
ನವದೆಹಲಿ, ಡಿಸೆಂಬರ್ 2: ಭಾರತದ ಕರೆನ್ಸಿಯಾದ ರುಪಾಯಿಯ ಮೌಲ್ಯ (Dollar vs Rupee) ಕುಸಿತ ಮುಂದುವರಿದಿದೆ. ಇಂದು ಮಂಗಳವಾರ ಡಾಲರ್ ಎದುರು ರುಪಾಯಿ 89.95ರ ಮಟ್ಟಕ್ಕೆ ಕುಸಿದಿದೆ. ರುಪಾಯಿ ಇತಿಹಾಸದಲ್ಲೇ ಇದು ಅತ್ಯಂತ ಹೀನಾಯ ಸ್ಥಿತಿ ಎನಿಸಿದೆ. ಈ ವಾರದಲ್ಲೇ ರುಪಾಯಿ ಮೌಲ್ಯ ಮೊತ್ತಮೊದಲ ಬಾರಿಗೆ 90ರ ಗಡಿ ದಾಟಿ ಹೋದರೆ ಅಚ್ಚರಿ ಇಲ್ಲ. ನಿನ್ನೆ ಸೋಮವಾರವೇ ರುಪಾಯಿ ಬಹಳ ಒತ್ತಡಕ್ಕೆ ಸಿಲುಕಿತ್ತು. ಟ್ರೇಡಿಂಗ್ನ ಒಂದು ಹಂತದಲ್ಲಿ ಅದರ ಮೌಲ್ಯ 89.79ರವರೆಗೂ ಹೋಗಿತ್ತು. ನಂತರ ತುಸು ಚೇತರಿಸಿಕೊಂಡು 89.53ರಲ್ಲಿ ದಿನಾಂತ್ಯಗೊಳಿಸಿತು. ಇವತ್ತು ಬೆಳಗ್ಗೆ 10:45ಕ್ಕೆ ಅದರ ಮೌಲ್ಯ 89.95ರವರೆಗೂ ಕುಸಿದಿದೆ. ಇವತ್ತೇ 90ರ ಗಡಿ ದಾಟಿದರೂ ಅಚ್ಚರಿ ಇರದು.
ಈ ವರ್ಷ ಡಾಲರ್ ಎದುರು ರುಪಾಯಿ ಮೌಲ್ಯ ಶೇ. 4.3ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡಿದೆ. 2025ರಲ್ಲಿ ಏಷ್ಯಾದ ಕರೆನ್ಸಿಗಳ ಪೈಕಿ ಅತ್ಯಂತ ಹೀನಾಯ ಪ್ರದರ್ಶನ ರುಪಾಯಿಯದ್ದು. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಇದ್ದರೂ ಭಾರತದ ಕರೆನ್ಸಿ ಇಷ್ಟು ಹಿನ್ನಡೆ ಕಾಣುತ್ತಿರುವುದಕ್ಕೆ ಕಾರಣಗಳಿವೆ.
ಇದನ್ನೂ ಓದಿ: ಭಾರತದ ಪ್ರಗತಿಯ ಸಂಕೇತಗಳು; 10 ವರ್ಷದಲ್ಲಿ ಹೂಡಿಕೆ, ಎಲ್ಪಿಜಿ ಅನುಭೋಗದಲ್ಲಿ ಸಖತ್ ಹೆಚ್ಚಳ
ಇದನ್ನೂ ಓದಿ: ಜಿಎಸ್ಟಿ ದರ ಕಡಿತದ ಪರಿಣಾಮ, ನವೆಂಬರ್ನಲ್ಲಿ ತೆರಿಗೆ ಸಂಗ್ರಹ ಕುಂಠಿತ
ಭಾರತ ರಫ್ತಿಗಿಂತ ಆಮದು ಹೆಚ್ಚಾಗಿ ಮಾಡಿಕೊಳ್ಳುವುದರಿಂದ ರುಪಾಯಿ ಮೌಲ್ಯ ಕುಸಿತದಿಂದ ಹಿನ್ನಡೆಯೇ ಹೆಚ್ಚು. ಅಮೆರಿಕದ ಜೊತೆ ಭಾರತ ಟ್ರೇಡ್ ಡೀಲ್ ಮಾಡಿಕೊಂಡು, ಟ್ಯಾರಿಫ್ ಅನ್ನು ಗಣನೀಯವಾಗಿ ಕಡಿಮೆ ಮಾಡಿಸಿಕೊಂಡರೆ ರುಪಾಯಿ ಮೌಲ್ಯ ವೃದ್ಧಿಸಬಹುದು. ಅಲ್ಲಿಯವರೆಗೆ ಭಾರತದ ಕರೆನ್ಸಿಯ ಹಿನ್ನಡೆ ಮುಂದುವರಿಯುತ್ತಲೇ ಹೋಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Tue, 2 December 25