಕೆಗಳ ಅಗತ್ಯವು ಸ್ಪಷ್ಟವಾಗಿ ಕಾಣಿಸಲಿದೆ ಮತ್ತು ಹಿರಿಯರ ಮಾರ್ಗದರ್ಶನ ವಿಶ್ವಾಸ ಹೆಚ್ಚಿಸುತ್ತದೆ. ಹಣಕಾಸಿನ ವಿಷಯದಲ್ಲಿ ಅನವಶ್ಯಕ ಖರ್ಚು ತಪ್ಪಿಸುವುದು ಉತ್ತಮ.
ಲೇಖನ- ಸ್ವಾತಿ ಎನ್.ಕೆ.
