AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Highest Gold Reserves: ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಹೊಂದಿರುವ ದೇಶಗಳು; ಭಾರತ ಹೊಂದಿರುವ ಚಿನ್ನ ಎಷ್ಟು? ಯಾಕೆ ಈ ನಿಧಿ ಮುಖ್ಯ?

ವಿಶ್ವದಲ್ಲಿ ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಹೊಂದಿರುವ ದೇಶಗಳಲ್ಲಿ ರಷ್ಯಾ ಅಗ್ರಸ್ಥಾನದಲ್ಲಿದೆ. ಅಲ್ಲಿ 8,000ಕ್ಕೂ ಹೆಚ್ಚು ಟನ್​ಗಳಷ್ಟು ಚಿನ್ನ ಇದೆ. ಗೋಲ್ಡ್ ರಿಸರ್ವ್ಸ್ ಪಟ್ಟಿಯಲ್ಲಿ ಚೀನಾ ಮತ್ತು ಭಾರತ ಕ್ರಮವಾಗಿ 6 ಮತ್ತು 9ನೆ ಸ್ಥಾನದಲ್ಲಿವೆ. ಒಂದು ದೇಶದ ಆರ್ಥಿಕ ಸ್ಥಿರತೆ ಸಾಧಿಸಲು ಗೋಲ್ಡ್ ರಿಸರ್ವ್ಸ್ ಪಾತ್ರ ಮುಖ್ಯವಾಗಿರುತ್ತದೆ.

Highest Gold Reserves: ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಹೊಂದಿರುವ ದೇಶಗಳು; ಭಾರತ ಹೊಂದಿರುವ ಚಿನ್ನ ಎಷ್ಟು? ಯಾಕೆ ಈ ನಿಧಿ ಮುಖ್ಯ?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 18, 2024 | 12:21 PM

Share

ಗೋಲ್ಡ್ ರಿಸರ್ವ್ಸ್ ಅಥವಾ ಚಿನ್ನದ ನಿಧಿ (gold reserves) ಒಂದು ದೇಶದ ಆರ್ಥಿಕ ಸ್ಥಿರತೆಗೆ (economic stability) ಬಹಳ ಮುಖ್ಯವಾದ ಸಂಪತ್ತಾಗಿದೆ. 19ನೇ ಶತಮಾನದಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಬಹುತೇಕ ಎಲ್ಲಾ ದೇಶಗಳ ಕರೆನ್ಸಿಗಳ ಮೌಲ್ಯವು ಚಿನ್ನದ ಮೇಲೆ ತಳುಕು ಹಾಕಿಕೊಂಡಿತ್ತು. ಎಪತ್ತರ ದಶಕದಲ್ಲಿ ಚಿನ್ನ ಮತ್ತು ಕರೆನ್ಸಿ ನಡುವಿನ ಬಂಧವನ್ನು ಅಧಿಕೃತವಾಗಿ ತೆಗೆದುಹಾಕಲಾಗಿತ್ತು. ಆದರೂ ಕೂಡ ಎಲ್ಲಾ ದೇಶಗಳು ಚಿನ್ನದ ನಿಧಿ ಶೇಖರಿಸುವ ರೂಢಿಯನ್ನು ಮುಂದುವರಿಸಿವೆ.

ಭಾರತದಲ್ಲಿ ಆರ್​ಬಿಐ ಇರುವಂತೆ ಬೇರೆ ಬೇರೆ ದೇಶಗಳಲ್ಲಿ ಸೆಂಟ್ರಲ್ ಬ್ಯಾಂಕುಗಳು ಇರುತ್ತವೆ. ಅವು ಗೋಲ್ಡ್ ರಿಸರ್ವ್ಸ್ ಸಂಗ್ರಹಿಸುತ್ತವೆ. ಆರ್ಥಿಕ ಅನಿಶ್ಚಿತ ಸಂದರ್ಭದಲ್ಲಿ ಈ ಚಿನ್ನದ ಸಂಪತ್ತು ಸಹಾಯಕ್ಕೆ ಬರುತ್ತದೆ. ಒಂದು ದೇಶದ ಸಾಲ ತೀರಿಸುವಿಕೆಯ ಶಕ್ತಿಯನ್ನು ಅಂದಾಜಿಸಲು ಇರುವ ಮಾಪಕಗಳಲ್ಲಿ ಗೋಲ್ಡ್ ರಿಸರ್ವ್ಸ್ ಒಂದು. ಉದಾಹರಣೆಗೆ, ಒಬ್ಬ ವ್ಯಕ್ತಿಯ ಬಳಿ ಚಿನ್ನ ಇದ್ದರೆ ಅದನ್ನು ಅಡಮಾನವಾಗಿ ಇಟ್ಟುಕೊಂಡು ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತವೆ. ಅದು ಬಹಳ ಸುರಕ್ಷಿತ ಲೋನ್ ಎಂದು ಪರಿಗಣಿಸಲಾಗುತ್ತದೆ. ಒಂದು ದೇಶದ ಚಿನ್ನದ ಸಂಪತ್ತು (ಆರ್​ಬಿಐನ ಗೋಲ್ಡ್ ರಿಸರ್ವ್) ಕೂಡ ಆ ದೇಶದ ಕ್ರೆಡಿಟ್ ಶಕ್ತಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಅಲರ್ಟ್..! ಇಪಿಎಫ್​ಗೆ ಜನ್ಮ ದಿನಾಂಕ ದಾಖಲೆಯಾಗಿ ಆಧಾರ್ ಕಾರ್ಡ್ ಸ್ವೀಕಾರಾರ್ಹ ಅಲ್ಲ; ಯಾವ ದಾಖಲೆಗಳು ಬೇಕು?

ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಹೊಂದಿರುವ ದೇಶಗಳು

ಫೋರ್ಬ್ಸ್ ಪ್ರಕಾರ ಅಮೆರಿಕ ಅತಿ ಹೆಚ್ಚು ಗೋಲ್ಡ್ ರಿಸರ್ವ್ಸ್ ಹೊಂದಿದೆ. ಚಿನ್ನಕ್ಕೆ ಅತಿಯಾಗಿ ಬೇಡಿಕೆ ಇರುವ ಚೀನಾ ಮತ್ತು ಭಾರತ ಗೋಲ್ಡ್ ರಿಸರ್ವ್ಸ್ ಸಂಪತ್ತಿನಲ್ಲಿ ಕ್ರಮವಾಗಿ 6 ಮತ್ತು 9ನೇ ಸ್ಥಾನ ಹೊಂದಿವೆ. ಅತಿಹೆಚ್ಚಿ ಚಿನ್ನ ಸಂಪತ್ತು ಹೊಂದಿರುವ ಜಗತ್ತಿನ 10 ದೇಶಗಳ ಪಟ್ಟಿ ಇಂತಿದೆ:

  1. ಅಮೆರಿಕ: 8,336 ಟನ್ ಗೋಲ್ಡ್ ರಿಸರ್ವ್ಸ್
  2. ಜರ್ಮನಿ: 3,352 ಟನ್ ಗೋಲ್ಡ್ ರಿಸರ್ವ್ಸ್
  3. ಇಟಲಿ: 2,451 ಟನ್
  4. ಫ್ರಾನ್ಸ್: 2,436 ಟನ್
  5. ರಷ್ಯಾ: 2,332 ಟನ್
  6. ಚೀನಾ: 2,191 ಟನ್
  7. ಸ್ವಿಟ್ಜರ್​ಲ್ಯಾಂಡ್: 1,040 ಟನ್
  8. ಜಪಾನ್: 845.97 ಟನ್
  9. ಭಾರತ: 800.78 ಟನ್
  10. ನೆದರ್​ಲ್ಯಾಂಡ್ಸ್: 612 ಟನ್ ಗೋಲ್ಡ್ ರಿಸರ್ವ್ಸ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!