AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ ಎಫೆಕ್ಟ್; 10 ಮಂದಿಯ ಕೆಲಸ ಒಬ್ಬನಿಂದಲೇ ಸಾಧ್ಯ; ಭವಿಷ್ಯದ ವಾಸ್ತವ ಬಿಚ್ಚಿಟ್ಟ ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು

ಕಂಪ್ಯೂಟರ್ ಆಧಾರಿತ ಕೆಲಸಗಳಲ್ಲಿ ಎಐ (AI) ತಂತ್ರಜ್ಞಾನದಿಂದಾಗಿ ಬೃಹತ್ ಬದಲಾವಣೆಗಳಾಗಲಿವೆ ಎಂದು ಜೋಹೋ ಮುಖ್ಯಸ್ಥ ಶ್ರೀಧರ್ ವೆಂಬು ಹೇಳಿದ್ದಾರೆ. ಒಬ್ಬ ಸ್ಮಾರ್ಟ್ ವ್ಯಕ್ತಿಯು 10 ಜನರ ಕೆಲಸವನ್ನು ಏಕಾಂಗಿಯಾಗಿ ನಿರ್ವಹಿಸಲು ಸಾಧ್ಯ ಎಂದಿದ್ದಾರೆ. ಉದ್ಯಮಗಳು ಈ ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಂಡು ಅದನ್ನು ಸ್ವೀಕರಿಸಿ, ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದಿದ್ದಾರೆ.

ಎಐ ಎಫೆಕ್ಟ್; 10 ಮಂದಿಯ ಕೆಲಸ ಒಬ್ಬನಿಂದಲೇ ಸಾಧ್ಯ; ಭವಿಷ್ಯದ ವಾಸ್ತವ ಬಿಚ್ಚಿಟ್ಟ ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು
ಶ್ರೀಧರ್ ವೆಂಬುImage Credit source: X @svembu
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2026 | 6:40 PM

Share

ಚೆನ್ನೈ, ಅಕ್ಟೋಬರ್ 29: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದ್ದು, ಇದು ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ ಎಂದು ಜೊಹೋ (Zoho) ಸಹ-ಸಂಸ್ಥಾಪಕ ಮತ್ತು ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಎಚ್ಚರಿಕೆ ನೀಡಿದ್ದಾರೆ. ಎಐ ನೆರವಿನಿಂದ ಒಬ್ಬನೇ ವ್ಯಕ್ತಿಯು ಹತ್ತು ಜನರ ಕೆಲಸವನ್ನು ಸುಲಭವಾಗಿ ಮಾಡಬಹುದಾದ ದಿನಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಶ್ರೀಧರ್ ವೆಂಬು, ಕಂಪ್ಯೂಟರ್ ಮೂಲಕ ಮಾಡುವ ಯಾವುದೇ ಕೆಲಸದಲ್ಲಿ ಈಗ ಈ ಅಪಾಯವಿದೆ ಎಂದು ತಿಳಿಸಿದ್ದಾರೆ. “AI ಬಳಸಿ ಒಬ್ಬ ಸ್ಮಾರ್ಟ್ ವ್ಯಕ್ತಿ ಈಗ 10 ಜನರ ಕೆಲಸವನ್ನು ಮಾಡಬಹುದು, ಈ ಅಪಾಯವು ಈಗ ಹೆಚ್ಚು ನಿಜವಾಗುತ್ತಿದೆ” ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಭಾರತೀಯ ರೈತರ ಹಿತಾಸಕ್ತಿ ಬಲಿಕೊಡುವುದಿಲ್ಲ ಎಂದ ವಾಣಿಜ್ಯ ಸಚಿವ

ಪಾಸಿಟಿವ್ ಸಾಧ್ಯತೆ ತೆರೆದಿಟ್ಟ ವೆಂಬು

ಒಬ್ಬ ಸ್ಮಾರ್ಟ್ ವ್ಯಕ್ತಿ 10 ಜನರ ಕೆಲಸವನ್ನು ಮಾಡುತ್ತಾನೆ ಎಂದರೆ ಉಳಿದ 9 ಮಂದಿಗೆ ಕೆಲಸವೇ ಇರುವುದಿಲ್ಲ ಎಂದಲ್ಲ. ಹಿಂದೆ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಅಥವಾ ಡಿಜಿಟಲ್ ಮಾರ್ಕೆಟಿಂಗ್ ತಜ್ಞರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲದ ಸಣ್ಣ ಕೈಗಾರಿಕೆಗಳು ಮತ್ತು ವ್ಯವಹಾರಗಳು ಈಗ ಕಡಿಮೆ ವೆಚ್ಚದಲ್ಲಿ ಅಂತಹ ಸೇವೆಗಳನ್ನು ಪಡೆದುಕೊಳ್ಳಲು AI ಅವಕಾಶ ಮಾಡಿಕೊಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್

ಆರ್ಥಿಕ ಮರುಸಮತೋಲನ

ಈ ಬದಲಾವಣೆಯು ಸಂಪೂರ್ಣ ಆರ್ಥಿಕತೆಯಲ್ಲಿ ದೊಡ್ಡ ಮಟ್ಟದ ಮರುಸಮತೋಲನಕ್ಕೆ ಕಾರಣವಾಗಲಿದೆ ಎಂದಿರುವ ಅವರು, ಈ ಪರಿವರ್ತನೆಯ ಹಂತವು ಸ್ವಲ್ಪ ನೋವಿನಿಂದ ಕೂಡಿರಬಹುದು. ಆದರೆ, ಇದನ್ನು ಮುಂಚಿತವಾಗಿ ಸ್ವೀಕರಿಸಿ ಅದಕ್ಕೆ ತಕ್ಕಂತೆ ಸಿದ್ಧರಾಗುವುದೊಂದೇ ನಾವು ಮಾಡಬಹುದಾದ ಮಾರ್ಗ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್: 24ನೇ ಕಂತಿನ ಹಣ ಬಿಡುಗಡೆ ದಿನ ಫಿಕ್ಸ್; 9.34 ಕೋಟಿ ರೈತರಿಗೆ ಅ. 30ಕ್ಕೆ ಸಿಗಲಿದೆ ಹಣ

ಎಐನಿಂದ ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಅಲುಗಾಟ ಆಗಲಿದೆ ಎಂದು ಅನೇಕ ತಜ್ಞರ ಅನಿಸಿಕೆಗಳಿಗೆ ಜೋಹೋ ಸಂಸ್ಥಾಪಕರೂ ಧ್ವನಿಗೂಡಿಸಿದ್ದಾರೆ. ಎಐ ಅಭಿವೃದ್ಧಿಗೆ ಭಾರೀ ಹೂಡಿಕೆ ಆಗಿರುವುದು, ಮೆಮೋರಿ ಚಿಪ್​ಗಳ ಬೆಲೆ ಏರಿರುವುದು ಇತ್ಯಾದಿ ಕಾರಣಕ್ಕೆ ಜೋಹೋ ವ್ಯವಹಾರಕ್ಕೆ ಹಿನ್ನಡೆಯಾಗಿದೆ ಎಂದಿರುವ ವೆಂಬು, ಈ ವರ್ಷ ತಮ್ಮ ಉದ್ಯೋಗಿಗಳಿಗೆ ಸಂಬಳ ಏರಿಕೆ ತಡೆಹಿಡಿದಿರುವುದಾಗಿ ನೊಂದು ಹೇಳಿದ್ದಾರೆ. ಆದರೆ, ಅದೃಷ್ಟಕ್ಕೆ ಅವರು ಯಾವ ಉದ್ಯೋಗಿಯನ್ನೂ ಕೆಲಸದಿಂದ ತೆಗೆಯುವ ನಿರ್ಧಾರ ಮಾಡಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಪಿಎಸ್ಐ ವಿದ್ಯಾಶ್ರೀ, ಕಾನ್ಸ್‌ಟೇಬಲ್ ಪ್ರವೀಣ್ ಅಮಾನತು
ಪಿಎಸ್ಐ ವಿದ್ಯಾಶ್ರೀ, ಕಾನ್ಸ್‌ಟೇಬಲ್ ಪ್ರವೀಣ್ ಅಮಾನತು
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ