AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akasa Air: ಭಾರತದ ಆಕಾಸ ಏರ್ 150 ಬೋಯಿಂಗ್ ವಿಮಾನಗಳಿಗೆ ಆರ್ಡರ್; ಒಟ್ಟು ಸಂಖ್ಯೆ 226

Boeing 737 MAX aircrafts order booking: 2022ರಲ್ಲಿ ಆರಂಭವಾದ ಆಕಾಸ ಏರ್ ಸಂಸ್ಥೆ ಇದೀಗ 150 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಬುಕ್ ಮಾಡಿದೆ. ಈ ಹಿಂದೆ 76 ವಿಮಾನಗಳಿಗೆ ಆರ್ಡರ್ ಕೊಟ್ಟಿದ್ದು ಅದರಲ್ಲಿ 22 ವಿಮಾನಗಳ ಡೆಲಿವರಿ ಆಗಿದೆ. ಆಕಾಸ ಏರ್ ಸಂಸ್ಥೆಗೆ ಈ ಎಲ್ಲಾ ವಿಮಾನಗಳ ಡೆಲಿವರಿ 2032ರೊಳಗೆ ಆಗಲಿದೆ. ಅದರ ವಿಮಾನ ಸಂಖ್ಯೆ 226 ಆಗಲಿದೆ.

Akasa Air: ಭಾರತದ ಆಕಾಸ ಏರ್ 150 ಬೋಯಿಂಗ್ ವಿಮಾನಗಳಿಗೆ ಆರ್ಡರ್; ಒಟ್ಟು ಸಂಖ್ಯೆ 226
ಆಕಾಸ ಏರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 18, 2024 | 1:50 PM

Share

ಹೈದರಾಬಾದ್, ಜನವರಿ 18: ಭಾರತದ ವೈಮಾನಿಕ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಗಳನ್ನು ಇಡುತ್ತಿರುವ ಆಕಾಸ ಏರ್ ಸಂಸ್ಥೆ (Akasa Air) ಇದೀಗ 150 ಬೋಯಿಂಗ್ ವಿಮಾನಗಳ ಖರೀದಿಗೆ ಆರ್ಡರ್ ನೀಡಿದೆ. ಭಾರತದಲ್ಲಿ ವಿಮಾನಯಾನ ಮಾರುಕಟ್ಟೆ (aviation market) ಗಣನೀಯವಾಗಿ ಬೆಳೆಯುತ್ತಿದ್ದು, ಅದು ನೀಡುವ ಅಪಾರ ಅವಕಾಶಗಳನ್ನು ಬಳಸಿಕೊಳ್ಳಲು ಆಕಾಸ ಏರ್ ಸಂಸ್ಥೆಗೆ ಇದು ಸುಸಂದರ್ಭವಾಗಿದೆ. ಈ ನಿಟ್ಟಿನಲ್ಲಿ ಹೊಸ ಬೋಯಿಂಗ್ ವಿಮಾನಗಳನ್ನು (Boeing 737 MAX aircrafts) ಪಡೆಯುತ್ತಿರುವುದು ಸಂಸ್ಥೆಗೆ ಇನ್ನಷ್ಟು ಬಲ ಸಿಕ್ಕಂತಾಗುತ್ತದೆ. ದಿವಂಗತ ರಾಕೇಸ್ ಜುಂಝನವಾಲ ಅವರು ಸಹ-ಸಂಸ್ಥಾಪಕರಾಗಿರುವ ಆಕಾಸ ಏರ್ ಸಂಸ್ಥೆ ಹೈದರಾಬಾದ್​ನಲ್ಲಿ ನಡೆಯುತ್ತಿರುವ ವಿಂಗ್ಸ್ ಇಂಡಿಯಾ ಏರ್​ಶೋ (Wings India Airshow at Hyderabad) ವೇಳೆ ವಿಮಾನಗಳನ್ನು ಬುಕ್ ಮಾಡಿದೆ.

ಆಕಾಶ ಏರ್ ಸಂಸ್ಥೆ ಸಣ್ಣ ಗಾತ್ರದ 150 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಪಡೆಯುತ್ತಿದೆ. ಬೋಯಿಂಗ್ ಸಂಸ್ಥೆ 2032ರ ವೇಳೆಗೆ ಹಂತ ಹಂತವಾಗಿ ಈ ವಿಮಾನಗಳನ್ನು ಆಕಾಸ ಏರ್​ಗೆ ಸರಬರಾಜು ಮಾಡಲಿದೆ.

ಇದನ್ನೂ ಓದಿ: Highest Gold Reserves: ಅತಿಹೆಚ್ಚು ಗೋಲ್ಡ್ ರಿಸರ್ವ್ಸ್ ಹೊಂದಿರುವ ದೇಶಗಳು; ಭಾರತ ಹೊಂದಿರುವ ಚಿನ್ನ ಎಷ್ಟು? ಯಾಕೆ ಈ ನಿಧಿ ಮುಖ್ಯ?

ಕೇವಲ ಎರಡು ವರ್ಷದ ಹಿಂದೆ ಆರಂಭವಾದ ಆಕಾಸ ಏರ್ ಸಂಸ್ಥೆ ಸದ್ಯ ಕೇವಲ 22 ವಿಮಾನಗಳೊಂದಿಗೆ ಸೇವೆ ನೀಡುತ್ತಿದೆ. ಆದರೆ, ಈಗ ಹೊಸ 150 ಬೋಯಿಂಗ್ ವಿಮಾನ ಸೇರಿ ಇನ್ನೂ 204 ವಿಮಾನಗಳು ಡೆಲಿವರಿ ಆಗಬೇಕಿವೆ.

ಆಕಾಸ ಏರ್ ಸಂಸ್ಥೆ ಇದೇ ಜೂನ್ ತಿಂಗಳಲ್ಲಿ ನಾಲ್ಕು ಬೋಯಿಂಗ್ 737 ಮ್ಯಾಕ್ಸ್8 ವಿಮಾನಕ್ಕೆ ಆರ್ಡರ್ ಕೊಟ್ಟಿತ್ತು. ಮೂರು ವರ್ಷದ ಹಿಂದೆ (2021ರಲ್ಲಿ) 72 ಬೋಯಿಂಗ್ 737 ಮ್ಯಾಕ್ಸ್ ಏರ್​ಕ್ರಾಫ್ಟ್​ಗಳಿಗೆ ಆರ್ಡರ್ ಕೊಟ್ಟಿತ್ತು. ಅವುಗಳಲ್ಲಿ 22 ವಿಮಾನಗಳ ಡೆಲಿವರಿ ಆಗಿದೆ. ಇನ್ನೂ 204 ವಿಮಾನಗಳು ಬರಬೇಕಿವೆ. 2032ರೊಳಗೆ ಆಕಾಸ ಏರ್ ಸಂಸ್ಥೆ ಬಳಿ ವಿಮಾನಗಳ ಸಂಖ್ಯೆ 226 ಇರಲಿದೆ. ವಿಶ್ವದ ಅತಿದೊಡ್ಡ 30 ವಿಮಾನ ಸಂಸ್ಥೆಗಳಲ್ಲಿ ಅದೂ ಒಂದಾಗಿ ಇರಬಹುದು.

ಇದನ್ನೂ ಓದಿ: Pension for Farmers: ಸಣ್ಣ ರೈತರಿಗೆ ಸರ್ಕಾರದಿಂದ ಪಿಂಚಣಿ ನೆರವು; ಪಿಎಂ ಕಿಸಾನ್ ಮಾನಧನ್ ಯೋಜನೆ ಬಗ್ಗೆ ತಿಳಿಯಿರಿ

ಸದ್ಯಕ್ಕೆ 22 ವಿಮಾನಗಳ ಹಾರಾಟ ನಡೆಸುತ್ತಿರುವ ಆಕಾಸ ಏರ್​ನ ಚಟುವಟಿಕೆ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅದರ ಪಾಲು ಶೇ. 4.4ರಷ್ಟು ಇದೆ. ಬೆಂಗಳೂರು, ಅಯೋಧ್ಯೆ, ವಾರಾಣಸಿ ಸೇರಿದಂತೆ 18 ನಗರಗಳಿಗೆ ಅದರ ಸೇವೆ ಇದೆ. ಶೀಘ್ರದ್ಲಲೇ ವೈಮಾನಿಕ ಸೇವೆಯನ್ನು ಅಂತಾರಾಷ್ಟ್ರೀಯವಾಗಿ ವಿಸ್ತರಿಸಲು ಯೋಜಿಸುತ್ತಿದೆ. ಸಿಂಗಾಪುರ್, ದಮ್ಮಮ್, ಕತಾರ್, ಓಮನ್ ಮೊದಲಾದ ಗಲ್ಫ್ ಮತ್ತು ಮಿಡಲ್ ಈಸ್ಟ್ ದೇಶಗಳಿಗೆ ವಿಮಾನ ಸೇವೆ ಆರಂಭಿಸಲು ಆಕಾಸ ಏರ್ ಇಚ್ಛಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ