ನವದೆಹಲಿ: 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಆರ್ಬಿಐ (Reserve Bank of India) ಹಿಂಪಡೆದುಕೊಂಡಿದ್ದು, ಮೇ 23ರಿಂದ ಇವುಗಳನ್ನು ವಿನಿಮಯ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ವಿನಿಮಯದ ಬಾಗಿಲು ಸೆಪ್ಟಂಬರ್ 30ರವರೆಗೂ ಇರಲಿದೆ. ಇದೀಗ ಒಂದು ದಿನ ಮುನ್ನ ಆರ್ಬಿಐ 2,000 ರೂ ನೋಟುಗಳ ವಿನಿಮಯ ವಿಚಾರದಲ್ಲಿ ಎಲ್ಲಾ ಬ್ಯಾಂಕುಗಳಿಗೂ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಾರ್ವಜನಿಕರಿಗೆ ಕಿವಿಮಾತು ಕೂಡ ಹೇಳಿದ್ದಾರೆ.
‘ನೀವು ಬ್ಯಾಂಕುಗಳಿಗೆ ಮುಗಿಬಿದ್ದು ಹೋಗುವ ಅವಶ್ಯಕತೆ ಇಲ್ಲ. ಸೆಪ್ಟಂಬರ್ 30ರವರೆಗೆ, 4 ತಿಂಗಳು ನಿಮಗೆ ಕಾಲಾವಕಾಶ ಇದೆ. ಸೆಪ್ಟಂಬರ್ 30ರ ಬಳಿಕವೂ ಈ 2,000 ರೂ ನೋಟು ಮಾನ್ಯವಾಗಿಯೇ ಇರುತ್ತದೆ’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಹಾಗಾದರೆ, 2,000 ರೂ ನೋಟು ವಿನಿಮಯಕ್ಕೆ ಸಾರ್ವಜನಿಕರಿಗೆ ಸೆಪ್ಟಂಬರ್ 30ಕ್ಕೆ ಡೆಡ್ಲೈನ್ ಕೊಟ್ಟಿರುವುದು ಯಾಕೆ? ಇದಕ್ಕೆ ಆರ್ಬಿಐ ಗವರ್ನರ್ ಉತ್ತರ ಕೊಟ್ಟಿದ್ದಾರೆ. ಅವರ ಪ್ರಕಾರ, ಡೆಡ್ಲೈನ್ ನಿಗದಿ ಮಾಡಿದಾಗ ಜನರು ಅದನ್ನು ಗಂಭೀರವಾಗಿ ಪರಿಗಣಿಸಿ ತಮ್ಮಲ್ಲಿ 2,000 ರೂ ನೋಟಿದ್ದರೆ ಅದನ್ನು ಹಿಂದಿರುಗಿಸಲು ಯತ್ನಿಸುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: RBI: 2,000 ರೂ ನೋಟು ಹಿಂಪಡೆದದ್ದರಿಂದ ಯಾರಿಗೆ ಲಾಭ? ಇಲ್ಲಿದೆ ಒಂದು ರಿಪೋರ್ಟ್
2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದರಿಂದ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸೆಪ್ಟಂಬರ್ 30ರವರೆಗೆ ಕಾಲಾವಕಾಶ ಇದೆ. ಯಾವುದೇ ಬ್ಯಾಂಕಿನಲ್ಲೂ ವಿನಿಮಯಕ್ಕೆ ಅವಕಾಶ ಇರುತ್ತದೆ. ಮೇ 23ರಿಂದಲೇ ಈ ಕಾರ್ಯ ಆರಂಭವಾಗುತ್ತದೆ. ಇಂದು ಆರ್ಬಿಐ ಎಲ್ಲಾ ಬ್ಯಾಂಕುಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.
ಈ ಮೇಲಿನ ಎರಡು ಮಾರ್ಗಸೂಚಿಯನ್ನು ಮೇ 22ರಂದು ಆರ್ಬಿಐ ಬಿಡುಗಡೆ ಮಾಡಿದೆ.