AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ

Dassault Aviation CEO Eric Trappier speaks on Rafale Jets: ಆಪರೇಷನ್ ಸಿಂದೂರ್ ವೇಳೆ ಭಾರತದ 3 ರಫೇಲ್ ಸೇರಿದಂತೆ ಐದು ಜೆಟ್​​ಗಳನ್ನು ಹೊಡೆದಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, 3 ರಫೇಲ್​​ಗಳನ್ನು ಹೊಡೆದಿರುವುದೆಲ್ಲಾ ಸುಳ್ಳು ಎಂದು ರಫೇಲ್ ತಯಾರಕ ಡಸ್ಸೋ ಏವಿಯೇಶನ್ ಸಂಸ್ಥೆ ಸಿಇಒ ಹೇಳಿದ್ದಾರೆ.. ವಾಸ್ತವ ಸಂಗತಿ ಹೊರಬಂದರೆ ಹಲವರಿಗೆ ಅಚ್ಚರಿ ಎನಿಸುತ್ತದೆ ಎಂದು ಎರಿಕ್ ಟ್ರ್ಯಾಪಿಯರ್ ತಿಳಿಸಿದ್ದಾರೆ.

ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ
ಎರಿಕ್ ಟ್ರ್ಯಾಪಿಯರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 15, 2025 | 3:23 PM

Share

ನವದೆಹಲಿ, ಜೂನ್ 15: ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ನಡೆದ ಸಂಘರ್ಷದಲ್ಲಿ (Operation Sindoor) ಭಾರತದ ಮೂರು ರಫೇಲ್ ಜೆಟ್​​ಗಳನ್ನು ಹೊಡೆದುಹಾಕಿದ್ದೇವೆ ಎಂದು ಹೇಳಿಕೊಂಡು ಬೀಗುತ್ತಿರುವ ಪಾಕಿಸ್ತಾನಕ್ಕೆ ರಫೇಲ್ ತಯಾರಕ ಡಸ್ಸೋ ಏವಿಯೇಶನ್ ಸಿಇಒ ಎರಿಕ್ ಟ್ರ್ಯಾಪಿಯರ್ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನ ಹೇಳುತ್ತಿರುವುದು ವಾಸ್ತವಕ್ಕೆ ದೂರವಾಗಿದೆ ಎಂದಿದ್ದಾರೆ. ಐರೋಪ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎರಿಕ್ ಟ್ರ್ಯಾಪಿಯರ್ ಅವರು ರಫೇಲ್ ಬಗ್ಗೆ ಮಾತನಾಡಿ, ಪಾಕಿಸ್ತಾನದ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂದೂರ ನಡೆಸಿ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣಗಳನ್ನು ನಾಶ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಕಾರ್ಯಾಚರಣೆ ನಡೆಸಿತು. ಈ ಸಂಘರ್ಷದಲ್ಲಿ ಮೂರು ರಫೇಲ್ ಸೇರಿದಂತೆ ಭಾರತದ ಐದು ಜೆಟ್​​ಗಳನ್ನು ಹೊಡೆದುಹಾಕಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ.

ಇದನ್ನೂ ಓದಿ: ಕೇರಳದಲ್ಲಿ ಬ್ರಿಟಿಷ್ ಫೈಟರ್ ಜೆಟ್ ತುರ್ತು ಭೂಸ್ಪರ್ಶ

ಈ ಬಗ್ಗೆ ಭಾರತೀಯ ಸೇನೆ ನಿಖರ ದತ್ತಾಂಶ ಒದಗಿಸಿಲ್ಲ. ಹಾನಿಯಾಗಿರುವುದು ಹೌದು. ಆದರೆ, ಪಾಕಿಸ್ತಾನ ಹೇಳಿಕೊಂಡಂತೆ ಐದು ಜೆಟ್​​ಗಳು ಪತನಗೊಂಡಿರುವುದು ನಿಜವಲ್ಲ ಎಂದು ವಾಯು ಸೇನೆ ಮುಖ್ಯಸ್ಥರು ಹೇಳಿದ್ದರು. ಆದರೆ, ರಫೇಲ್ ಹೆಸರನ್ನು ಪ್ರಸ್ತಾಪ ಮಾಡಿಲ್ಲ.

ನಿಜ ಹೊರಬಂದರೆ ಅಚ್ಚರಿಯಾಗಬಹುದು: ಎರಿಕ್

ಯುದ್ಧದಲ್ಲಿ ಜೆಟ್​​ಗಳನ್ನು ಕಳೆದುಕೊಂಡಿರಬಹುದು. ಆದರೆ, ಗುರಿಯಲ್ಲಿ ಗೆದ್ದಿದ್ದೇವಾ ಎನ್ನುವುದು ಮುಖ್ಯ ಎಂದ ಭಾರತೀಯ ಮಿಲಿಟರಿಯ ಅಭಿಪ್ರಾಯವನ್ನು ಎರಿಕ್ ಟ್ರ್ಯಾಪಿಯರ್ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ವಿರಳ ಭೂಖನಿಜಗಳ ರಫ್ತು: ಜಪಾನ್ ಜೊತೆಗೆ ಒಪ್ಪಂದ ರದ್ದುಗೊಳಿಸಲು ಭಾರತ ಮುಂದು; ಕಾರಣ ಏನು?

‘ಮೂರು ರಫೇಲ್​ಗಳನ್ನು ಹೊಡೆದುಹಾಕಲಾಗಿದೆ ಎನ್ನುವುದು ಸತ್ಯವಲ್ಲ. ಸಂಪೂರ್ಣ ಮಾಹಿತಿ ಹೊರಬಂದರೆ ಹಲವರಿಗೆ ಅದು ಅಚ್ಚರಿ ಎನಿಸಬಹುದು. ಚಕಮಕಿಯಲ್ಲಿ ಯಶಸ್ಸು ಪಡೆಯುವುದೆಂದರೆ ಯಾವುದೇ ಹಾನಿಯಾಗಬಾರದು ಎಂದಲ್ಲ, ಆದರೆ, ಉದ್ದೇಶ ಈಡೇರಿದೆಯಾ ಎನ್ನುವುದು ಮುಖ್ಯ’ ಎಂದು ಡಸ್ಸೋ ಏವಿಯೇಶನ್ ಸಿಇಒ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!