Rs 2,000 Bank Rules: ಎರಡು ಸಾವಿರ ರೂ ನೋಟು ಬದಲಾವಣೆಗೆ ಯಾವ್ಯಾವ ಬ್ಯಾಂಕಲ್ಲಿ ಹೇಗಿದೆ ನಿಯಮ?

|

Updated on: May 26, 2023 | 1:49 PM

Bank Rules For Exchaning Rs 2,000 Notes: ಖಾತೆಗೆ ಹಾಕದೇ ನೋಟು ಬದಲಾವಣೆ ಮಾಡಿಕೊಳ್ಳಲು ಕೆಲ ನಿರ್ಬಂಧಗಳಿವೆ. ಕೆಲ ಬ್ಯಾಂಕುಗಳಲ್ಲಿ ನೋಟು ಬದಲಾವಣೆಗೆ ಪ್ರತ್ಯೇಕ ಸ್ಲಿಪ್ ಸೇರಿದಂತೆ ಒಂದಷ್ಟು ನಿಯಮಗಳಿವೆ. ಇನ್ನೂ ಕೆಲ ಬ್ಯಾಂಕುಗಳಲ್ಲಿ ಫಾರ್ಮ್ ಅಗತ್ಯ ಇಲ್ಲದೇ ಜನರು ನೋಟು ವಿನಿಮಯ ಮಾಡಿಕೊಳ್ಳಬಹುದು.

Rs 2,000 Bank Rules: ಎರಡು ಸಾವಿರ ರೂ ನೋಟು ಬದಲಾವಣೆಗೆ ಯಾವ್ಯಾವ ಬ್ಯಾಂಕಲ್ಲಿ ಹೇಗಿದೆ ನಿಯಮ?
2,000 ರೂ ನೋಟು
Follow us on

ನವದೆಹಲಿ: 2,000 ರೂ ಮುಖಬೆಲೆಯ ನೋಟುಗಳನ್ನು (Rs 2,000 Notes) ಅಧಿಕೃತವಾಗಿ ಚಲಾವಣೆಯಿಂದ ಆರ್​ಬಿಐ ಹಿಂಪಡೆದುಕೊಂಡಿದೆ. ಈ ನೋಟುಗಳನ್ನು ಹೊಂದಿರುವ ಜನರು 6 ತಿಂಗಳೊಳಗೆ (2023 September 30th) ವಿನಿಮಯ ಮಾಡಿಕೊಳ್ಳಲು ಕಾಲಾವಕಾಶ ಹೊಂದಿದ್ದಾರೆ. ಜನರು ಹೆಚ್ಚಿನ ತೊಂದರೆ ಇಲ್ಲದೇ 2,000 ರೂ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಳ್ಳಬಹುದು. ಖಾತೆಗೆ ಹಾಕದೇ ನೋಟು ಬದಲಾವಣೆ ಮಾಡಿಕೊಳ್ಳಲು ಕೆಲ ನಿರ್ಬಂಧಗಳಿವೆ. ಕೆಲ ಬ್ಯಾಂಕುಗಳಲ್ಲಿ ನೋಟು ಬದಲಾವಣೆಗೆ ಪ್ರತ್ಯೇಕ ಸ್ಲಿಪ್ ಸೇರಿದಂತೆ ಒಂದಷ್ಟು ನಿಯಮಗಳಿವೆ. ಇನ್ನೂ ಕೆಲ ಬ್ಯಾಂಕುಗಳಲ್ಲಿ ಫಾರ್ಮ್ ಅಗತ್ಯ ಇಲ್ಲದೇ ಜನರು ನೋಟು ವಿನಿಮಯ ಮಾಡಿಕೊಳ್ಳಬಹುದು. ಯಾವ್ಯಾವ ಬ್ಯಾಂಕಲ್ಲಿ ನಿಯಮಗಳು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಎಸ್​ಬಿಐ ಬ್ಯಾಂಕ್​ನಲ್ಲಿ 2,000 ರೂ ನೋಟು ವಿನಿಮಯ ಹೇಗೆ?

ಕೆಲ ದಿನಗಳ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಪ್ರಕಟಣೆಯ ಪ್ರಕಾರ ತಮ್ಮ ಬ್ಯಾಂಕ್​ನ ಯಾವುದೇ ಶಾಖೆಯಲ್ಲೂ ಯಾರೇ 2,000 ರೂ ನೋಟು ವಿನಿಮಯಕ್ಕೆ ಬಂದರೆ ಯಾವ ಫಾರ್ಮ್ ಅಥವಾ ಐಡಿ ಪ್ರೂಫ್ ಕೇಳದೇ ನೋಟು ಬದಲಾವಣೆ ಮಾಡಿಕೊಡಬೇಕು ಎಂದಿದೆ. ಅಂದರೆ, ನೀವು ಯಾವ ದಾಖಲಾತಿ ಇಲ್ಲದೇ ಸುಮ್ಮನೆ 2,000 ರೂ ನೋಟು ತೆಗೆದುಕೊಂಡು ಹೋದರೆ ಬದಲಿಯಾಗಿ ಬೇರೆ ನೋಟುಗಳನ್ನು ಪಡೆದು ಮರಳಬಹುದು.

ಪಿಎನ್​ಬಿ ಬ್ಯಾಂಕಲ್ಲಿ 2,000 ರೂ ನೋಟು ವಿನಿಮಯಕ್ಕೆ ಏನಿದೆ ನಿಯಮ?

ಎಸ್​ಬಿಐನಂತೆ ಪಂಜಾಬ್ ನ್ಯಾಷನಲ್ ಬ್ಯಾಂಕಲ್ಲೂ 2,000 ರೂ ನೋಟು ಬದಲಾವಣೆಗೆ ಯಾವ ಐಡಿ ಪ್ರೂಫ್ ಕೊಡುವುದಾಗಲೀ, ಸ್ಲಿಪ್ ಬರೆಯುವುದಾಲೀ ಇರುವುದಿಲ್ಲ.

ಇದನ್ನೂ ಓದಿGermany: ಮಕಾಡೆ ಮಲಗಿದ ಜರ್ಮನಿ; ಬಲಿಷ್ಠ ದೇಶಕ್ಕೆ ಈ ಸ್ಥಿತಿ ಬರಲು ಏನು ಕಾರಣ? ಭಾರತಕ್ಕಿದೆಯಾ ಆತಂಕ?

2,000 ರೂ ನೋಟು ಬದಲಾವಣೆಗೆ ಐಡಿ ಪ್ರೂಫ್ ಕೇಳದ ಇತರ ಬ್ಯಾಂಕುಗಳು

ಎಸ್​ಬಿಐ, ಪಿಎನ್​ಬಿಯಂತೆ ಕೆನರಾ ಬ್ಯಾಂಕ್, ಯೆಸ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾದಲ್ಲೂ 2,000 ರೂ ನೋಟು ಬದಲಾವಣೆಗೆ ಯಾವ ನಿಯಮಗಳಿಲ್ಲ. ನೀವು ಐಡಿ ಪ್ರೂಫ್ ಕೊಡಬೇಕಿಲ್ಲ, ಸ್ಲಿಪ್ ಭರ್ತಿ ಮಾಡಿ ಸಲ್ಲಿಸಬೇಕಿಲ್ಲ.

2,000 ರೂ ನೋಟು ವಿನಿಮಯಕ್ಕೆ ದಾಖಲೆಗಳನ್ನು ಕೇಳುವ ಬ್ಯಾಂಕುಗಳು ಯಾವುವು?

ಕೋಟಕ್ ಮತ್ತು ಎಚ್​ಎಸ್​ಬಿಸಿ ಬ್ಯಾಂಕುಗಳು ತಮ್ಮ ಗ್ರಾಹಕರಿಂದ 2,000 ರೂ ನೋಟುಗಳನ್ನು ಪಡೆದುಕೊಂಡು ಖಾತೆಗೆ ಜಮೆ ಮಾಡುತ್ತಿವೆ. ಆದರೆ, ಇತರ ವ್ಯಕ್ತಿಗಳು ಬಂದಾಗ ಆಧಾರ್ ಇತ್ಯಾದಿ ಐಡಿ ಪ್ರೂಫ್ ಕೊಡಬೇಕೆಂದು ಕೇಳಲಾಗುತ್ತಿದೆ.

ಇದನ್ನೂ ಓದಿUS Indians: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಭಾರತೀಯರು ಎಷ್ಟು? 2 ತಿಂಗಳೊಳಗೆ ಬೇರೆ ಕೆಲಸ ಗಿಟ್ಟಿಸಿಕೊಳ್ಳದಿದ್ದರೆ ಗತಿ ಏನು?

ಬ್ಯಾಂಕ್ ಆಫ್ ಬರೋಡಾದಲ್ಲಿ ಐಡಿ ಪ್ರೂಫ್ ಕೇಳಲಾಗುತ್ತಿಲ್ಲ. ಆದರೆ, ಸ್ಲಿಪ್ ಬರೆದು ಸಲ್ಲಿಸಬೇಕಾಗುತ್ತದೆ. ಐಸಿಐಸಿಐ ಮತ್ತು ಎಚ್​ಡಿಎಫ್​ಸಿ ಬ್ಯಾಂಕುಗಳಲ್ಲಿ ಪ್ರತಿಯೊಬ್ಬರೂ ಕೂಡ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು. ತಮ್ಮ ಬ್ಯಾಂಕಲ್ಲಿ ಖಾತೆ ಇಲ್ಲದ ವ್ಯಕ್ತಿಗಳಾದರೆ ಐಡಿ ಪ್ರೂಫ್ ಸಲ್ಲಿಸಬೇಕಾಗುತ್ತದೆ.

2,000 ರೂ ನೋಟು ವಿನಿಮಯಕ್ಕೆ ಇರುವ ನಿರ್ಬಂಧಗಳು:

ನೀವು ಯಾವುದೇ ಬ್ಯಾಂಕಿಗೆ ಹೋಗಿಯೂ 2,000 ರೂ ನೋಟು ಬದಲಾಯಿಸಿಕೊಂಡು ಬರಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾದರೆ ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ ಮಾಡಬಹುದು. ನೋಟ್ ಎಕ್ಸ್​ಚೇಂಜ್ ಮಾಡುವುದಿದ್ದರೆ ಒಂದು ದಿನದಲ್ಲಿ 10 ನೋಟುಗಳವರೆಗೆ ಮಿತಿ ಇದೆ. ಎಸ್​ಬಿಐನಂತಹ ಕೆಲ ಬ್ಯಾಂಕುಗಳಲ್ಲಿ ಈ ನಿರ್ಬಂಧವೂ ಇಲ್ಲ. ಒಮ್ಮೆಗೆ ವಿನಿಮಯ ಮಾಡಿಕೊಳ್ಳಲು 10 ನೋಟು ಮಿತಿ ಇದೆ. ಆದರೆ, ಸರದಿಯಲ್ಲಿ ಮತ್ತೆ ಬಂದು 10 ನೋಟು ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. ಅದೇ ರೀತಿ ಎಷ್ಟು ಬೇಕಾದರೂ ಆವರ್ತಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ