SBI Profit: ಎಸ್​ಬಿಐ ಸಖತ್ ಲಾಭ; ಷೇರುದಾರರಿಗೆ ಡಿವಿಡೆಂಡ್ ಸುಗ್ಗಿ; ಐಟಿಸಿ, ಗೇಲ್ ಲಾಭ ಎಷ್ಟಿದೆ ನೋಡಿ?

|

Updated on: May 18, 2023 | 4:54 PM

SBI, ITC Show Big Profits: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2023ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್ ಅವಧಿಯಲ್ಲಿ ಶೇ. 89ಕ್ಕಿಂತ ಹೆಚ್ಚು ಲಾಭ ಹೆಚ್ಚಳ ಕಂಡಿದೆ. ಐಟಿಸಿ ಲಾಭದಲ್ಲೂ ಶೇ. 23ರಷ್ಟು ಹೆಚ್ಚಳವಾಗಿದೆ. ಎಸ್​ಬಿಐ ತನ್ನ ಷೇರುದಾರರಿಗೆ 11.30 ರೂಗಳ ಡಿವಿಡೆಂಡ್ ಘೋಷಿಸಿದೆ.

SBI Profit: ಎಸ್​ಬಿಐ ಸಖತ್ ಲಾಭ; ಷೇರುದಾರರಿಗೆ ಡಿವಿಡೆಂಡ್ ಸುಗ್ಗಿ; ಐಟಿಸಿ, ಗೇಲ್ ಲಾಭ ಎಷ್ಟಿದೆ ನೋಡಿ?
ಎಸ್​ಬಿಐ
Follow us on

ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್​ಬಿಐ (SBI- State Bank of India) ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬರೋಬ್ಬರಿ 16,694.51 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ. 2022ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಗಳಿಸಿದ್ದ 18,094 ಕೋಟಿ ರೂಗೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭದಲ್ಲಿ ಶೇ. 89.4ರಷ್ಟು ಹೆಚ್ಚಾಗಿದೆ. ಬಡ್ಡಿ ಮೂಲಕ ಗಳಿಸಿದ ಆದಾಯದಲ್ಲೂ ಶೇ. 31.4ರಷ್ಟು ಹೆಚ್ಚಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭರ್ಜರಿ ಲಾಭದ ಹಿನ್ನೆಲೆಯಲ್ಲಿ ಬ್ಯಾಂಕ್​ನ ಷೇರುದಾರರಿಗೆ ಭರ್ಜರಿ ಕೊಡುಗೆ ನೀಡಿದೆ. ಪ್ರತೀ ಈಕ್ವಿಟಿ ಷೇರಿಗೆ 11.30 ರೂ ಡಿವಿಡೆಂಡ್ ನೀಡಲು ಎಸ್​ಬಿಐನ ನಿರ್ದೇಶಕರ ಮಂಡಳಿ ನಿರ್ದರಿಸಿದೆ. 2023 ಜೂನ್ 14ಕ್ಕೆ ಲಾಭಾಂಶ ನೀಡಲು ದಿನ ಫಿಕ್ಸ್ ಮಾಡಲಾಗಿದೆ.

ಎಸ್​ಬಿಐ ಲಾಭ ಹೆಚ್ಚಾದರೂ ಷೇರುಬೆಲೆ ಕುಸಿತ

ಅಚ್ಚರಿಯ ಬೆಳವಣಿಗೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೆಡೆ ಅಭೂತಪೂರ್ವ ಲಾಭ ಗಳಿಸಿದರೆ, ಇನ್ನೊಂದೆಡೆ ಅದರ ಷೇರುಬೆಲೆ ಕುಸಿತ ಕಾಣುತ್ತಿದೆ. ಬಿಎಸ್​ಇ ಸೆನ್ಸೆಕ್ಸ್​ನಲ್ಲಿ ಎಸ್​ಬಿಐನ ಷೇರುಬೆಲೆ ಹೆಚ್ಚೂಕಡಿಮೆ 10 ರುಪಾಯಿಯಷ್ಟು ಕುಸಿತ ಕಂಡಿದೆ. ಮೇ 18, ಗುರುವಾರ ಮಧ್ಯಾಹ್ನ ಎಸ್​ಬಿಐ ಒಂದು ಷೇರಿಗೆ 576 ರೂ ಬೆಲೆಗೆ ಮಾರಾಟವಾಗುತ್ತಿತ್ತು. ಈ ಅನಿರೀಕ್ಷಿತ ಕುಸಿತಕ್ಕೆ ಕಾರಣ ಗೊತ್ತಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಎಸ್​ಬಿಐನ ಷೇರುಗಳಿಗೆ ಒಳ್ಳೆಯ ಬೇಡಿಕೆ ಬರುವ ಸಾಧ್ಯತೆ ಇದೆ. ಹಲವು ಬ್ರೋಕರೇಜ್ ಕಂಪನಿಗಳು ಎಸ್​ಬಿಐನ ಷೇರಿಗೆ ಉತ್ತಮ ರೇಟಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿInsurance Bonus: ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್​ನಿಂದ ದಾಖಲೆ ಬೋನಸ್: 3,660 ಕೋಟಿ ರೂ ಘೋಷಣೆ; ಯಾರಿಗೆಲ್ಲಾ ಸಿಗುತ್ತೆ ಈ ಬೋನಸ್?

ಐಟಿಸಿ ನಿವ್ವಳ ಆದಾಯ ಶೇ. 23 ರಷ್ಟು ಏರಿಕೆ

ಐಟಿಸಿ ಸಂಸ್ಥೆ 2023ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ 5,175.48 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಅದು ಶೇ. 23.3ರಷ್ಟು ಹೆಚ್ಚು ಲಾಭ ತೋರಿಸಿದೆ. ಇದೂ ಕೂಡ 6.75 ರೂಗಳ ಫೈನಲ್ ಡಿವಿಡೆಂಡ್ ಹಾಗು 2.75 ರೂಗಳ ಸ್ಪೆಷಲ್ ಡಿವಿಡೆಂಡ್ ಘೋಷಿಸಿದೆ. 2022-23ರ ಹಣಕಾಸು ವರ್ಷದಲ್ಲಿ ಐಟಿಸಿಯ ಷೇರಿಗೆ ಸಿಕ್ಕಿರುವ ಒಟ್ಟಾರೆ ಡಿವಿಡೆಂಡ್ 15.50 ರೂ ಆಗುತ್ತದೆ. ಈಗ ಘೋಷಣೆ ಮಾಡಿರುವ 6.75 ರೂ ಮತ್ತು 2.75 ರೂ ಲಾಭಾಂಶವನ್ನು ಆಗಸ್ಟ್ 14ರಿಂದ 17ರವರೆಗೆ ಷೇರುದಾರರಿಗೆ ನೀಡಲಾಗುತ್ತದೆ.

ಇದನ್ನೂ ಓದಿSuper Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್

ಗೇಲ್ ಇಂಡಿಯಾ (GAIL India) ಲಾಭದಲ್ಲಿ ಇಳಿಕೆ

ಭಾರತದ ಅತಿದೊಡ್ಡ ಗ್ಯಾಸ್ ಡಿಸ್ಟ್ರಿಬ್ಯೂಟರ್ ಕಂಪನಿ ಗೇಲ್ ಇಂಡಿಯಾದ (Gail India) ಲಾಭ ಮಾರ್ಚ್ ಅಂತ್ಯದ ಕ್ವಾರ್ಟರ್​ನಲ್ಲಿ ಕಡಿಮೆ ಆಗಿದೆ. 2022ರ ಇದೇ ಅವಧಿಯಲ್ಲಿ 2,683 ಕೋಟಿ ರೂ ಇದ್ದ ಜಿಎಐಎಲ್​ನ ನಿವ್ವಳ ಲಾಭ 2023ರ ಈ ಅವಧಿಯಲ್ಲಿ 604 ರುಪಾಯಿಗೆ ಇಳಿದಿದೆ. ಇದರ ನಿವ್ವಳ ಲಾಭ ಶೇ. 77ರಷ್ಟು ಕುಸಿತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ