AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pension for Farmers: ಸಣ್ಣ ರೈತರಿಗೆ ಸರ್ಕಾರದಿಂದ ಪಿಂಚಣಿ ನೆರವು; ಪಿಎಂ ಕಿಸಾನ್ ಮಾನಧನ್ ಯೋಜನೆ ಬಗ್ಗೆ ತಿಳಿಯಿರಿ

PM Kisan Maan Dhan Yojana: ಪಿಎಂ ಕಿಸಾನ್ ಮಾನಧನ್ ನಿಧಿ ಯೋಜನೆಯಲ್ಲಿ ಅರ್ಹ ರೈತರು ತಿಂಗಳಿಗೆ 3,000 ರೂ ಪಿಂಚಣಿ ಪಡೆಯಬಹುದು. 18ರಿಂದ 40 ವರ್ಷ ವಯಸ್ಸಿನ ಹಾಗು 5 ಎಕರೆಯೊಳಗಿನ ಜಮೀನು ಮಾಲಕತ್ವ ಹೊಂದಿರುವ ರೈತರು ಯೋಜನೆಗೆ ಅರ್ಹರು. ತಿಂಗಳಿಗೆ ಕಟ್ಟಬೇಕಾದ ಕನಿಷ್ಠ ಹಣ 55 ರೂನಿಂದ 200 ರೂ ಇದೆ. ಸರ್ಕಾರದಿಂದಲೂ ಸಮಾನ ಕೊಡುಗೆ ಇರುತ್ತದೆ.

Pension for Farmers: ಸಣ್ಣ ರೈತರಿಗೆ ಸರ್ಕಾರದಿಂದ ಪಿಂಚಣಿ ನೆರವು; ಪಿಎಂ ಕಿಸಾನ್ ಮಾನಧನ್ ಯೋಜನೆ ಬಗ್ಗೆ ತಿಳಿಯಿರಿ
ರೈತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 18, 2024 | 11:09 AM

Share

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Maan Dhan Yojana) ಸೇರಿದಂತೆ ಸರ್ಕಾರ ರೈತರಿಗೆಂದು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯೂ ಒಂದು. ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪಿಎಂ ಕಿಸಾನ್ ಮಾನಧನ್ ಯೋಜನೆ ಎರಡೂ ಕೂಡ ಭಿನ್ನವಾಗಿದ್ದರೂ 2019ರಲ್ಲೇ ಎರಡೂ ಆರಂಭವಾಗಿರುವುದು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ವ್ಯವಸಾಯಕ್ಕೆಂದು ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುತ್ತದೆ. ಆದರೆ, ಪಿಎಂ ಕಿಸಾನ್ ಮಾನಧನ್ ಯೋಜನೆಯಲ್ಲಿ ಸಣ್ಣ ರೈತರಿಗೆ ಮಾಸಿಕ 3,000 ರೂ ಪಿಂಚಣಿ ಕಲ್ಪಿಸಲಾಗುತ್ತದೆ.

ಏನಿದು ಪಿಎಂ ಕಿಸಾನ್ ಮಾನಧನ್ ಯೋಜನೆ?

ಇದರಲ್ಲಿ ಎರಡು ಹೆಕ್ಟೇರ್ ಅಥವಾ ಐದು ಎಕರೆವರೆಗೆ ಜಮೀನು ಹೊಂದಿರುವ ಹಾಗೂ 18ರಿಂದ 40 ವರ್ಷ ವಯೋಮಾನದೊಳಗಿನ ರೈತರು ಪ್ರಧಾನಮಂತ್ರಿ ಕಿಸಾನ್ ಮಾನಧನ್ ಯೋಜನೆಯಲ್ಲಿ ನೊಂದಣಿ ಮಾಡಲು ಅರ್ಹರಿರುತ್ತಾರೆ. ಸದ್ಯ 19,47,588 ರೈತರು ಈ ಯೋಜನೆಗೆ ನೊಂದಾಯಿಸಿಕೊಂಡಿದ್ದಾರೆ.

ಇದರಲ್ಲಿ ಅರ್ಹ ರೈತರು ತಿಂಗಳಿಗೆ 55 ರೂನಿಂದ 200 ರೂವರೆಗೆ ಹಣವನ್ನು ಪಿಂಚಣಿ ನಿಧಿಗೆ ತುಂಬಿಸುತ್ತಾ ಹೋಗಬೇಕು. ಕೇಂದ್ರ ಸರ್ಕಾರ ಕೂಡ ಇಷ್ಟೇ ಹಣವನ್ನು ನಿಧಿಗೆ ಹಾಕುತ್ತದೆ. ಒಂದು ವೇಳೆ 18 ವರ್ಷ ವಯಸ್ಸಿನಲ್ಲಿ ಈ ಯೋಜನೆ ಆರಂಭಿಸಿದರೆ ತಿಂಗಳಿಗೆ ಕನಿಷ್ಠ 55 ರೂನಂತೆ ಕಟ್ಟಿಕೊಂಡು ಹೋಗಬೇಕು. ಒಂದು ವೇಳೆ 40ನೇ ವಯಸ್ಸಿನಲ್ಲಿ ಯೋಜನೆ ಪಡೆದರೆ ತಿಂಗಳಿಗೆ ಕಟ್ಟಬೇಕಾಗಿರುವ ಕನಿಷ್ಠ ಮೊತ್ತ 200 ರೂ ಕಟ್ಟಬೇಕು.

ಇದನ್ನೂ ಓದಿ: ಪಿಎಂ ಕಿಸಾನ್ ಫಲಾನುಭವಿಗಳು, ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂವರೆಗೆ ವಿಮಾ ಕವರೇಜ್?

60 ವರ್ಷದವರೆಗೆ ಪ್ರತೀ ತಿಂಗಳು ಪಿಂಚಣಿ ನಿಧಿಗೆ ಕಟ್ಟಬೇಕು. ಅದಾದ ಬಳಿಕ ತಿಂಗಳಿಗೆ 3,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಿಂಚಣಿಯನ್ನು ರೈತರು ಪಡೆಯಬಹುದು.

ಪಿಎಂ ಕಿಸಾನ್ ಮಾನಧನ್ ಯೋಜನೆಯಲ್ಲಿ ನೊಂದಾಯಿಸುವುದು ಹೇಗೆ?

ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ ನೀಡಿ ನೊಂದಾಯಿಸಬೇಕು. ರೈತರ ವಯಸ್ಸಿಗೆ ಅನುಗುಣವಾಗಿ ಅವರು ಕನಿಷ್ಠ ಎಷ್ಟು ಹಣ ಕಟ್ಟಬೇಕು ಎಂಬುದನ್ನು ನಿರ್ದಿಷ್ಟಪಡಿಸಲಾಗುತ್ತದೆ. ಗ್ರಾಮ ಮಟ್ಟದ ಉದ್ದಿಮೆದಾರ ಈ ನೊಂದಾವಣಿಯಲ್ಲಿ ಸಹಾಯ ಮಾಡುತ್ತಾರೆ. ಅರ್ಹ ರೈತರು ಮೊದಲ ಕಂತನ್ನು ನಗದು ರೂಪದಲ್ಲಿ ಆ ಉದ್ದಿಮೆದಾರನಿಗೆ ನೀಡಬೇಕು. ಬಳಿಕ ಆಟೊ ಡೆಬಿಟ್ ಅರ್ಜಿ ತುಂಬಿಸಿ ಸಲ್ಲಿಸಬೇಕು. ಆ ಬಳಿಕ ಪ್ರತೀ ತಿಂಗಳು ಕೂಡ ಎಸ್​ಬಿ ಖಾತೆಯಿಂದ ನಿರ್ದಿಷ್ಟ ಮೊತ್ತದ ಹಣವು ಪಿಂಚಣಿ ನಿಧಿಗೆ ಹೋಗುತ್ತಿರುತ್ತದೆ.

ಯೋಜನೆಯಲ್ಲಿ ನೊಂದಣಿ ಮಾಡಿಕೊಂಡ ಬಳಿಕ ರೈತರಿಗೆ ವಿಶೇಷ ಕಿಸಾನ್ ಪೆನ್ಷನ್ ಅಕೌಂಟ್ ನಂಬರ್ (ಕೆಪಿಎಎನ್) ಸೃಷ್ಟಿಯಾಗುತ್ತದೆ. ಬಳಿಕ ಕಿಸಾನ್ ಕಾರ್ಡ್ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Thu, 18 January 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ