Haldiram’s: ಮಾರುಕಟ್ಟೆ ವಿಸ್ತರಣೆಗೆ ಹಲ್ದೀರಾಮ್ಸ್ ಚಿತ್ತ; ಬೆಂಗಳೂರಲ್ಲಿ ಫ್ಯಾಕ್ಟರಿ ಇರುವ ಪ್ರತಾಪ್ ಸ್ನ್ಯಾಕ್ಸ್ ಖರೀದಿಗೆ ಆಲೋಚನೆ

Prataap Snacks: ಪ್ರತಾಪ್ ಸ್ನ್ಯಾಕ್ಸ್ ಕಂಪನಿಯನ್ನು ಹಲ್ದೀರಾಮ್ಸ್ ಖರೀದಿಸಲು ಮುಂದಾಗಿದೆ. ಶೇ. 51ರಷ್ಟು ಪಾಲು ಪಡೆಯಲು ಆಲೋಚಿಸುತ್ತಿದೆ. 3,200 ಕೋಟಿ ರೂ ಮೌಲ್ಯದ ಎದುರಾಳಿ ಕಂಪನಿಯ ಮೇಲೆ ಹಲ್ದೀರಾಮ್ಸ್ ಕಣ್ಣಿಟ್ಟಿದೆ. ಪ್ರತಾಪ್ ಸ್ನ್ಯಾಕ್ಸ್ ಮಧ್ಯಪ್ರದೇಶ ಮೂಲದ ಕಂಪನಿಯಾಗಿದ್ದು ಬೆಂಗಳೂರು ಸೇರಿದಂತೆ 8 ನಗರಗಳಲ್ಲಿ 14 ಯೂನಿಟ್​ಗಳನ್ನು ಹೊಂದಿದೆ.

Haldiram's: ಮಾರುಕಟ್ಟೆ ವಿಸ್ತರಣೆಗೆ ಹಲ್ದೀರಾಮ್ಸ್ ಚಿತ್ತ; ಬೆಂಗಳೂರಲ್ಲಿ ಫ್ಯಾಕ್ಟರಿ ಇರುವ ಪ್ರತಾಪ್ ಸ್ನ್ಯಾಕ್ಸ್ ಖರೀದಿಗೆ ಆಲೋಚನೆ
ಹಲ್ದೀರಾಮ್ಸ್
Follow us
|

Updated on: Jan 18, 2024 | 5:50 PM

ನವದೆಹಲಿ, ಜನವರಿ 18: ಭಾರತದ ಪ್ರಮುಖ ಸ್ನ್ಯಾಕ್ಸ್ ತಯಾರಕ ಕಂಪನಿಯಾದ ಹಲ್ದೀರಾಮ್ (Haldiram’s) ತನ್ನ ಪ್ರತಿಸ್ಪರ್ಧಿ ಸಂಸ್ಥೆಯನ್ನು ಖರೀದಿಸಲು ಮುಂದಾಗಿದೆ. ವರದಿ ಪ್ರಕಾರ ಪ್ರತಾಪ್ ಸ್ನ್ಯಾಕ್ಸ್ ಎಂಬ ಕಂಪನಿಯನ್ನು ಹಲ್ದೀರಾಮ್ಸ್ ಖರೀದಿಸಲು ಆಸಕ್ತಿ ತೋರಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಪ್ರತಾಪ್ ಸ್ನ್ಯಾಕ್ಸ್ (Prataap Snacks) 350 ಮಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿದೆ. ಅಂದರೆ, ಸುಮಾರು 3,000 ಕೋಟಿ ರೂಗೂ ಹೆಚ್ಚು ಮೌಲ್ಯದ ಕಂಪನಿಯಾಗಿದೆ. ಆಲೂಗಡ್ಡೆ ಚಿಪ್ಸ್ ಮಾರುಕಟ್ಟೆಯಲ್ಲಿ ತಕ್ಕಮಟ್ಟಿಗೆ ಇದರ ಉಪಸ್ಥಿತಿ ಇದೆ. ಹಲ್ದೀರಾಮ್ಸ್ ಸಂಸ್ಥೆ ಪ್ರತಾಪ್ ಸ್ನ್ಯಾಕ್ಸ್​ನ ಶೇ. 51ರಷ್ಟು ಪಾಲು ಖರೀದಿಸಬಹುದು ಎನ್ನಲಾಗಿದೆ.

ಪ್ರತಾಪ್ ಸ್ನ್ಯಾಕ್ಸ್ ಸಂಸ್ಥೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಯೆಲ್ಲೋ ಡೈಮಂಡ್ ಮತ್ತು ಅವಧ್ ಎಂಬುದು ಅದರ ಪ್ರಮುಖ ಬ್ರ್ಯಾಂಡ್​ಗಳಾಗಿವೆ. ಈ ಬ್ರ್ಯಾಂಡ್​ಗಳ ಹೆಸರಿನಲ್ಲಿ ಆಲೂಗಡ್ಡೆ ಚಿಪ್ಸ್ ಮತ್ತಿತರ ತಿಂಡಿಗಳನ್ನು ಪ್ಯಾಕೆಟ್​ಗಳಲ್ಲಿ ಮಾರುತ್ತದೆ. ಪೆಪ್ಸಿ ಕಂಪನಿಯ ಲೇಸ್ ಇದರ ಪ್ರತಿಸ್ಪರ್ಧಿ ಬ್ರ್ಯಾಂಡ್ ಆಗಿದೆ.

ಇದನ್ನೂ ಓದಿ: Akasa Air: ಭಾರತದ ಆಕಾಸ ಏರ್ 150 ಬೋಯಿಂಗ್ ವಿಮಾನಗಳಿಗೆ ಆರ್ಡರ್; ಒಟ್ಟು ಸಂಖ್ಯೆ 226

ಪ್ರತಾಪ್ ಸ್ನ್ಯಾಕ್ಸ್ ಕಳೆದ ವರ್ಷ 200 ಮಿಲಿಯನ್ ಡಾಲರ್​ನಷ್ಟು ಆದಾಯ ತೋರಿದೆ. ಒಂದು ವರ್ದಲ್ಲಿ 1.2 ಕೋಟಿ ಪ್ಯಾಕೆಟ್​ಗಳನ್ನು ಅದು ಮಾರಾಟ ಮಾಡಿದೆ. ದೇಶದ ವಿವಿಧೆಡೆ 18 ಫ್ಯಾಕ್ಟರಿಗಳನ್ನು ಹೊಂದಿದೆ. ಇದರಲ್ಲಿ ಬೆಂಗಳೂರಿನಲ್ಲಿ ಎರಡು ಫ್ಯಾಕ್ಟರಿ ಇವೆ.

2017ರಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಪ್ರತಾಪ್ ಸ್ನ್ಯಾಕ್ಸ್ ಹೆಚ್ಚೇನೂ ಬೆಳೆದಿಲ್ಲ. ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಸದ್ಯ ಅದರ ಷೇರುಬೆಲೆ 1,400 ರೂ ಇದೆ. 2020ರಲ್ಲಿ ಒಂದು ಹಂತದಲ್ಲಿ ಅದರ ಷೇರುಬೆಲೆ 445 ರುಪಾಯಿಗೆ ಕುಸಿದಿತ್ತು. ಈಗ್ಗೆ ಮೂರು ವರ್ಷದಲ್ಲಿ ಮೂರು ಪಟ್ಟು ಬೆಳೆದಿದೆ. ನವೆಂಬರ್ 10ರಿಂದ ಈಚೆಗೆ ಒಂದು ಷೇರುಬೆಲೆ 300 ರುಪಾಯಿಗೂ ಹೆಚ್ಚಾಗಿದೆ.

ಇದನ್ನೂ ಓದಿ: Pension for Farmers: ಸಣ್ಣ ರೈತರಿಗೆ ಸರ್ಕಾರದಿಂದ ಪಿಂಚಣಿ ನೆರವು; ಪಿಎಂ ಕಿಸಾನ್ ಮಾನಧನ್ ಯೋಜನೆ ಬಗ್ಗೆ ತಿಳಿಯಿರಿ

ಷೇರುಮಾರುಕಟ್ಟೆಯಲ್ಲಿ ಪ್ರತಾಪ್ ಸ್ನ್ಯಾಕ್ಸ್​ನ ಮಾರ್ಕೆಟ್ ಕ್ಯಾಪ್ 3,268 ಕೋಟಿ ರೂ ಇದೆ. ಇದನ್ನು ಖರೀದಿಸಲು ಯೋಜಿಸಿರುವ ಹಲ್ದೀರಾಮ್ಸ್ ಸಂಸ್ಥೆ ಇನ್ನೂ ಲಿಸ್ಟೆಡ್ ಕಂಪನಿಯಾಗಿಲ್ಲ. ಆದರೆ, ಅದರ ಮೌಲ್ಯ 8 ಸಾವಿರ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ