Russia Oil To India: ಉಕ್ರೇನ್ ಯುದ್ಧಕ್ಕೂ ಮುಂಚೆ ಇದ್ದ ದರಕ್ಕೆ ಭಾರೀ ರಿಯಾಯಿತಿಯಲ್ಲಿ ಭಾರತಕ್ಕೆ ರಷ್ಯಾ ತೈಲ

| Updated By: Srinivas Mata

Updated on: Mar 31, 2022 | 11:43 AM

ರಷ್ಯಾದಿಂದ ಭಾರತಕ್ಕೆ ಭಾರೀ ರಿಯಾಯಿತಿ ದರದಲ್ಲಿ ತೈಲವನ್ನು ಮಾರಾಟ ಮಾಡಲಾಗುತ್ತಿದೆ. ಒಂದು ಬ್ಯಾರೆಲ್​ಗೆ 35 ಡಾಲರ್​ ರಿಯಾಯಿತಿ. ಆದರೆ ಅದು ಕೂಡ ಇವತ್ತಿನ ದರಕ್ಕೆ ಅಲ್ಲ.

Russia Oil To India: ಉಕ್ರೇನ್ ಯುದ್ಧಕ್ಕೂ ಮುಂಚೆ ಇದ್ದ ದರಕ್ಕೆ ಭಾರೀ ರಿಯಾಯಿತಿಯಲ್ಲಿ ಭಾರತಕ್ಕೆ ರಷ್ಯಾ ತೈಲ
ಸಾಂದರ್ಭಿಕ ಚಿತ್ರ
Follow us on

ರಷ್ಯಾದಿಂದ ಭಾರತಕ್ಕೆ ಭಾರೀ ರಿಯಾಯಿತಿಯಲ್ಲಿ ತೈಲದ (Oil) ಆಫರ್ ನೀಡಲಾಗುತ್ತಿದೆ. ಪ್ರತಿ ಬ್ಯಾರೆಲ್​ಗೆ 35 ಯುಎಸ್​ಡಿಯಷ್ಟು ಭರ್ಜರಿ ರಿಯಾಯಿತಿ. ಇದು ಈಗಿನ ದರದ ಮೇಲಲ್ಲ ಎಂಬುದು ಅಡಿಗೆರೆ ಹಾಕಿ ತಿಳಿಸಬೇಕಾದ ಸಂಗತಿ. ರಷ್ಯಾ- ಉಕ್ರೇನ್ ಯುದ್ಧ ಆರಂಭಕ್ಕೂ ಮುನ್ನ ಇದ್ದಂಥ ಬೆಲೆಯ ಮೇಲಿನ ರಿಯಾಯಿತಿ ಇದು. ಯುರಲ್ಸ್ ಗ್ರೇಡ್​ ಅನ್ನು ರಷ್ಯಾವು ಭಾರತಕ್ಕೆ ಪ್ರತಿ ಬ್ಯಾರೆಲ್​ಗೆ 35 ಯುಎಸ್​ಡಿ ರಿಯಾಯಿತಿಯಲ್ಲಿ ನೀಡುತ್ತಿದೆ ಅಂದರೆ, ಅದರರ್ಥ ನಾನಾ ನಿರ್ಬಂಧಗಳನ್ನು ಹೇರಿರುವ ದೇಶಕ್ಕೆ ಈಗ ಭಾರತವು ಹೆಚ್ಚಿನ ತೈಲ ಆಮದು ಮಾಡಿಕೊಳ್ಳಲಿ ಎಂಬ ಇರಾದೆ ಇದೆ. ಅದರಲ್ಲೂ ರಷ್ಯಾ- ಉಕ್ರೇನ್ ಯುದ್ಧದ ಆರಂಭಕ್ಕೂ ಮುನ್ನ ಇದ್ದ ತೈಲ ದರದ ಮೇಲೆ ನೀಡುತ್ತಿರುವ ರಿಯಾಯಿತಿ ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ.

ಆ ನಂತರದಲ್ಲಿ ಹೆಡ್​ಲೈನ್ ಬ್ರೆಂಟ್ ದರವು 10 ಯುಎಸ್​ಡಿಯಷ್ಟು ಏರಿಕೆ ಆಗಿದ್ದು, ಸದ್ಯದ ಬೆಲೆಗಿಂತ ಭರ್ಜರಿ ರಿಯಾಯಿತಿ ಆಗುತ್ತದೆ. ಭಾರತವು ಈ ವರ್ಷ 15 ಮಿಲಿಯನ್​ ಬ್ಯಾರೆಲ್​ಗಳಷ್ಟು ಖರೀದಿ ಮಾಡಲಿ ಎಂದು ರಷ್ಯಾ ಬಯಸುತ್ತದೆ. ಇದು ಆರಂಭ. ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚೆ ಜಾರಿಯಲ್ಲಿದೆ. ಏಷ್ಯಾದ ಎರಡನೇ ಅತಿದೊಡ್ಡ ತೈಲ ಆಮದುದಾರ ದೇಶ ಭಾರತ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದ ಮೇಲೆ ನಿರ್ಬಂಧ ಹೇರಿರುವ ಹೊರತಾಗಿಯೂ ಆ ದೇಶದ ಕಚ್ಚಾ ತೈಲದ ಖರೀದಿಯನ್ನು ಹೆಚ್ಚು ಮಾಡಿರುವ ಬೆರಳೆಣಿಕೆಯ ದೇಶಗಳಲ್ಲಿ ಭಾರತ ಸಹ ಒಂದು.

ಕಚ್ಚಾ ತೈಲ ಬೆಲೆಯ ಏರಿಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಮೆರಿಕದಲ್ಲಿನ ಬೈಡನ್ ಆಡಳಿತವು ಸ್ಟ್ರಾಟೆಜಿಕ್ ಮೀಸಲಿನಿಂದ ಹಲವು ತಿಂಗಳ ಕಾಲ ದಿನಕ್ಕೆ 1 ಮಿಲಿಯನ್​ ಬ್ಯಾರೆಲ್​ನಷ್ಟು ಬಿಡುಗಡೆ ಮಾಡುವ ಬಗ್ಗೆ ಆಲೋಚಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ತೈಲ ಫ್ಯೂಚರ್ಸ್ ಬ್ಯಾರೆಲ್​ಗೆ 5 ಯುಎಸ್​ಡಿಗೂ ಹೆಚ್ಚು ಇಳಿಕೆ ಕಂಡಿತು. ಬ್ರೆಂಟ್ ಫ್ಯೂಚರ್ಸ್ 4.71 ಯುಎಸ್​ಡಿ ಅಥವಾ ಶೇ 4.2ರಷ್ಟು ಇಳಿದು, ಬ್ಯಾರೆಲ್​ಗೆ 108.58 ಡಾಲರ್​ ಮುಟ್ಟಿತು. ಯುಎಸ್​ ವೆಸ್ಟ್​ ಟೆಕ್ಸಾಸ್ ಇಂಟರ್​ಮೀಡಿಯೆಟ್ ಫ್ಯೂಚರ್ಸ್ 5.45 ಯುಎಸ್​ಡಿ ಅಥವಾ ಶೇ 5ರಷ್ಟು ಕುಸಿದು, 102.74 ಡಾಲರ್ ಪ್ರತಿ ಬ್ಯಾರೆಲ್​ಗೆ ಮುಟ್ಟಿತು.

ಮಾರ್ಚ್ 25ರ ವಾರದಲ್ಲಿ ಅಮೆರಿಕದ ತೈಲ ದಾಸ್ತಾನುಗಳು 3.4 ಮಿಲಿಯನ್ ಬ್ಯಾರೆಲ್‌ಗಳಷ್ಟು ಕುಸಿದಿದ್ದರಿಂದ ಈ ಹೇಳಿಕೆ ಬಿಡುಗಡೆಯಾಗಿದ್ದು, ಇದು 1 ಮಿಲಿಯನ್ ಬ್ಯಾರೆಲ್ ಕುಸಿತದ ಮುನ್ಸೂಚನೆಗಳನ್ನು ಮೀರಿಸಿದೆ. ಆದರೆ ಗ್ಯಾಸೋಲಿನ್ ಮತ್ತು ಡಿಸ್ಟಿಲೇಟ್‌ಗಳ ಬೇಡಿಕೆ ಸಹ ಕುಸಿದಿದೆ.

ಇದನ್ನೂ ಓದಿ: ರಿಯಾಯಿತಿ ಬೆಲೆಯಲ್ಲಿ ರಷ್ಯಾ ತೈಲ ಮಾರಾಟ ಮಾಡಲು ಕಾರಣವೇನು?