ಎಸ್​ಬಿಐನಿಂದ ನಡೆಯಲಿದೆ 12,000 ಹುದ್ದೆಗಳ ನೇಮಕಾತಿ; ಎಂಜಿನಿಯರಿಂಗ್ ಮಾಡಿದ್ದರೆ ಸುವರ್ಣಾವಕಾಶ

|

Updated on: May 12, 2024 | 7:26 PM

SBI recruitment 2024-25: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿದ ಎಸ್​ಬಿಐ ಈ ಹಣಕಾಸು ವರ್ಷದಲ್ಲಿ 12,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಇದರಲ್ಲಿ ಶೇ. 85ರಷ್ಟು ಎಂಜಿನಿಯರುಗಳಿಗೆ ಆದ್ಯತೆ ಇರಲಿದೆ. ಅಂದರೆ, 10,000 ಹುದ್ದೆಗಳಿಗೆ ಎಂಜಿನಿಯರುಗಳನ್ನು ರೆಕ್ರೂಟ್ ಮಾಡಿಕೊಳ್ಳಲಿದೆ ಎಸ್​ಬಿಐ. ಬ್ಯಾಂಕಿಂಗ್​ನಲ್ಲಿ ತಂತ್ರಜ್ಞಾನ ನಿರ್ವಹಣೆಯನ್ನು ಹೆಚ್ಚು ಸಮರ್ಪಕಗೊಳಿಸಲು ಈ ಯೋಜನೆ ಮಾಡಲಾಗಿದೆ.

ಎಸ್​ಬಿಐನಿಂದ ನಡೆಯಲಿದೆ 12,000 ಹುದ್ದೆಗಳ ನೇಮಕಾತಿ; ಎಂಜಿನಿಯರಿಂಗ್ ಮಾಡಿದ್ದರೆ ಸುವರ್ಣಾವಕಾಶ
ಎಸ್​ಬಿಐ
Follow us on

ನವದೆಹಲಿ, ಮೇ 12: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2024-25ರ ಹಣಕಾಸು ವರ್ಷದಲ್ಲಿ 12,000 ಮಂದಿ ಹೊಸ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದೆ. ಪ್ರೊಬೇಶನರಿ ಆಫೀಸರ್ಸ್ (Probationary Officers) ಮತ್ತು ಅಸೋಸಿಯೇಟ್ಸ್​ಗಳಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳಿಗೆ ಎಂಜಿನಿಯರಿಂಗ್ ಪದವೀಧರರನ್ನು ಸೇರಿಸಿಕೊಳ್ಳಲಾಗಲಿದೆ. ಎಸ್​ಬಿಐ ಛೇರ್ಮನ್ ದಿನೇಶ್ ಖರ (Dinesh Khara) ನೀಡಿದ ಮಾಹಿತಿ ಪ್ರಕಾರ ನೇಮಕಾತಿ ಆಗುವ ಶೇ. 85ರಷ್ಟು ಹುದ್ದೆಗಳಿಗೆ ಎಂಜಿನಿಯರ್​ಗಳ ನೇಮಕಾತಿ ಆಗಲಿದೆ. ಡಿಜಿಟಲ್ ವಿಭಾಗದಲ್ಲಿ ಸರಿಯಾದ ರೀತಿಯಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಇಲ್ಲದಿರುವ ಕಾರಣವೊಡ್ಡಿ ಆರ್​ಬಿಐ ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ಹೇರಿದ ಕ್ರಮ ಇತ್ತೀಚೆಗಷ್ಟೇ ನಡೆದಿದೆ. ಕೋಟಕ್ ಮಾತ್ರವಲ್ಲ, ಭಾರತದ ಹೆಚ್ಚಿನ ಬ್ಯಾಂಕುಗಳಲ್ಲಿ ಇನ್ನೂ ಹಳೆಯ ತಂತ್ರಜ್ಞಾನವೇ ಚಾಲ್ತಿಯಲ್ಲಿದೆ. ಒಂದೊಂದಾಗಿ ಬ್ಯಾಂಕುಗಳ ಮೇಲೆ ಆರ್​ಬಿಐ ಕ್ರಮ ಜರುಗಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಸ್​ಬಿಐ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳಲು ಹೊರಟಿರಬಹುದು.

ವರದಿಗಳ ಪ್ರಕಾರ ಎಸ್​ಬಿಐ ಸಾಕಷ್ಟು ದೊಡ್ಡ ಮಟ್ಟದಲ್ಲಿ ತಂತ್ರಜ್ಞಾನಕ್ಕೆ ವ್ಯಯಿಸಲು ಹೊರಟಿದೆ. ಸದ್ಯ ಭಾರತದ ಬ್ಯಾಂಕಿಂಗ್ ವಲಯದಲ್ಲಿ ತಂತ್ರಜ್ಞಾನ ನಿರ್ವಹಣಾ ವೆಚ್ಚ ಒಟ್ಟು ಬಜೆಟ್​ನಲ್ಲಿ ಸರಾಸರಿ ಶೇ. 7ರಿಂದ 8ರಷ್ಟಿದೆ. ಎಸ್​ಬಿಐ ಇದಕ್ಕಿಂತ ಬಹಳ ಹೆಚ್ಚಿನ ಮಟ್ಟದಲ್ಲಿ ತಂತ್ರಜ್ಞಾನಕ್ಕಾಗಿ ವ್ಯಯಿಸಲಿದೆ ಎನ್ನುವ ಮಾಹಿತಿಯನ್ನು ಎಸ್​ಬಿಐ ಛೇರ್ಮನ್ ನೀಡಿದ್ದಾರೆ.

ಇದನ್ನೂ ಓದಿ: Google Jobs: ಅಮೆರಿಕದಲ್ಲಿ ಲೇ ಆಫ್ ಮಾಡಿದರೂ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದ ಗೂಗಲ್

ಎಂಜಿನಿಯರ್​ಗಳನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ತಂದು ಏನು ಮಾಡುತ್ತದೆ ಎಸ್​ಬಿಐ?

ಸದ್ಯ ಬ್ಯಾಂಕಿಂಗ್ ಜ್ಞಾನ ಇರುವಂತಹ ಎಂಜಿನಿಯರುಗಳಿಗೆ ಎಸ್​ಬಿಐ ನೇಮಕಾತಿಯಲ್ಲಿ ಆದ್ಯತೆ ಸಿಗಲಿದೆ. 3,000 ಪ್ರೊಬೇಶನರಿ ಆಫೀಸರ್​ಗಳು ಹಾಗೂ 8,000 ಅಸೋಸಿಯೇಟ್​ಗಳ ಹುದ್ದೆಗೆ ನೇಮಕವಾಗುವ ಎಂಜಿನಿಯರುಗಳಿಗೆ ಆರಂಭಿಕ ತರಬೇತಿ ನೀಡಿ, ವಿವಿಧ ಬಿಸಿನೆಸ್ ಜವಾಬ್ದಾರಿಗಳಿಗೆ ನಿಯೋಜಿಸಲಾಗಲಿದೆ.

ತಾಂತ್ರಿಕವಾಗಿ ಪಳಗಿರುವ ಎಂಜಿನಿಯರುಗಳನ್ನು ಐಟಿ ಮತ್ತು ಬಿಸಿನೆಸ್ ರೋಲ್​ಗಳಿಗೆ ಹಾಕಿದರೆ ಗ್ರಾಹಕರೊಂದಿಗಿನ ವ್ಯವಹಾರ ಸಮರ್ಪಕವಾಗಿ ನಡೆಯಬಹುದು ಎನ್ನುವುದು ಎಸ್​ಬಿಐನ ಎಣಿಕೆ.

ಇದನ್ನೂ ಓದಿ: KPSC PDO Recruitment 2024: 247 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳು -ಅರ್ಹತೆ ವಿವರ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

‘ನಾವು ಅವರನ್ನು ಮೊದಲು ಬ್ಯಾಂಕಿಂಗ್​ಗೆ ಹಾಕುತ್ತೇವೆ. ಬಳಿಕ ಅವರ ಅಭಿರುಚಿ, ಸಾಮರ್ಥ್ಯ ಇತ್ಯಾದಿ ಆಧಾರದ ಮೇಲೆ ಐಟಿ ಅಥವಾ ಬಿಸಿನೆಸ್ ಜವಾಬ್ದಾರಿಗಳಿಗೆ ನಿಯೋಜಿಸಲಾಗುವುದು. ಇದರಿಂದ ತಂತ್ರಜ್ಞಾನ ಅರಿವು ಇರುವ ಮಾನವ ಸಂಪನ್ಮೂಲದ ನಿರಂತರ ಲಭ್ಯತೆ ಇದ್ದಂತಾಗುತ್ತದೆ ಎಂದು ಎಸ್​ಬಿಐ ಮುಖ್ಯಸ್ಥರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ