
ನವದೆಹಲಿ, ಜೂನ್ 15: ಜಾಗತಿಕವಾಗಿ ಅತಿಹೆಚ್ಚು ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡುವುದರಲ್ಲಿ (smartphone shipping) ಆ್ಯಪಲ್ ನಂಬರ್ ಒನ್ ಸ್ಥಾನ ಬಿಟ್ಟುಕೊಟ್ಟಿದೆ. ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ (ಜನವರಿಯಿಂದ ಮಾರ್ಚ್) ಸ್ಯಾಮ್ಸುಂಗ್ ಮೊಬೈಲ್ಗಳು ಅತಿಹೆಚ್ಚು ಮಾರಾಟವಾಗಿವೆ. ಒಟ್ಟಾರೆ ಸ್ಮಾರ್ಟ್ಫೋನ್ ಮಾರುಕಟ್ಟೆ ಈ ಕ್ವಾರ್ಟರ್ನಲ್ಲಿ ಶೇ. 0.4ರಷ್ಟು ಮಾತ್ರ ಬೆಳವಣಿಗೆ ಹೊಂದಿದೆ. ಇದರಲ್ಲಿ ಆ್ಯಪಲ್ ಹಾಗೂ ಚೀನಾದ ಪ್ರಮುಖ ಸ್ಮಾರ್ಟ್ಫೋನ್ ಕಂಪನಿಗಳ ಬ್ಯುಸಿನೆಸ್ ಅನ್ನು ಸ್ಯಾಮ್ಸುಂಗ್ ಹಿಂದಿಕ್ಕಿ, ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.
ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಶನ್ ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶದ ಪ್ರಕಾರ ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಾಗತಿಕವಾಗಿ 301.4 ಮಿಲಿಯನ್ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಸರಬರಾಜಾಗಿವೆ. ಆಮದು ತೆರಿಗೆ ವೈಪರೀತ್ಯ, ಜಾಗತಿಕ ರಾಜಕೀಯ ಅನಿಶ್ಚಿತತೆ ಕಾರಣದಿಂದ ಈ ಮೂರು ತಿಂಗಳು ಸ್ಮಾರ್ಟ್ಫೋನ್ ಮಾರುಕಟ್ಟೆ ಮಂದ ಬೆಳವಣಿಗೆ ಹೊಂದಲು ಕಾರಣ ಎನ್ನಲಾಗಿದೆ.
ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸುಂಗ್ ಸಂಸ್ಥೆ ಈ ಮೊದಲ ಕ್ವಾರ್ಟರ್ನಲ್ಲಿ 60.6 ಮಿಲಿಯನ್ ಯುನಿಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ಗೆ ಹೋಲಿಸಿದರೆ ಶೇ. 0.6ರಷ್ಟು ಮಾತ್ರವೇ ಹೆಚ್ಚಳ ಆಗಿರುವುದು. ಆದರೆ, ಒಟ್ಟಾರೆ ಸ್ಮಾರ್ಟ್ಫೋನ್ ಮಾರುಕಟ್ಟೆ ಗಳಿಸಿರುವ ಶೇ. 0.4ರಷ್ಟು ಹೆಚ್ಚಳಕ್ಕೆ ಹೋಲಿಸಿದರೆ ಸ್ಯಾಮ್ಸುಂಗ್ ಹೆಚ್ಚಿನ ಬೆಳವಣಿಗೆ ತೋರಿದೆ.
ಇದನ್ನೂ ಓದಿ: ವಿರಳ ಭೂಖನಿಜಗಳ ರಫ್ತು: ಜಪಾನ್ ಜೊತೆಗೆ ಒಪ್ಪಂದ ರದ್ದುಗೊಳಿಸಲು ಭಾರತ ಮುಂದು; ಕಾರಣ ಏನು?
ಸ್ಯಾಮ್ಸುಂಗ್ ತನ್ನ ಉತ್ಪನ್ನಗಳಲ್ಲಿ ಎಐ ಅನ್ನು ಅಳವಡಿಸಿದೆ. ಅಧಿಕ ಬೆಲೆ ಮಟ್ಟದ ಪ್ರೀಮಿಯಮ್ ಪ್ರಾಡಕ್ಟ್ಸ್ ಮಾತ್ರವಲ್ಲ ತನ್ನ ಮಧ್ಯಮ ಶ್ರೇಣಿಯ ಉತ್ಪನ್ನಗಳಿಗೂ ಅದು ಎಐ ಪರಿಕರಗಳನ್ನು ಅಳವಡಿಸಿದೆ. ಇದರಿಂದ ಕಡಿಮೆ ಬೆಲೆಗೆ ಗ್ರಾಹಕರಿಗೆ ಉತ್ಕೃಷ್ಟ ಸ್ಯಾಮ್ಸುಂಗ್ ಸ್ಮಾರ್ಟ್ಫೋನ್ಗಳ ಲಭ್ಯತೆ ಸಿಕ್ಕಂತಾಗಿದೆ. ಇದು ಸ್ಪರ್ಧಾತ್ಮಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸುಂಗ್ ಮುಂಚೂಣಿಯಲ್ಲಿ ಇರಲು ಸಾಧ್ಯವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ