30 ಸಾವಿರ ಹೊಸ ಬೆಡ್ ಸೇರಿಸುತ್ತಿವೆ ಖಾಸಗಿ ಆಸ್ಪತ್ರೆಗಳು; ಕಾರಣ ಕೊರೋನಾ ಅಲ್ಲ; ಏಳಿ ಎದ್ದೇಳಿ, ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯಿರಿ ಎನ್ನುತ್ತಿದ್ದಾರೆ ಈ ವೈದ್ಯ

|

Updated on: Jan 18, 2024 | 6:48 PM

Private Hospitals Expansion: ಬಿಪಿ, ಶುಗರ್, ಮಂಡಿನೋವು ಇತ್ಯಾದಿ ಜೀವನಶೈಲಿ ಸಂಬಂಧಿತ ರೋಗಗಳ ಪ್ರಮಾಣ ಹೆಚ್ಚುತ್ತಿದ್ದು ಆಸ್ಪತ್ರೆ ಉದ್ಯಮಕ್ಕೆ ಪುಷ್ಟಿ ಕೊಟ್ಟಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ಖಾಸಗಿ ಆಸ್ಪತ್ರೆಗಳು 32,500 ಕೋಟಿ ರೂ ಹೂಡಿಕೆಯಲ್ಲಿ 30,000ಕ್ಕೂ ಹೆಚ್ಚು ಬೆಡ್ ಸೇರಿಸುತ್ತಿವೆ. ಬೆಂಗಳೂರು, ಮುಂಬೈ, ದೆಹಲಿಯಂತಹ ಮೆಟ್ರೋ ನಗರಗಳಲ್ಲಿ ಖಾಸಗಿ ಆಸ್ಪತ್ರೆಗಳು ವಿಸ್ತರಿಸುತ್ತಿವೆ ಎಂದು ಐಸಿಆರ್​ಎ ಹೇಳಿದೆ.

30 ಸಾವಿರ ಹೊಸ ಬೆಡ್ ಸೇರಿಸುತ್ತಿವೆ ಖಾಸಗಿ ಆಸ್ಪತ್ರೆಗಳು; ಕಾರಣ ಕೊರೋನಾ ಅಲ್ಲ; ಏಳಿ ಎದ್ದೇಳಿ, ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯಿರಿ ಎನ್ನುತ್ತಿದ್ದಾರೆ ಈ ವೈದ್ಯ
ಆಸ್ಪತ್ರೆ
Follow us on

ನವದೆಹಲಿ, ಜನವರಿ 18: ಖಾಸಗಿ ಆಸ್ಪತ್ರೆ ಉದ್ಯಮದಲ್ಲಿ ಮುಂದಿನ ನಾಲ್ಕೈದು ವರ್ಷದಲ್ಲಿ ಬರೋಬ್ಬರಿ 32,500 ಕೋಟಿ ರೂ ಹೂಡಿಕೆ ಆಗಬಹುದು, 32,000ಕ್ಕೂ ಹೆಚ್ಚು ಹೊಸ ಬೆಡ್​ಗಳನ್ನು ಸೇರಿಸಬಹುದು ಎಂದು ಐಸಿಆರ್​ಎ ಎಂಬ ರೇಟಿಂಗ್ ಏಜೆನ್ಸಿ ಅಂದಾಜು ಮಾಡಿದೆ. 2023-24 ಮತ್ತು 2024-25ರ ಹಣಕಾಸು ವರ್ಷದಲ್ಲಿ ಖಾಸಗಿ ಹಾಸ್ಪಿಟಲ್ ಸಮೂಹಗಳು (private hospital chains) 4,900 ಬೆಡ್​ಗಳನ್ನು ಸೇರಿಸಬಹುದು. ಮೆಟ್ರೋ ನಗರಗಳಲ್ಲಿ ಹೆಚ್ಚು ವಿಸ್ತರಣೆ ಆಗುತ್ತದೆ. ದೆಹಲಿ, ಮುಂಬೈ, ಬೆಂಗಳೂರು ಮೊದಲಾದ ನಗರಗಳಲ್ಲಿ ಹೆಚ್ಚು ಬೆಡ್ ಸೇರಿಸಲು ಹೊರಟಿವೆ ಖಾಸಗಿ ಆಸ್ಪತ್ರೆಗಳು ಎಂದು ಐಸಿಆರ್​ಎ ಸಂಸ್ಥೆಯ ಸಹಾಯಕ ವೈಸ್ ಪ್ರೆಸಿಡೆಂಟ್ ಮೈತ್ರಿ ಮಾಚೇರ್ಲಾ ಹೇಳಿದ್ದಾರೆ.

ಬಿಪಿ, ಶುಗರ್, ಕ್ಯಾನ್ಸರ್… ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಾಗಿರುವುದು ಯಾಕೆ?

  • ಹೆಲ್ತ್ ಇನ್ಷೂರೆನ್ಸ್ ವ್ಯಾಪ್ತಿ ಹೆಚ್ಚಿರುವುದು
  • ಬಿಪಿ, ಶುಗರ್, ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ಇತ್ಯಾದಿ ಅಂಟು ಜಾಢ್ಯವಲ್ಲದ ರೋಗಗಳು (non-communicable diseases) ಮತ್ತು ಲೈಫ್​ಸ್ಟೈಲ್ ರೋಗ ಪ್ರಕರಣಗಳು ಹೆಚ್ಚಾಗಿರುವುದು
  • ಎಲೆಕ್ಟಿವ್ ಸರ್ಜರಿಗಳಿಗೆ ಬೇಡಿಕೆ ಹೆಚ್ಚಿರುವುದು
  • ಮೆಡಿಕಲ್ ಟೂರಿಸಂ ಹೆಚ್ಚಿರುವುದು

ಇದನ್ನೂ ಓದಿ: Haldiram’s: ಮಾರುಕಟ್ಟೆ ವಿಸ್ತರಣೆಗೆ ಹಲ್ದೀರಾಮ್ಸ್ ಚಿತ್ತ; ಬೆಂಗಳೂರಲ್ಲಿ ಫ್ಯಾಕ್ಟರಿ ಇರುವ ಪ್ರತಾಪ್ ಸ್ನ್ಯಾಕ್ಸ್ ಖರೀದಿಗೆ ಆಲೋಚನೆ

ಇವಿಷ್ಟೂ ಕೂಡ ಖಾಸಗಿ ಆಸ್ಪತ್ರೆಗಳಿಗೆ ಬೇಡಿಕೆ ಹೆಚ್ಚಲು ಕಾರಣ ಇರಬಹುದು ಎಂದು ಐಸಿಆರ್​ಎ ಅಂದಾಜು ಮಾಡಿದೆ. ಇಲ್ಲಿ ಎಲೆಕ್ಟಿವ್ ಸರ್ಜರಿ ಎಂದರೆ ಮುಂಡಗವಾಗಿ ಸರ್ಜರಿ ಸಮಯವನ್ನು ನಿಗದಿ ಮಾಡುವ ಅವಕಾಶ ಇರುವುದು. ಇದರಿಂದ ರೋಗಿಯ ಬಿಡುವಿನ ದಿನಗಳನ್ನು ನೋಡಿಕೊಂಡು ಸರ್ಜರಿಗೆ ವ್ಯವಸ್ಥೆ ಮಾಡಬಹುದು.

ಸಾರ್ವಜನಿಕರಿಗೆ ಚಾಲೆಂಜ್ ಹಾಕಿದ ಅಪೋಲೋ ವೈದ್ಯ

ಡಯಾಬಿಟಿಸ್, ಬಿಪಿ, ಒಬೇಸಿಟಿ (ಬೊಜ್ಜು), ಮಂಡಿ ನೋವು, ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಮತ್ತು ಕ್ಯಾನ್ಸರ್ ಮೊದಲಾದ ರೋಗಗಳು ಹೆಚ್ಚಾಗುತ್ತಿರುವುದು ಖಾಸಗಿ ಆಸ್ಪತ್ರೆಗಳ ವಿಶ್ವಾಸ ಹೆಚ್ಚಿಸಿದೆ. ಆ ನಿರೀಕ್ಷೆಯಲ್ಲಿ ಆಸ್ಪತ್ರೆಗಳು ಮುಂದಿನ 5 ವರ್ಷದ್ಲಲಿ 32,500 ಕೋಟಿ ರೂ ಹೂಡಿಕೆ ಮಾಡುತ್ತಿವೆ. ಈ ಖಾಸಗಿ ಆಸ್ಪತ್ರೆಗಳು ಹಾಕಿರುವ ಸವಾಲನ್ನು ನಾವು ಪ್ರತಿಯೊಬ್ಬರೂ ಸ್ವೀಕರಿಸಬೇಕು. ರೋಗಗಳು ಬಾರದಂತೆ ಎಚ್ಚರವಹಿಸಬೇಕು. ಆಸ್ಪತ್ರೆಗಳ ಬೆಡ್ ಖಾಲಿ ಇದ್ದು ಅವು ನಷ್ಟ ಅನುಭವಿಸಬೇಕು. ಈ ಸವಾಲಿಗೆ ನೀವು ಸಿದ್ಧ ಇದ್ದೀರಾ ಎಂದು ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಸುಧೀರ್ ಕುಮಾರ್ ಅವರು ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಕಾರಣ ಹೇಳದೆ ರೋಗಿಗಳಿಗೆ ವೈದ್ಯರು ಆ್ಯಂಟಿ ಬಯೋಟಿಕ್ ನೀಡುವಂತಿಲ್ಲ; ಸರ್ಕಾರ ಸೂಚನೆ


ತಮ್ಮ ಪೋಸ್ಟ್​ನಲ್ಲಿ ಅವರು ಆರೋಗ್ಯಯುತ ಜೀವನ ಶೈಲಿ ಅನುಸರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಪೌಷ್ಟಿಕಯುತ ಆಹಾರ ಸೇವನೆ ಮತ್ತು ನಿಯಮಿತವಾಗಿ ದೈಹಿಕ ಕಸರತ್ತು ಇರುವ ಜೀವನ ಶೈಲಿಯಿಂದ ಇಂಥ ಶೇ. 90ರಷ್ಟು ರೋಗಗಳನ್ನು ನಿಯಂತ್ರಿಸಬಹುದು ಎಂದು ಬರೆದಿದ್ದಾರೆ. ಈ ಮೂಲಕ ಆರೋಗ್ಯ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ